Friday, November 20, 2026

ಪ್ರಾಯೋಗಿಕ ಆವೃತ್ತಿ

ದೇಶದ ಗತಿ ಬದಲಿಸಿದ ”ಧೃವ ರಾಠಿ ಎಂಬ ಸೂಪರ್ ಸ್ಟಾರ್” 

ಲೋಕಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಹೊಸ ನಾಯಕರು ಆರಿಸಿ ಬಂದಿರಬಹದು ಆದರೆ ಇಡೀ ದೇಶಕ್ಕೆ ಒಬ್ಬ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದು ಆತನ ಹೆಸರು ಧೃವ ರಾಠಿ.

ತನ್ನ ಪಾಡಿಗೆ ತಾನು ವಿಜ್ಞಾನ ಕಲೆ ಟೂರಿಸಂ ಮುಂತಾದ ವಿಚಾರಗಳ ಬಗ್ಗೆ ಸಂಶೋಧನಾತ್ಮಕ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಧೃವ ರಾಠಿ ಈ ಬಾರಿಯ ಚುನಾವಣೆಯಲ್ಲಿ ಸರ್ವಾಧಿಕಾರಿ (Dictatorship) ಎಂಬ ವಿಡಿಯೋ ಬಿಡುಗಡೆ ಮಾಡುವ ಮೂಲಕ ದೇಶದ ಚುನಾವಣೆಯ ಗತಿಯನ್ನು ಬದಲಾಯಿಸಿಬಿಟ್ಟರು.

ಈ ವಿಡಿಯೋದಲ್ಲಿ ಧೃವರಾಠಿ ಹೊಸ ವಿಚಾರವನ್ನು ಹೇಳದೆ ಇದ್ದರು, ಎಲ್ಲರಿಗೂ ಗೊತ್ತಿರುವುದನ್ನೇ ಹೇಳಿದರು ಸಹ ಭಾರತದ ಯಾವುದೇ ದೊಡ್ಡ ದೊಡ್ಡ ಟಿವಿ ಚಾನಲ್ ಗಳು ಹೇಳದೆ ಮುಚ್ಚಿಟ್ಟಿದ್ದ ವಿಷಯವನ್ನು ನೇರವಾಗಿ ಹೇಳಿ ಕೋಟಿಗಟ್ಟಲೆ ಜನರ ವೀಕ್ಷಣೆಗೆ ಕಾರಣವಾದರು.

ಹಿಂದಿ ಬೆಲ್ಟ್ ಎಂದೆ ಪ್ರಖ್ಯಾತವಾದ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ರಾಜಸ್ಥಾನದಲ್ಲಿ ಜನರು ದೊಡ್ಡ ಪರದೆಗಳಲ್ಲಿ ಧೃವರಾಠಿ ವಿಡಿಯೋಗಳನ್ನು ವೀಕ್ಷಿಸಿದರು.

ಧೃವರಾಠಿ ಜನಪ್ರಿಯತೆಯನ್ನು ಹಾಳು ಮಾಡಲು ಬಿಜೆಪಿ ಐಟಿ ಸೆಲ್ ಅವನ ಖಾಸಗಿ ವಿಚಾರಗಳನ್ನು ಕೆದಕಿ ಜರ್ಮನಿ ಹುಡುಗಿಯನ್ನು ಮದುವೆಯಾಗಿರುವುದು, ಆತ ಪಾಕಿಸ್ತಾನಿ, ಆತ ಮುಸ್ಲಿಂ, ಅವನು ಹಿಂದೂ ವಿರೋಧಿ ಎಂದು ಟ್ರೊಲ್ ಮಾಡಿದರೂ ಸಹ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಧೃವರಾಠಿ ಒಂದರ ಮೇಲೋಂದರಂತೆ ವಿಡಿಯೋ ಬಿಡುಗಡೆ ಮಾಡಿ ಗೋಧಿ ಮೀಡಿಯಾಗಳ ಉಡೀಸ್ ಮಾಡಿಬಿಟ್ಟರು.

ಕಡೆಗೆ ಧೃವರಾಠಿಯ ಪ್ರಭಾವ ಕಡಿಮೆ ಮಾಡಲು ನೇರವಾಗಿ ಫಿಲ್ಡಿಗೆ ಬಂದ ಮೋದಿಜೀ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಅದರಲ್ಲಿ ಬಲಪಂಥೀಯ ವಿಡಿಯೋ ಯೂಟ್ಯೂಬರ್ ಗಳು, ಸರ್ಕಾರದ ಪರವಾಗಿ ವಿಡಿಯೋ ಮಾಡುವವರನ್ನು ಕರೆದು ಅವರಿಗೆ ಸನ್ಮಾನ ಮಾಡಿ‌ ಬಹುಮಾನ ಕೊಟ್ಟು‌ ಹುರಿದುಂಬಿಸಿದರೂ ಸಹ ಅವರಲ್ಲಿ ಯಾರೊಬ್ಬರೂ ಸಹ ಧೃವರಾಠಿಯನ್ನು ಮೀರಿಸುವುದರಿರಲಿ ಅವರ ಹತ್ತಿರಕ್ಕೆ ಸಹ ಸುಳಿಯಲು ಸಾಧ್ಯವಾಗಲಿಲ್ಲ.

ಒಟ್ಟಾರೆ ಲೋಕಸಭಾ ಚುನಾವಣೆಯು ಹಲವು ಹತ್ತು ವಿಷಯಗಳಿಗೆ ಚರಿತ್ರೆಯಲ್ಲಿ ದಾಖಲಾಗಲಿದ್ದು, ಅದರಲ್ಲಿ ಧೃವರಾಠಿ ಎಂಬ ಯುವಕ ಮಾಡಿದ ವಿಡಿಯೋಗಳು ಮತ್ತು ಸರ್ವಾಧಿಕಾರಿಯ ವಿರುದ್ದ ತೊಡೆತಟ್ಟಿದ ರೀತಿಯನ್ನು ಬಹುಕಾಲ ನೆನಪಿಟ್ಟುಕೊಳ್ಳಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ