Friday, November 20, 2026

ಪ್ರಾಯೋಗಿಕ ಆವೃತ್ತಿ

ದಾಂಪತ್ಯಕ್ಕೆ ಕಾಲಿಟ್ಟ ಅಂಬರೀಶ್ ಪುತ್ರ ಅಭಿಷೇಕ್ – ಅವಿವಾ ಬಿದ್ದಪ್ಪ

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ಪುತ್ರ ನಟ ಅಭಿಷೇಕ್ ಅಂಬರೀಶ್ ಸೋಮವಾರ ಮಾಡೆಲ್ ಅವಿವಾ ಬಿದ್ದಪ್ಪ ಅವರನ್ನು ವರಿಸಿದ್ದಾರೆ.

ಅವಿವಾ ಬಿದ್ದಪ್ಪ ಅವರು ಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಹಾಗೂ ಜುಡಿತಾ ಬಿದ್ದಪ್ಪ ಪುತ್ರಿ. ಜೂನ್ 5ರಂದು ಒಕ್ಕಲಿಗ ಸಂಪ್ರದಾಯದ ಪ್ರಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹ ನೆರವೇರಿದೆ.

“>

ಜೂನ್ 5ರ ಬೆಳಗ್ಗೆ 9:30-10:30ರ ನಡುವೆ ಕರ್ಕಾಟಕ ಲಗ್ನ ಮುಹೂರ್ತದಲ್ಲಿ ವಧು-ವರರು ಹಸೆಮಣೆ ಏರಿದರು. ಅಭಿಷೇಕ್ ಅವರು ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದರು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ನೆರವೇರಿತು.

ಮದುವೆಗೆ ಗಣ್ಯರ ಆಗಮನ

ಎರಡು ಕುಟುಂಬಗಳು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಟಾಲಿವುಡ್ ಕಾಲಿವುಡ್ ಸೇರಿದಂತೆ ಇನ್ನಿತರ ಸಿನಿಮಾ ಇಂಡಸ್ಟ್ರಿಯಿಂದಲೂ ಅನೇಕ ಸೆಲೆಬ್ರಟಿಗಳು ವಿವಾಹ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ವಧು-ವರರಿಗೆ ಆಶೀರ್ವದಿಸುತ್ತಿದ್ದಾರೆ.

ಜತೆಗೆ, ಅಂಬರೀಶ್ ರಾಜಕೀಯ ಹಿನ್ನೆಲೆಯುಳ್ಳವರು ಅವರ ಪತ್ನಿ ಸುಮಲತಾ ಅವರು ಕೂಡಾ ಪ್ರಸ್ತುತ ಸಂಸದೆಯಾಗಿರುವ ಕಾರಣ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದರು. ಅದರಂತೆ, ರಾಜಕೀಯ ನಾಯಕರು, ಗಣ್ಯರು ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್, ಸುಹಾಸಿನಿ ಮಣಿರತ್ನಂ, ಅನಿಲ್ ಕುಂಬ್ಳೆ, ನರೇಶ್-ಪವಿತ್ರಾ ಲೋಕೇಶ್, ರಾಕಿಂಗ್ ಸ್ಟಾರ್ ಯಶ್ ದಂಪತಿ, ಮೋಹನ್ ಬಾಬು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ