Tuesday, September 17, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವೀರಶೈವ ಮಹಾಸಭಾ ಚುನಾವಣೆ; 72 ಮತಗಳ ಅಂತರದ ಗೆಲುವು: ಆನಂದ್

ಕಳೆದ ಜು.21ರಂದು ನಡೆದ ಮಂಡ್ಯ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಒಟ್ಟು 3388 ಮತಗಳು ಚಲಾವಣೆಯಾಗಿದ್ದು, ಈ ಪೈಕಿ 72 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ ಎಂದು ತಾಳಶಾಸನ ಆನಂದ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕು ಹಾಗೂ ಜಿಲ್ಲಾ ಘಟಕ ಕ್ಕೆ ಚುನಾವಣೆ ನಡೆದಿದ್ದು ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ ತಾಲ್ಲೂಕಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿ ನಂತರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆಡೆದು ನಾನು ಆಯ್ಕೆಯಾಗಿದ್ದೇನೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ಮಂಡ್ಯ ಜಿಲ್ಲಾ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಮ್ಮ ತಂಡ ಸಂಪೂರ್ಣವಾಗಿ ಜಯಗಳಿಸಿದ್ದು ನಮ್ಮ ಗೆಲುವಿಗೆ ಹಗಲಿರುಳು ಶ್ರಮಿಸಿದ ಮತ್ತು ಈ ಚುನಾವಣೆಯಲ್ಲಿ ನಮಗೆ ಮತ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾ ಘಟಕದ ನೂತನ ಅಧ್ಯಕ್ಷ ತಾಳಶಾಸನ ಎಸ್ ಆನಂದ್ ತಿಳಿಸಿದರು.

ಮಂಡ್ಯ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ, ಸೇರಿದಂತೆ ಕೆ ಆರ್ ಪೇಟೆ ತಾಲ್ಲೂಕು ಅಧ್ಯಕ್ಷರು ನಮಗೆ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಕೆಲಸ ಮಾಡ್ತೀವಿ, ಇದು ವರೆಗೂ ಬಸವ ಜಯಂತಿ ಯನ್ನು ಅದ್ದೂರಿಯಾಗಿ ಆಚರಣೆ ಮಾಡಿಲ್ಲ, ಮುಂದಿನ ದಿನ ಆ ಕೆಲಸ ಮಾಡುತ್ತೇವೆ. ಸಿದ್ದಗಂಗಾ ಶ್ರೀಗಳ ಜಯಂತಿ ಆಚರಣೆ ಮಾಡುವುದು. ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಿಧ್ಯಾಭ್ಯಾಸ ಮಾಡುವ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮತ್ತು ಜಿಲ್ಲೆ ಹಾಗೂ ತಾಲ್ಕೂಕಿನಲ್ಲಿ ಬಸವ ಭವನ ಮಾಡಲು ಶ್ರಮವಹಿಸುತ್ತೇನೆ ಎಂದರು.

ಗೋಷ್ಠಿಯಲ್ಲಿ ಕಾಳೆನಹಳ್ಳಿ ಶಿವಕುಮಾರ್, ಮುಳ್ಳಪ್ಪ ಮಂಡ್ಯ ತಾಲ್ಲೂಕು ಅಧ್ಯಕ್ಷರು ಬೇವುಕಲ್ಲು ವಿಶ್ವೇಶ್ವರಯ್ಯ,ಶೋಭಾ ದೇವರಾಜ್, ಸುರೇಶ್,ಅರುಣ್ ಕುಮಾರ್, ಅರುಣ್ ಅರಳು ಕುಪ್ಪೆ, ಆರ್ ಪ್ರಸಾದ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!