ಪೀಪಲ್ ಎಜುಕೇಷನ್ ಟ್ರಸ್ಟ್ ನ ಸಹಯೋಗದೊಂದಿಗೆ ವೈಟ್ ಈಗಲ್ ಬ್ಯಾಡ್ಮಿಂಟನ್ ಅಕಾಡೆಮಿ ರಾಜ್ಯಮಟ್ಟದ ಜ್ಯೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿ ಪಿಇಟಿ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸುಮಾರು ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಹನ್ನೊಂದು ವರ್ಷ ಒಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆಯುಷ್ ಬೆಂಗಳೂರು ಹಾಗೂ ದ್ವಿತೀಯ ಸ್ಥಾನವನ್ನು ಚಿರಂತ್ ರಾಜ್ ಮಂಡ್ಯ ಹಾಗೂ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಡಿಕೇರಿಯ ವಿಶಾಲ್ ಡಿ ಮತ್ತು ವಿಶಾಲ್ ಉತ್ತಪ್ಪ ಹಾಗೂ ದ್ವಿತೀಯ ಸ್ಥಾನವನ್ನು ಮಂಡ್ಯದ ದೇವಿಂದ್ ಚಂದ್ ಮತ್ತು ಕಿರಣ್ ರಾಜ್ ರವರು ಗಳಿಸಿದರು.
ಹನ್ನೊಂದು ವರ್ಷದ ಒಳಗಿನ ಬಾಲಕಿಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ನಾಗಲಕ್ಷ್ಮಿ ಹಾಗೂ ದ್ವಿತೀಯ ಸ್ಥಾನವನ್ನು ಮೈಸೂರಿನ ರಕ್ಷಾರವರು ಪಡೆದರು.
13 ವರ್ಷದ ಒಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಮೈಸೂರಿನ ಅಮಿತ್ ರಾಜ್ ಪ್ರಥಮ ಸ್ಥಾನ, ಹಾಸನದ ಯದುನಂದನ್ ದ್ವಿತೀಯ ಸ್ಥಾನವನ್ನು ಹಾಗೂ ಡಬಲ್ಸ್ ವಿಭಾಗದಲ್ಲಿ ಮೈಸೂರಿನ ಅಮಿತ್ ರಾಜ್ ಮತ್ತು ಹಾರ್ದಿಕ್ ಪ್ರಥಮ ಸ್ಥಾನ ಹಾಗೂ ದುಷ್ಯಂತ್ ಮತ್ತು ಚರಣ್ ಮಂಡ್ಯ ದ್ವಿತೀಯ ಸ್ಥಾನವನ್ನು ಗಳಿಸಿದರು.
13 ವರ್ಷದ ಬಾಲಕಿಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮೈಸೂರಿನ ಕೊಹಣಾ ಜೆ ಹಾಗೂ ದ್ವಿತೀಯ ಸ್ಥಾನವನ್ನು ಬೆಳಗಾವಿಯ ತಾನಿಷ್ಕ ಗಳಿಸಿದರು.
ಹದಿನೈದು ವರ್ಷ ವಯೋಮಿತಿಯ ಬಾಲಕರ ಸಿಂಗಲ್ಸ್ ಬೆಂಗಳೂರಿನ ಹಾರ್ದಿಕ್ ಪ್ರಥಮ ಸ್ಥಾನವನ್ನು ಕೆ. ಆರ್.ನಗರ ರೋಚನ ಎಸ್ ದ್ವಿತೀಯ ಸ್ಥಾನವನ್ನು ಪಡೆದರು.
ಮೂರು ದಿನಗಳ ಕಾಲ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ್ ಸಂಪೂರ್ಣ ಸಹಕಾರ ನೀಡಿದರು. ಇವರಿಂದಾಗಿ ಪಂದ್ಯಾವಳಿ ಅಪೂರ್ವ ಯಶಸ್ಸು ಪಡೆಯಿತು.