ಮಂಡ್ಯ ನಗರಸಭೆ ಚುನಾವಣೆಯಲ್ಲಿ ನಾವೇ (ಕಾಂಗ್ರೆಸ್) ಗೆಲ್ಲುತ್ತಿದ್ದೋ… ಜೆಡಿಎಸ್ ನವರು ಅಧಿಕಾರ ದುರುಪಯೋಗ ಮಾಡಿಕೊಂಡು ಗೆದ್ದಿದ್ದಾರೆ. ಜೆಡಿಎಸ್‌ನ ಇಬ್ಬರು ನಮಗೆ ಮತ ಹಾಕುವುದಾಗಿ ಹೇಳಿದ್ರು. ಆದರೆ ಓರ್ವನನ್ನು ಕಿಡ್ನಾಪ್ ಮಾಡಿದರು ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ದೂರಿದ್ದಾರೆ.
ಜೆಡಿಎಸ್ ಸದಸ್ಯರು ಅವರ ಮನೆಯವರ ಜೊತೆ ಮಾತನಾಡಲು ಬಿಟ್ಟಿಲ್ಲ. ಫಿಲ್ಮ್ ಸ್ಟೈಲ್ ನಲ್ಲಿ ರಾಜಕೀಯ ಮಾಡಿ ಗೆದ್ದಿದ್ದಾರೆ. ವಾಮ ಮಾರ್ಗದಿಂದ ಅವರು ಅಧಿಕಾರ ಪಡೆದಿದ್ದಾರೆ. 14ನೇ ವಾರ್ಡ್‌ನ ಸದಸ್ಯ ಮಹದೇವು ಉಪಾಧ್ಯಕ್ಷ ಸ್ಥಾನಕ್ಕೆ ನಾಮಿನೇಷನ್ ಹಾಕಬೇಕು ಅಂತ ಬಂದಿದ್ರು. ಆಗ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಈ ಬಗ್ಗೆ ಅವರ ಮಗ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
ಹೈಜಾಕ್ ಮಾಡಿ ಜೆಡಿಎಸ್ ಅವರು ಗೆದ್ದಿದ್ದಾರೆ. ನಮ್ಮ ಜನಪ್ರಿಯತೆಯಿಂದ ನಮಗೆ 18 ಮತ ಬಂದಿದೆ ಎಂದು ಹೇಳಿದರು.




