ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗೂಡಿ ವಾಯುವಿಹಾರಿಗಳ ಮತಯಾಚಿಸಿದರು.
ಇಂದು ಬೆಳ್ಳಂಬೆಳಗ್ಗೆ ಮಂಡ್ಯದ ಸುಭಾಷ್ ನಗರದಲ್ಲಿರುವ ದೇವರಕಾಡು ಶಿವನಂಜಪ್ಪ ಪಾರ್ಕ್ ನಲ್ಲಿ ವಾಯುವಿಹಾರಿಗಳು ಬಳಿ ತೆರಳಿ ಮತ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ವಾಯುವಿಹಾರ ಮಾಡುತ್ತಿದ್ದರು. ಅವರ ಬಳಿಗೆ ತೆರಳಿ ರವಿಶಂಕರ್ ಮತಯಾಚಿಸಿದರು. ಸರ್, ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ವಾಯುವಿಹಾರ ಮಾಡುತ್ತಿದ್ದ ಪದವೀಧರ ಮತದಾರರ ಬಳಿ ಮತಯಾಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದ ಜನರಿಗೆ ಕರ ಪತ್ರ ನೀಡಿ ತಮಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದಗಾಲು ಶಿವಣ್ಣ, ಅಶೋಕ್ ಜಯರಾಮ್, ನಾಗಣ್ಣಗೌಡ, ರಮೇಶ್, ವಿವೇಕ್, ಹರ್ಷ ಸೇರಿದಂತೆ ಹಲವರಿದ್ದರು.