Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳು ಜ್ಞಾನ ಗ್ರಹಿಸಲು ಕಲಿಕಾ ಹಬ್ಬ ಸಹಕಾರಿ

ಕಲಿಕಾ ಹಬ್ಬದಲ್ಲಿ ಮಕ್ಕಳು ಆಸಕ್ತಿಯಿಂದ ತೊಡಗಿಸಿಕೊಂಡು ಹೆಚ್ಚಿನ ರೀತಿಯಲ್ಲಿ ಜ್ಞಾನ ಗ್ರಹಿಸಿದರೆ ಅದು ಸಾರ್ಥಕತೆ ಆಗುತ್ತದೆ ಎಂದು ಸಮಗ್ರ ಶಿಕ್ಷಣ ಇಲಾಖೆ ಅಧಿಕಾರಿ ರೇಣುಕಾ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯನಗರದಲ್ಲಿ ಅರ್ಕೇಶ್ವರ ನಗರದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೋವಿಡ್ ನಿಂದ ಮಕ್ಕಳ ಕಲಿಕೆ ಹಿಂದುಳಿದಿತ್ತು, ಮಕ್ಕಳ ಕಲಿಕೆ ಸರಿದೂಗಿಸಲು ಪ್ರಸ್ತುತ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಿ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದ್ದೇವೆ, ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಕಲಿಕಾ ಹಬ್ಬವನ್ನು ಆಚರಿಸುತ್ತೇವೆ ಎಂದರು.

ಕಲಿಕಾ ಹಬ್ಬದಲ್ಲಿ ಹಾಡುಗಾರಿಕೆ ನೃತ್ಯ ವಿಜ್ಞಾನದ ಪ್ರಯೋಗಗಳ ಮೂಲಕ ಕಲಿಕಾ ಹಬ್ಬವನ್ನು ಆಚರಿಸುತ್ತಿದ್ದೇವೆ, ಈ ಕಲಿಕಾ ಹಬ್ಬದಲ್ಲಿ ಕಡಿಮೆ ವೆಚ್ಚದಲ್ಲಿ ಅತಿ ಸುಂದರವಾಗಿ ಕಾಣುವ ವಸ್ತುಗಳನ್ನು ತಯಾರಿಸಿ ಖುಷಿ ಪಡುವಂಥದ್ದು ಹೀಗೆ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದಕ್ಕೂ ಮುನ್ನ ಪೂರ್ಣ ಕುಂಭದೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಚಂದ್ರು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್, ಮುಖ್ಯ ಶಿಕ್ಷಕಿ ಕಲ್ಪನಾ, ಶಿಕ್ಷಣ ಇಲಾಖೆಯ ಮಧುಸೂದನ್, ಸಹ ಶಿಕ್ಷಕರಾದ ಸುರೇಖಾ, ಶೋಭಾ ಮುಖಂಡರಾದ ಚಂದ್ರಶೇಖರ್ ಉಮೇಶ್, ಶಂಕ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!