Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮುಸ್ಲಿಮರ ಅವಹೇಳನ | ಮದ್ದೂರಿನ ಯುವತಿ ವಿರುದ್ದ ದೂರು ದಾಖಲು

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲುತೂರಾಟ ಖಂಡಿಸಿ ಸಂಘ ಪರಿವಾರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಘೋಷಣೆ ಕೂಗಿದ ಚಾಮನಹಳ್ಳಿ ಗ್ರಾಮದ ಜ್ಯೋತಿ ಎಂಬ ಯುವತಿಯ ವಿರುದ್ದ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.

ಪ್ರತಿಭಟನಾ ಮೆರವಣಿಗೆ ವೇಳೆ ಒಂದು ಧರ್ಮವನ್ನು ಉಲ್ಲೇಖಿಸಿ ಕೀಳುಮಟ್ಟದ ಘೋಷಣೆ ಕೂಗಿ ಗಲಭೆಗೆ ಪ್ರಚೋದಿಸಲಾಗಿದ್ದು, ಆಕೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕುಶಲ್ ಹರುವೇಗೌಡ ದೂರು ದಾಖಲಿಸಿದ್ಧಾರೆ.

ಕೆಲ ಬಿಜೆಪಿ ನಾಯಕರು ಮದ್ದೂರಿನ ಉದ್ವಿಗ್ನ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಮೇಲೆ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ, ಪ್ರಚೋದನೆಗೊಳಗಾಗದ ಹೆಣ್ಣುಮಗಳೊಬ್ಬಳು ಮುಸಲ್ಮಾನ ಧರ್ಮವನ್ನು ಉಲ್ಲೇಖಿಸಿ ಕೆಟ್ಟ ಶಬ್ದಗಳಿಂದ ನಿಂದಿಸುತ್ತಿರುವುದು ಬೆಳಕಿಗೆ ಬಂದಿದೆ. ಆಕೆಯ ವಿಡಿಯೊವಿದ್ದ ಇನ್ಸಾಗ್ರಾಂ ID ಯನ್ನು ಲಗತ್ತಿಸಿದ್ದೇನೆ, ಇದರ ಆಧಾರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಚೋದಿಸುವ ಮತ್ತು ಪ್ರಚೋದನೆಗೊಳಗೊಂಡು ಶಾಂತಿ ಕೆಡಿಸುವವರಿಂದ ರಾಜ್ಯವನ್ನು ಕಾಪಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ