ಅರವಿಂದ ಪ್ರಭು, ಚಿತ್ರಕೂಟ
ಒಂದು tweetನಿಂದ ಏನಾಗುತ್ತದೆ?
ಕಳೆದ ಭಾನುವಾರ “ಶಂಕರ ನಿರಂತರ” ಕಾರ್ಯಕ್ರಮದ ಭಾಗವಾಗಿ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಗೆ ಸುಣ್ಣ ಬಣ್ಣ ಬಳಿದು ಅಂದಗೊಳಿಸುವ ಕೆಲಸವನ್ನು ಚಿತ್ರಕೂಟ ಆಯೋಜಿಸಿತ್ತು. ರಾಜಧಾನಿ ಬೆಂಗಳೂರಿನಿಂದ ಕನ್ನಡ ಮನಸುಗಳು ತಂಡದಿಂದ ಪವನ್ ಕೂಡ ಬಂದು ನಮ್ಮೊಂದಿಗೆ ಎರಡು ದಿನ ಇದ್ದು ಅವಿಶ್ರಾಂತವಾಗಿ ಸಾಕಷ್ಟು ಕೆಲಸ ಮಾಡಿದರು.

ತಂಡದ ಶಕ್ತಿ ನನ್ನದು ಟ್ವಿಟ್ ಮಾತ್ರ ಮಾಡಿದ್ದು ಅಷ್ಟೇ 🙂… ಚಿಕ್ಕಮಂಡ್ಯ ದಲ್ಲಿ ಹರಿಯುವ ಹಳ್ಳದ ನೀರಿನ ಬಗ್ಗೆ ತುಂಬಾ ಬೇಜಾರ್ ಆಯ್ತು, ರಾತ್ರಿ ಒಳ್ಳೆ ಸದ್ದಿನಿಂದ ಹರಿಯುವ ನದಿ ಮಾಲಿನ್ಯ ಆಗಿದೆ, ನೋಡೋಣ ಮುಂದಿನ ದಿನಗಳಲ್ಲಿ ಅದನ್ನ ಸ್ವಚ್ಛ ಮಾಡುವ ಒಂದು ಕಾರ್ಯಕ್ರಮ ಮಾಡೋಣ… ಎಂದು ಕನ್ನಡ ಮನಸ್ಸುಗಳು ಕರ್ನಾಟಕದ ಪವನ್ ಧರೇಗುಂಡಿ ತಿಳಿಸಿದ್ದಾರೆ.
ನಮ್ಮ ಆಲೋಚನೆಗಳೆಲ್ಲವೂ ಶಾಲೆಯ ಕಾಂಪೌಂಡಿನ ಒಳ ಆವರಣಕ್ಕಷ್ಟೇ ಸೀಮಿತವಾಗಿದ್ದವು ಮತ್ತು ಅಷ್ಟಕ್ಕೇ ಸುಸ್ತಾಗಿ ಹೋಗಿದ್ದೆವು. ಸಾಕಷ್ಟು ಒಳ್ಳೆಯ ಕೆಲಸಗಳೇನೋ ಆದವು. ಆದರೆ ಈ ಕನ್ನಡ ಮನಸುಗಳ ಸಾರಥಿ ಪವನ್ ಮಾತ್ರ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಬಿಡದೆ ಗಮನಿಸುತ್ತಿದ್ದರು. ಪಿಇಎಸ್ ಕಾಲೇಜಿನ ಹುಡುಗರ ಶ್ರಮ, ಶಾಲೆಯ ಎಲ್ಲ ಶಿಕ್ಷಕರ ಕಾಳಜಿ ಮತ್ತು ಪರಿಸರ ಸಂಸ್ಥೆಯ ಯೋಗೀಶ್ ಅವರ ಮಾರ್ಗದರ್ಶನದಲ್ಲಿ ಎರಡು ದಿನಗಳ ಶ್ರಮದಾನ ಸಾರ್ಥಕವಾಯಿತು ಅಂದುಕೊಂಡೆವು.
ಮುಂದಾಳುಗಳಾಗಿ ನಡೆದರೆ ಬದಲಾವಣೆ ಸಾಧ್ಯ
ಹಲವಾರು ದಿನಗಳಿಂದ ಉಳಿದ ಕೆಲಸಗಳನ್ನ ಉಳಿದಿದೆ ಉಳಿದಿದೆ ಎಂದು ಗೊಣಗುತ್ತಾ ತಿರುಗಿದರೆ ಅದು ಬದಲಾಗುವುದಿಲ್ಲ ವಿನಃ ಹಾಗೇ ಉಳಿಯುತ್ತದೆ. ಆದರೆ, ಒಂದು ಹೆಜ್ಜೆ ಮುಂದಡಿಯಿಟ್ಟು ಮುಂದಾಳುಗಳಾಗಿ ನಡೆದರೆ ಬದಲಾವಣೆ ಸಾಧ್ಯ. ಇದಕ್ಕೆ ಉದಾಹರಣೆ, ಚಿಕ್ಕಮಂಡ್ಯದಲ್ಲಿ ನಡೆದ “ಶಂಕರ ನಿರಂತರ” ಕಾರ್ಯಕ್ರಮ ಮತ್ತು ಪವನ್ ಧರೇಗುಂಡಿಯವರ ಒಂದು ಟ್ವೀಟ್… !
ಸಾಮಾಜಿಕ ಜಾಲತಾಣಗಳಲ್ಲಿ ಶಕ್ತಿ ಹರಿದಾಡುವ ದಿನಗಳಿವು, ಹಾಗಾಗಿ ಸಮಾಜದ ಕೆಲಗಳಿಗೆ ಇವನ್ನು ಬಳಸಿಕೊಳ್ಳೋಣ. ಇಂತಹ ಯಾವುದೇ ವಿಚಾರವನ್ನ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಅವರನ್ನೇ ಟ್ಯಾಗ್ ಮಾಡೋಣ ಎಂದು ಚಿತ್ರಕೂಟದ ಧನುಷ್ ಗೌಡ ತಿಳಿಸಿದ್ದಾರೆ.
ಈಗ ಮೊನ್ನೆ ಏನಾಗಿದೆ, ಕನ್ನಡ ಮನಸುಗಳು twitter ಅಕೌಂಟಿನಲ್ಲಿ ಪವನ್ ಅವರು, ಚಿಕ್ಕಮಂಡ್ಯ ಶಾಲೆಯ ಮುಂಭಾಗದಲ್ಲಿ ಅವ್ಯವಸ್ಥೆ, ಗಲೀಜು ಮತ್ತು ಗಬ್ಬು ವಾಸನೆಯ ಕುರಿತು ಒಂದು tweet ಮಾಡಿದ್ದಾರೆ. ಅದು ರಾಜ್ಯದ ವಿವಿಧೆಡೆ ಪ್ರಜ್ಞಾವಂತರ ಗಮನ ಸೆಳೆದಿದೆ. ಅನೇಕ ಪರಿಸರ ಪ್ರೇಮಿಗಳು ಸಂಬಂಧಪಟ್ಟವರಿಗೆ ಕರೆ ಮಾಡಿದ್ದಾರೆ. ಸಕಾಲದಲ್ಲಿ ಎಚ್ಚೆತ್ತ ಮಂಡ್ಯದ ಜಿಲ್ಲಾಡಳಿತ ನಿನ್ನೆ (ಶನಿವಾರ) ದಿನ ಇಡೀ ಆವರಣವನ್ನು ಅಸ್ಥೆಯಿಂದ ಸ್ವಚ್ಛಗೊಳಿಸಿದೆ.
ಚಿಕ್ಕ ಮಂಡ್ಯ ಪ್ರೌಢಶಾಲೆ ಎದುರುಗಡೆ ಸಿಕ್ಕಾಪಟ್ಟೆ ಗಲೀಜು ನೀರು ಜೊತೆಗೆ ಮಾಂಸದ ಹೋಟೆಲ್ ನಲ್ಲಿ ಉಳಿದ ಹೋಟೆಲ್ ಗಲೀಜು ತಂದು ಸುರಿಯುತ್ತಾರೆ ಅಧಿಕಾರಿಗಳು ನಿದ್ರೆ ಮಾಡ್ತಾ ಇದ್ದಾರೆ ಅನಿಸುತ್ತೆ ನಗರ ಪ್ರದೇಶಗಳಲ್ಲಿ ಈ ರೀತಿಯ ಸಮಸ್ಸೆ ಆದ್ರೆ ಹೆಗ್ರಪ್ಪ @dc_mandya @osd_cmkarnataka ಸೂಕ್ತ ಕ್ರಮ ವಹಿಸಿ 😑 @hd_kumaraswamy pic.twitter.com/fc4st96Crm
— ಕನ್ನಡ ಮನಸುಗಳು ಕರ್ನಾಟಕ (@kannadamanasuga) November 12, 2024
“>
ನಾವು ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೆವು. ಪಕ್ಕದಲ್ಲೇ ಇರುವ ನಿಲ್ದಾಣದಲ್ಲಿ ವಾಸನೆ ಸಹಿಸಿಕೊಂಡು ಬಸ್ ಹತ್ತುತ್ತಿದ್ದೆವು. ನಮಗ್ಯಾರಿಗೂ ಇದು ಕಣ್ಣಿಗೆ ಬಿದ್ದಿರಲಿಲ್ಲ. ಹೀಗೆ ಸುಲಭವಾಗಿ ಬಗೆಹರಿಸಬಹುದು ಅನಿಸಿರಲಿಲ್ಲ. ನೂರು ಕಿಲೋ ಮೀಟರ್ ದೂರದಿಂದ ಬಂದ ಕನ್ನಡವೀರನೊಬ್ಬ ನಮ್ಮೆಲ್ಲರ ಕಣ್ಣು ತೆರೆಸಿದ.
ಪವನ್ ನಿನ್ನಂಥವರ ಸಂತತಿ ಸಾವಿರವಾಗಲಿ ಸಹೋದರ. ನಮ್ಮ ಚಿತ್ರಕೂಟ, ಪರಿಸರ ಸಂಸ್ಥೆ ಅಷ್ಟೇ ಅಲ್ಲ ಇಡೀ ಮಂಡ್ಯ ನಿನ್ನ ಈ ಕಾಳಜಿಯ ಕೆಲಸವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ನಮ್ಮೆಲ್ಲರ ಹೃದಯದಲ್ಲಿ ನಿನಗೊಂದು ಜಾಗವಿರುತ್ತದೆ.





