ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕ ಕುಂದು ಕೊರತೆ ಸಭೆ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಬುಧವಾರ ನಡೆದ ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡ್ಯದ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಅವರು, ಇಲಾಖೆ ಗಳ ಕಾರ್ಯ ವೈಖರಿ ವಿರುದ್ಧ ಲೋಕಾಯುಕ್ತಕ್ಕೆ ದೂರುಗಳ ಮಹಾಪೂರವೇ ಬರುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲೇ ಸಭೆ ನಡೆಸಿ ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ಲೋಕಾಯು ಕ್ರ ಸೂಚನೆಯಂತೆ ಈ ಸಭೆ ಕರೆಯಲಾಗಿದೆ ಎಂದರು.
ಸಾರ್ವಜನಿಕರು ನೀಡುವ ಯಾವುದೇ ದೂರಿನ ಬಗ್ಗೆ ಸಂಬಂಧಿಸಿದ ಇಲಾಖೆಯವರು ಕ್ರಮ ವಹಿಸಿ ಆ ಬಗ್ಗೆ ನಮಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಡಿವೈಎಸ್ಪಿ ಸುನೀಲ್ ಕುಮಾರ್ ಅವರು, ಗ್ರಾ ಪಂ ಮಟ್ಟದಲ್ಲಿ ಪಿಡಿಒ ಗಳು ಇ ಖಾತೆಗೆ ಸಂಬಂಧಿಸಿದಂತೆ ಮಾಡುವ ನಿವೇಶನಗಳ ಅಳತೆ ಹಾಗೂ ದಾಖಲೆಗಳ ವ್ಯತ್ಯಾಸ ದಿಂದ ಸಾರ್ವಜನಿಕರು ಲೋಕಾಯುಕ್ತಕ್ಕೆ ಸೇರಿದಂತೆ ಜಿಲ್ಲಾ ತಾಲ್ಲೂಕು ಮಟ್ಟದ ಕಚೇರಿಗಳಿಗೆ ಅಲೆಯುವ ಸ್ಥಿತಿ ಹೆಚ್ಚಾಗುತ್ತಿದೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ ಜೊತೆಗೆ ಗ್ರಾಮಗಳಲ್ಲಿ ಕಸಗಳ ವಿಲೇವಾರಿ ಸರಿಯಾಗಿ ನಡೆಯದೆ ವಾಹನಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ, ಶುದ್ದ ನೀರಿನ ಘಟಕ ಗಳು ಕೆಟ್ಟು ನಿಂತಿದ್ದು ಪಂಚಾಯ್ತಿ ಆಡಳಿತ ವ್ಯವಸ್ಥೆ ದುರಾವಸ್ಥೆಯ ಅಗಾರವಾಗುತ್ತಿದೆ ಈ ಬಗ್ಗೆ ಸರಿಯಾದ ಮೇಲ್ವಿಚಾರಣೆ ಆಗುತ್ತಿಲ್ಲ ತಾ ಪಂ ಇಒ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಯ ಹೆರಿಗೆ ವಾಡ್೯ನಲ್ಲಿ ವೈದ್ಯರು ಸಿಬ್ಬಂದಿಯಿಂದ ಹಣ ವಸೂಲಿ ಆರೋಪ ಕೇಳಿಬರುತ್ತಿದ್ದು ಈ ಬಗ್ಗೆ ಕ್ರಮ ವಹಿಸುವಂತೆ ಆಸ್ಪತ್ರೆ ಆಡಳಿ ತಾಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಇನ್ಸ್ ಪೆಕ್ಟರ್ ಮೋಹನ್ ರೆಡ್ಡಿ, ತಹಶಿಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಮತ್ತಿತರರು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಇದೇ ವೇಳೆ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿ ಸಿದ ದೂರುಗಳ ಸಲ್ಲಿಕೆಯಾ ಯಿತು.




