Monday, November 23, 2026

ಪ್ರಾಯೋಗಿಕ ಆವೃತ್ತಿ

ಬಾಗೀನ ಸಮರ್ಪಣೆ ಚಳವಳಿಯ ಪ್ರೇರಕಶಕ್ತಿಯ ಸಂಕೇತ: ರಮೇಶ್ ಗೌಡ

ವರದಿ: ನ.ಲಿ. ಕೃಷ್ಣ


  • ಬರ ಹಾಗು ಕೆ. ಆರ್. ಸಾಗರದ ನೀರಿನ ಕೊರತೆ ನಡುವೆ ಸತತ 34 ದಿನ ನಡೆದ ಚಳವಳಿ ಇತಿಹಾಸ
  • ಹೊನ್ನಮ್ಮದೇವಿ ಸ್ಮರಣೆ ಮತ್ತು ಚಳವಳಿಗೆ ಶ್ರಮಿಸಿದವರಿಗೆ ಅಭಿನಂದನೆ ಕಾರ್ಯಕ್ರಮ 
  • ಕೆರೆಯ ಉಳಿವಿಗಾಗಿ ತ್ಯಾಗ ಬಲಿದಾನಗೈದ ತಾಯಿ ಹೊನಮ್ಮದೇವಿ ಹೆಸರು ಚಿರಸ್ಥಾಯಿ

ಬರ ಹಾಗು ಕೆ. ಆರ್. ಸಾಗರದ ನೀರಿನ ಕೊರತೆ ನಡುವೆ ಸತತ 34 ದಿನ ನಡೆದ ಚಳವಳಿ ಮದ್ದೂರು ಕೆರೆ ಸೇರಿ ಸೇರಿ ವಿ ಸಿ ನಾಲೆ ವ್ಯಾಪ್ತಿಯ ಎಲ್ಲಾ ಕೆರೆಗೆ ನೀರು ತುಂಬಿಸಲು ಯಶಸ್ವಿಯಾಗಿದ್ದು ಇತಿಹಾಸ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಬಣ್ಣಿಸಿದರು.

ಮದ್ದೂರು ಕೆರೆಗೆ ಬಾಗಿನ ಸಮರ್ಪಣೆ ಕೆರೆಗೆ ಬಲಿದಾನಗೈದ ಹೊನ್ನಮ್ಮದೇವಿ ಸ್ಮರಣೆ ಮತ್ತು ಚಳವಳಿಗೆ ಶ್ರಮಿಸಿದವರಿಗೆ ಅಭಿನಂದನೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಸತತ ಐದು ವರ್ಷಗಳಿಂದ ಮದ್ದೂರು ಕೆರೆಗೆ ಬಾಗೀನ ಸಮರ್ಪಣೆ ಕಾರ್ಯಕ್ರಮ ಹಮ್ಮಿಕ್ಕೊಂಡುಬರಲಾಗುತ್ತಿದೆ.

ಈ ಕಾರ್ಯಕ್ರಮದ ಉದ್ದೇಶ ಚಳವಳಿಗಾರರನ್ನ ಉಮೇದುಗೊಳಿಸುವುದೆ ಆಗಿದೆ ಎಂದರು. ಬರ ಹಾಗು ನೀರಿನ ಕೊರತೆ ನಡುವೆ ನಿರಂತರ ಚಳವಳಿ ನಡೆಸಿ ಯಶಸ್ಸು ಸಾಧಿಸಿದ ಮಾದರಿ ಯುವ ಚಳವಳಿಗಾರರಿಗರ ಪ್ರೇರಣೆ ಆಗಬೇಕೆಂಬುದೆ ನನ್ನ ಮನದಾಸೆ ಎಂದರು.

ಚಳವಳಿ ಸಂದರ್ಭದಲ್ಲಿ ವಳಗೆರೆಹಳ್ಳಿ ದೇಶಹಳ್ಳಿ ಹಾಗು ಕೆರೆಯ ಅಚ್ಚುಕಟ್ಟು ದಾರರು ನೀಡಿದ ಬೆಂಬಲ ಚಳವಳಿಯ ಯಶಸ್ಸಿಗೆ ಕಾರಣ ಎಂದರು.

ದೇಶ ಭಾಷೆ ನೆಲ ಜಲದ ಉಳಿವಿಗೆ ಚಳವಳಿ ಅಗತ್ಯ: ಕದಲೂರು ಉದಯ್
ಚಳವಳಿಯ ದೆಸೆಯಿಂದಾಗಿ ನಾವೆಲ್ಲಾರು ಸ್ವತಂತ್ರರಾಗಿ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಸಮಾಜ ಸೇವಕರು ಆದ ಕದಲೂರು ಉದಯ್ ಅಭಿಪ್ರಾಯಪಟ್ಟರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮದ್ದೂರಮ್ಮನ ಕೆರೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ದೇಶ ಬಾಷೆ ನೆಲ ಜಲ ದ ಉಳಿವಿನಲ್ಲಿ ಚಳವಳಿಯ ಪಾತ್ರ ಹಿರಿದು, ಚಳವಳಿಯ ಕಾರಣದಿಂದ ರೈತರು ದೀನ ದಲಿತರಿಗೆ ಕನಿಷ್ಠ ಪ್ರಮಾಣದಲ್ಲಾದರು ನ್ಯಾಯದಕ್ಕುತಿದೆ ಎಂದರು.

ಮದ್ದೂರು ಕೆರೆಗೆ ಬರದ ಸಮಯದಲ್ಲೂ ನೀರು ಹರಿಸಲು ಚಳವಳಿ ನೆರವಾದ ಬಗೆ ಸ್ಮರಣೀಯಾ ಎಂದರು. ಕೆರೆಯ ಉಳಿವಿಗಾಗಿ ತ್ಯಾಗ ಬಲಿದಾನಗೈದ ತಾಯಿ ಹೊನಮ್ಮದೇವಿ ಹೆಸರು ಚಿರಸ್ಥಾಯಿಯಾಗಿದೆ ಎಂದರು.

ಕೆರೆಗಳು ಸಮೃದ್ದಿಯ ಸೂಚಕ ಕೆರೆಗಳ ಭರ್ತಿಗೆ ಶ್ರಮಿಸಿ :ಒಕ್ಕಲಿಗ ಮುದ್ದಣ್ಣಸ್ವಾಮಿಜೀ

ಕೆರೆಗಳು ಸಮೃದ್ದತೆಯ ಸೂಚಕವಾಗಿವೆ ಕೆರೆ ತುಂಬಿ ದರೆ ನಾಡುಸಮೃದ್ದವಾಗಲಿದೆ ಎಂದು ಒಕ್ಕಲಿಗ ಮುದ್ದಣ ಸ್ವಾಮಿಜೀ ತಿಳಿಸಿದರು.

ಕೆರೆ ಕಟ್ಟೆಗಳ ನಿರ್ಮಾಣಕ್ಕಾಗಿ ಹಲವರ ತ್ಯಾಗ ಬಲಿದಾನವಾಗಿದೆ ಹಾಗೇಯೆ ಮಾತೆ ಹೊನ್ನಮ್ಮ ದೇವಿ ಮದ್ದೂರು ಕೆರೆಯ ನಿರ್ಮಾಣ ವೇಳೆ ಜೀವಂತ ಸಮಾಧಿಯಾಗಿದ್ದಾರೆ. ಅವರ ಆತ್ಮ ಕೆರೆಯ ಸಮೃದ್ದತೆ ಕಂಡು ಆನಂದಿಸುತ್ತದೆ ಎಂದರು.

ಇಲ್ಲಿನ ಜನ ಹೊನ್ನಮ್ಮ ದೇವಿಯವರನ್ನು ಸದಾ ಪೂಜಿಸಿ ಸ್ಮರಿಸುತ್ತಾರೆ ಇಂತಹ ಸ್ಮರಣೆ ತ್ಯಾಗ ಬಲಿದಾನ ದೊರಕಿಸಿಕೊಡಲಿವೆ ಎಂದ ಅವರು ಇಂದಿಗೂ ಬರಿದಾಗಿರುವಾ ಬೃಹತ್ ಕೆರೆಗಳಿಗೆ ನೀರು ತುಂಬಿ ಜೀವಕಳೆ ಬರುವಂತಾಗಲು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಶ್ರಮಿಸಲಿ ಎಂದು ಸಲಹೆ ನೀಡಿದರು.

ಅಭಿಮಾನದ ನುಡಿಯಲ್ಲಿ ಮಿಂದೆದ್ದ : ರಮೇಶ್ ಗೌಡ

ಮದ್ದೂರು ಕೆರೆ ಬರಿದಾಗಿದ್ದಾಗ ಸ್ಥಳಿಯಾ ಜನರ ಆಹ್ವಾನದ ಮೇರೆಗೆ ಕೆರೆ ಅಂಗಳಕ್ಕೆ ಬಂದು ಚಳವಳಿ ರೂಪಿಸಿ 34 ದಿನಗಳ ಕಾಲ ವಿಬಿನ್ನವಾಗಿ ಚಳವಳಿ ಮುನ್ನಡೆಸಿ ರಾಜ್ಯದ ಜನರ ಗಮನ ಸೆಳೆದು ಬರದ ನಡುವೆ ತಳಹಂತಕ್ಕೆ ಕುಸಿದಿದ್ದರು, ಕೆ ಆರ್ ಎಸ್ ನಿಂದ ನೀರು ಬಿಡಿಸುವಲ್ಲಿ ಯಶಸ್ವಿಯಾಗಿ, ಅದಕ್ಕಾಗಿ ಬದ್ದತೆ ತೋರಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಧ್ಯಕ್ಷರ ಸಾಧನೆ ಬಣ್ಣಿಸಿ, ಕರ್ನಾಟಕ ರಾಜ್ಯ ರೈತ ಸಂಘ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಗ್ರಾ ಪಂ ಸದಸ್ಯರ ಒಕ್ಕೂಟ ಹಾಗು ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಮದ್ದೂರು ಕೆರೆ ಅಚ್ಚುಕಟ್ಟುದಾರರು ಶ್ಲಾಘಿಸಿ ಅಭಿನಂದನಾ ನುಡಿಗಳಗನ್ನಾಡಿ ಗೌಡರನ್ನು ಅಭಿನಂದಿಸಿದರು.

ಅಭಿನಂದನೆಯ ಮಹಾಪೂರದಲ್ಲಿ ಮಿಂದೆದ್ದ ರಮೇಶ್ ಗೌಡ ಅವರು ಚಳವಳಿಯ ಮುಂಚೂಣಿಯಲ್ಲಿ ನಾನು ಇದ್ದೆನಾದರು ಚಳವಳಿಗೆ ಶಕ್ತಿತುಂಬಿದ್ದು ನೀವುಗಳು ಎಂದು ಹೇಳಿ ವೀನಿತಭಾವ ಮೆರೆದರು.

ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಸಮಾಜಸೇವಕ ಕದಲೂರು ಉದಯ್ ನೆರವೇರಿಸಿದರು, ರಾಜ್ಯಾಧ್ಯಕ್ಷ ರಮೇಶ್ ಗೌಡ. ಜಿಲ್ಲಾಧ್ಯಕ್ಷ ವಿಸಿ ಉಮಾಶಂಕರ್, ರಾಮನಗರ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ಒಕ್ಕಲಿಗ ಮುದ್ದಣ್ಣ ಮಹಾಸ್ವಾಮಿ,ಪ್ರಣಾಮ್ ಸತೀಶ್. ತಾಲೂಕು ಅಧ್ಯಕ್ಷ ತಿಪೂರು ರಾಜೇಶ್, ಗ್ರಾಪಂ ಅಧ್ಯಕ್ಷ ಶಶಿಕಲಾ ಉಮಾ ಶಂಕರ್ ಯರಗನಹಳ್ಳಿ ಮಹಾಲಿಂಗ, ಬೆಂಕಿ ಶ್ರೀಧರ್, ರಂಜಿತ್ ಗೌಡ, , ಮಂಗಳಮ್ಮ ಗ್ರಾಪಂ ಸದಸ್ಯ ದಯಾನಂದ ವಿಎಚ್ ಶಿವಲಿಂಗಯ್ಯ, ಸೋಂಪುರ ಉಮೇಶ್, ಸಾಗರ್, ಜಗದೀಶ್, ಸೊ ಶಿ ಪ್ರಕಾಶ್, ಕುದರಗುಂಡಿ ನಾಗರಾಜ್, ದೇವರಹಳ್ಳಿ ರಾಮಲಿಂಗೇಗೌಡ, ಪ್ರಭುಲಿಂಗು, ಕೆ ಜಿ ಉಮೇಶ್, ದಯಾನಂದ, ವಳಗೆರೆಹಳ್ಳಿ ಶಿವಲಿಂಗಯ್ಯ, ಶ್ರೀ ಕ ಶ್ರೀನಿವಾಸ್, ಕೆ ಟಿ ಶಿವಕುಮಾರ್, ಹಳ್ಳಿಕೆರೆ ಬೊಮ್ಮೇಗೌಡ, ತಿಪ್ಪೂರು ಮನೊಹರ್ ಗೌಡ, ಚನ್ನಸಂದ್ರ ವಿವೇಕ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ