Friday, September 20, 2024

ಪ್ರಾಯೋಗಿಕ ಆವೃತ್ತಿ

ಭಾರತೀನಗರದಲ್ಲಿ ಕೆಂಪೇಗೌಡರ ಸ್ತಬ್ದಚಿತ್ರಕ್ಕೆ ಅದ್ದೂರಿ ಸ್ವಾಗತ

ನಾಡಪ್ರಭು ಕೆಂಪೇಗೌಡರ 154ನೇ ಜಯಂತಿ ಅಂಗವಾಗಿ ತಾಲ್ಲೂಕಿನಾದ್ಯಂತ ಸಂಚರಿಸುತ್ತಿರುವ ಕೆಂಪೇಗೌಡರ ಸ್ತಬ್ದಚಿತ್ರವನ್ನು ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಪ್ರಗತಿಪರ ಸಂಘಟನೆಯ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಟ್ಟರು.

ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಬಳಿ ಆಗಮಿಸಿ ಕೆಂಪೇಗೌಡರ ಸ್ತಬ್ದಚಿತ್ರವನ್ನು ವಾದ್ಯಗೋಷ್ಠಿಯೊಂದಿಗೆ ಪಟಾಕಿ ಸಿಡಿಸುತ್ತ ಕುಂಭಮೇಳದ ಸಮೇತ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಭಾರತೀನಗರ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಕಚೇರಿ ಮುಂಭಾಗ ಗ್ರಾ.ಪಂ ಕಾರ್ಯಕಾರಿ ಮಂಡಳಿ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಂಪೇಗೌಡರ ಭಾವಚಿತ್ರಕ್ಕೆ ಬೃಹತ್ ಹೂವಿನ ಹಾರವನ್ನು ಅರ್ಪಿಸಿ ಪೂಜೆ ಸಲ್ಲಿಸಿದರು.

ಹಲಗೂರು ವೃತ್ತದ ಸರ್.ಎಂ.ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಆಗಮಿಸಿದ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಅವರು ಕೆಂಪೇಗೌಡರ ಕುರಿತು ಹಲವಾರು ವಿಚಾರಗಳನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಎಲ್ಲಾ ಮುಖಂಡರು ಹಾಗೂ ಹಲವು ಯುವಕರು ಕೆಂಪೇಗೌಡರ ಘೋಷಣೆಯನ್ನು ಮೊಳಗಿಸಿದರು. ಅಂತಿಮವಾಗಿ ಸಿಹಿ ವಿತರಣೆ ಮಾಡಿ ಕೆಂಪೇಗೌಡರ ರಥವನ್ನು ಮದ್ದೂರಿಗೆ ಬೀಳ್ಕೊಡಲಾಯಿತು.

ಸೋಮವಾರ ಚಿಕ್ಕರಸಿನಕೆರೆ ಹೋಬಳಿಯಾದ್ಯಂತ ಕೆಂಪೇಗೌಡರ ರಥ ಸಂಚರಿಸಿದ ವೇಳೆ ಆಯಾಯ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸದಸ್ಯರು ಕೆಂಪೇಗೌಡರ ರಥಕ್ಕೆ ಪೂಜೆಸಲ್ಲಿಸಿ ಬೀಳ್ಕೊಟ್ಟರು.

ಇದೇ ವೇಳೆ ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ, ತೊರೆಚಾಕನಹಳ್ಳಿ ಶಂಕರೇಗೌಡ, ನ ಲಿ ಕೃಷ್ಣ, ರವಿಕುಮಾರ್, ಚಿಕ್ಕತಿಮ್ಮೇಗೌಡ, ಎ.ಎಸ್.ರಾಜೀವ್, ಆರ್.ಸಿದ್ದಪ್ಪ, ಗಿರೀಶ್, ಚಂದ್ರಶೇಖರ್, ಅಣ್ಣೂರು ಸತೀಶ್, ಮಹೇಂದ್ರ, ರಘುವೆಂಕಟೇಗೌಡ, ವೆಂಕಟೇಶ್, ಬಿ.ಕೆ.ಜಗದೀಶ್, ಕರಡಕೆರೆ ಯೋಗೇಶ್, ಗುಡಿಗೆರೆ ಬಸವರಾಜು, ಶಿವಲಿಂಗಯ್ಯ, ಮಡೇನಹಳ್ಳಿ ಶ್ರೀನಿವಾಸ್, ಚಾಂಷುಗರ್ ಆಡಳಿತಾಧಿಕಾರಿಗಳಾದ ನಿತೀಶ್, ನಿಂಗಪ್ಪ, ಇನ್ನರ್ವಿಲ್ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!