Friday, September 20, 2024

ಪ್ರಾಯೋಗಿಕ ಆವೃತ್ತಿ

ಪಶ್ಚಿಮ ಬಂಗಾಳ| ರೈಲುಗಳ ನಡುವೆ ಭೀಕರ ಅಪಘಾತ: 15 ಜನ ದುರ್ಮರಣ, 60 ಜನ ಗಾಯ

ಎಕ್ಸ್‌ಪ್ರೆಸ್‌ ರೈಲಿಗೆ ಸರಕುಸಾಗಣೆ ರೈಲು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 15 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.

ಅಪಘಾತವಾದ ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ ರೈಲು ತ್ರಿಪುರಾದ ಅಗರ್ತಲದಿಂದ ಕೋಲ್ಕತ್ತಾದ ಸೇಲ್‌ದಾ ನಿಲ್ದಾಣಕ್ಕೆ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಸರಕು ಸಾಗಣೆ ರೈಲು ಕಾಂಚನಜುಂಗ ಎಕ್ಸಪ್ರೆಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಭೋಗಿಗಳು ಹಳಿತಪ್ಪಿವೆ. ಒಂದು ಕೋಚ್‌ ಮೇಲಕ್ಕೆ ಹೋಗಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.

ಅಪಘಾತವು ಉತ್ತರ ಬಂಗಾಳದ ನ್ಯೂ ಜಲ್‌ಪಾಯ್‌ಗುರಿ ನಿಲ್ದಾಣಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಗಂಗಪಾಣಿ ಪ್ರದೇಶದಲ್ಲಿ ಸಂಭವಿಸಿದೆ. ಉತ್ತರ ಗಡಿಭಾಗದ ಕಾತಿಹಾರ್‌ ರೈಲ್ವೆ ವಿಭಾಗದ ವಿಭಾಗದ ರೈಲ್ವೆ ವ್ಯವಸ್ಥಾಪಕರ ಪ್ರಕಾರ 13174 ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ ರೈಲು ಅಪಘಾತವು ಬೆಳಿಗ್ಗೆ 9 ಗಂಟೆಗೆ ಸಂಭವಿಸಿದೆ.

ಡಾರ್ಜಲಿಂಗ್‌ನ ಹೆಚ್ಚುವರಿ ಎಸ್‌ಪಿ ಅಭಿಷೇಕ್‌ ರಾಯ್‌, “ ಸರಕುಸಾಗಣೆ ರೈಲು ಕಾಂಚನ್‌ಜುಂಗ ಎಕ್ಸ್‌ಪ್ರೆಸ್‌ ರೈಲಿಗೆ ಗುದ್ದಿದ ನಂತರ ಅಪಘಾತ ಸಂಭಿಸಿದೆ. ಎನ್‌ಡಿಆರ್‌ಎಫ್‌, ವೈದ್ಯಕೀಯ ತಂಡ, ಸ್ಥಳೀಯರು ಒಳಗೊಂಡು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಅವರು ರೈಲು ಅಪಘಾತದಲ್ಲಿ ಮಡಿದವರ ಬಗ್ಗೆ ಸಂತಾಪ ಸೂಚಿಸಿದ್ದು,ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.

“>

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!