Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಾತಿ ಗಣತಿ| ಪತ್ರಕರ್ತರಿಗೆ ರಾಹುಲ್ ಗಾಂಧಿ ಕೇಳಿದ ಪ್ರಶ್ನೆ ದೇಶದ ವಾಸ್ತವಕ್ಕೆ ಹಿಡಿದ ಕನ್ನಡಿ- ನಟ ಕಿಶೋರ್

ಜಾತಿಜನಗಣತಿಯ ಪ್ರಾಮುಖ್ಯತೆ ಕುರಿತು ವಿಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಕರ್ತರಿಗೆ ಕೇಳಿದ ಪ್ರಶ್ನೆಯು ಇಂದಿನವರೆಗೆ ಧರ್ಮದ ಮುಸುಕಲ್ಲಿ ಮುಚ್ಚಿಟ್ಟ ಡೆಮಾಕ್ರೆಸಿಯ ತಾಯಿ ಭಾರತ ದೇಶದ ಕಠೋರ ವಾಸ್ತವಕ್ಕೆ, ಸತ್ಯಕ್ಕೆ ಕನ್ನಡಿ ಹಿಡಿದದ್ದಂತೂ ಸತ್ಯ.. ಎಂದು ಬಹುಭಾಷಾ ನಟ ಕಿಶೋರ್ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರ ಪೈಕಿ ದಲಿತ ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರು ಎಷ್ಟು ಜನ ಇದ್ದಾರೆ ಎಂಬುದನ್ನು ಕೈ ಎತ್ತಿ ತೋರಿಸುವಂತೆ ಕೇಳಿದ್ದರು. ಈ ವಿಚಾರವಾಗಿ ನಟ ಕಿಶೋರ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Kishore Kumar Huli (@actorkishore)

“>

”ಜಾತಿಜನಗಣತಿಯ ಪ್ರಾಮುಖ್ಯತೆಯ ಬಗೆಗಿನ ಪತ್ರಿಕಾ ಗೋಷ್ಠಿಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಅಚಾನಕ್ ಪ್ರಶ್ನೆ- ಈ ಕೋಣೆಯಲ್ಲಿ ಎಷ್ಟು ಜನ ಓಬಿಸಿ, ದಲಿತರು ಮತ್ತು ಆದಿವಾಸಿಗಳಿದ್ದೀರಿ??
ಈ ಪ್ರಶ್ನೆ ಇಂದಿನವರೆಗೆ ಧರ್ಮದ ಮುಸುಕಲ್ಲಿ ಮುಚ್ಚಿಟ್ಟ ಡೆಮಾಕ್ರೆಸಿಯ ತಾಯಿ ಭಾರತ ದೇಶದ ಕಠೋರ ವಾಸ್ತವಕ್ಕೆ, ಸತ್ಯಕ್ಕೆ ಕನ್ನಡಿ ಹಿಡಿದದ್ದಂತೂ ಸತ್ಯ..” ಎಂದು ಹೇಳಿದ್ದಾರೆ.

”ತುಂಬಿದ ಸಭೆಯಲ್ಲಿ ಒಬ್ಬ ಓಬಿಸಿ, ದಲಿತ, ಆದಿವಾಸಿ ಪತ್ರಕರ್ತನೂ ಇರಲಿಲ್ಲ. (ದೇಶದಲ್ಲಿ ಇವರ ಒಟ್ಟು ಸಂಖ್ಯೆ ಸುಮಾರು 70% ). ಸಮಾನತೆಯ ಢೋಂಗಿ ನಾಟಕವಾಡುವ ಅಧಿಕಾರ ಹಿಡಿದವರ ರಾಜಕೀಯ ದಾಳ, ಪ್ರಮುಖ ಬಂಡವಾಳ, ಯಾವುದನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲೂ ತಯಾರಿದ್ದರೋ ಆ ಮಾಸ್ಟರ್ ಸ್ಟ್ರೋಕ್ ‘ಸನಾತನ ಧರ್ಮ’ದ ಅರ್ಥ ಹುಡುಕುತ್ತಿದ್ದ ನನಗೆ ಇದರಿಂದ ಉತ್ತರ ಸಿಕ್ಕಂತಾಯ್ತು” ಎಂದು ಬರೆದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!