ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲ ರೈತರ ಕಬ್ಬು, ಟಮೋಟೊ ಸೇರಿ ಹಲವು ಬೆಳೆಗಳ ನಾಶ ಮಾಡಿವೆ, ಜೊತೆಗೆ ಕೊಳವೆ ಬಾವಿ, ಪಂಪ್ ಸೆಟ್ ಪರಿಕರಗಳನ್ನು ಮುರಿದು ಹಾಕಿದ್ದು, ಇದರಿಂದ ರೈತರಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.
ಸುಮಾರು 12 ಆನೆಗಳ ಹಿಂಡುರೈತರ ಜಮೀನುಗಳಲ್ಲಿ ಲಗ್ಗೆ ಇಟ್ಟಿದ್ದು.ನೆಲಮಾಕನಹಳ್ಳಿ ಗ್ರಾಮದ ಎನ್ ಟಿ ಮಲ್ಲೇಶ್ ಬೆಳೆದಿದ್ದ ಟಮೊಟೊ ಬೆಳೆಯನ್ನ ಹಾಳು ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿವೆ. ಅಭಿಷೇಕ್, ಸ್ವಾಮಿ ಅವರ ಕಬ್ಬಿನ ಗದ್ದೆ, ಸಿದ್ದೇಗೌಡರಿಗೆ ಸೇರಿದ ಕೊಳವೆ ಬಾವಿ ಮತ್ತು ಪಂಪ್ ಸೆಟ್ ಪರಿಕರಗಳನ್ನು ಹಾನಿಗೊಳಿಸಿವೆ.
ಮಳವಳ್ಳಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಚಿರತೆ ಹಾವಳಿಯಿಂದ ಭಯ ಭೀತರಾಗಿ ಜನತ ಬದುಕುವ ಸಂದರ್ಭದಲ್ಲಿ ಇದೀಗ ಆನೆ ದಾಳಿಯಿಂದ ಭಯ ಪಡುವಂತಾಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಜೊತೆಯಾಗಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಗಿರುವ ನಷ್ಟದ ಬಗ್ಗೆ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಮುಖಂಡ ರಘುನಾಥ್, ಮರಿಲಿಂಗೇಗೌಡ, ಶ್ರಿನಿವಾಸ್ ಲಕ್ಷ್ಮಣ್ ಒತ್ತಾಯಿಸಿದ್ದಾರೆ
ಗ್ರಾಮ ಲೆಕ್ಕೀಗ ಹುಸ್ಮಾನ್, ತೊಟಗಾರಿಕೆ ಇಲಾಖೆ ಅಧಿಕಾರಿ ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆನೆ ಹಿಂಡಿನಿಂದ ರೈತರಿಗೆ ಆಗಿರುವ ಬೆಳೆ ನಾಶಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದ್ದಾರೆ.




