ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಾಧೀನ ಖೈದಿಯಾಗಿರುವ ನಟ ದರ್ಶನ್ ಗೆ ಈಗ ಜೈಲಿನ ಭೀಕರತೆ ಅನುಭವಕ್ಕೆ ಬಂದಂತೆ ಕಾಣಿಸುತ್ತಿದೆ. ವಿಚಾರಣೆ ಎದುರಿಸಲು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಕೊಲೆ ಆರೋಪಿ ದರ್ಶನ್ ‘ತನಗೆ ವಿಷ ಕೊಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿ ಎಂದು ನ್ಯಾಯಾಧೀಶರಲ್ಲಿ ಮೊರೆ ಇಟ್ಟಿದ್ದಾರೆ.
ಜೈಲಿನಿಂದ ಹೊರಗೆ ತಮ್ಮನ್ನು ಬಿಡುತ್ತಿಲ್ಲ, ಒಂದು ತಿಂಗಳಿನಿಂದ ಬಿಸಿಲನ್ನೂ ನೋಡದಂತಾಗಿದೆ. ದೇಹದಲ್ಲಿ ಫಂಗಸ್ ಸಮಸ್ಯೆ ಶುರವಾಗಿದೆ ಎಂದು ಅಲವತ್ತುಕೊಂಡರು. ನಂತರ ನ್ಯಾಯಾಲಯವು ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಅಗತ್ಯವಿಲ್ಲವೆಂದು ಜೈಲಿನ ಆವರಣದೊಳಗೆ ಓಡಾಡಲು ಅನುಮತಿ ನೀಡಿದೆ.
ಅಲ್ಲದೇ ಹಾಸಿಗೆ, ದಿಂಬುಗಳು ಸೇರಿದಂತೆ ಜೈಲಿನ ಕೈಪಿಡಿಯ ಅನುಸಾರ ದರ್ಶನ್‌ಗೆ ಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದಲ್ಲದೇ, ಕೈದಿಗಳ ಹಕ್ಕುಗಳನ್ನು ಗೌರವಿಸಲು ಸೂಚನೆ ನೀಡಿತು. ದರ್ಶನ್, ಪವಿತ್ರಾಗೌಡ ಹಾಗೂ ಸಹ ಆರೋಪಿಗಳ ವಿರುದ್ಧ ನ್ಯಾಯಾಲಯವು ಸೆ.19ರಂದು ಆರೋಪ ನಿಗದಿ ಮಾಡಲಿದೆ.




