Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಮಧ್ಯಪ್ರವೇಶ ಮಾಡಿದರೆ ಮಾತ್ರ ಕಾವೇರಿ ಸಮಸ್ಯೆಗೆ ಪರಿಹಾರ: ನಟ ಶಿವರಾಜ್ ಕುಮಾರ್

ತಮಿಳುನಾಡು-ಕರ್ನಾಟಕದ ನಡುವೆ ಜಟಿಲವಾಗಿರುವ ಕಾವೇರಿ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದರೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ, ಕಷ್ಟಕಾಲದ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮಾತುಕತೆಗೆ ಮುಂದಾಗ ಬೇಕಾಗಿದೆ, ಎರಡು ಸರ್ಕಾರಗಳ ಜೊತೆ ಮಾತನಾಡಿದರೆ ಸಂಕಷ್ಟದ ಸನ್ನಿವೇಶ ಬಗೆಹರಿಯಲಿದೆ ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿದರು.

ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕರಡೀಗೌಡರ ಸ್ಮರಣಾರ್ಥ ನೀಡುವ  ನೀಡುವ ಕಲಾಕೌಸ್ತುಭ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಅವರು ಸುದ್ದಿಗಾರಗೊಂದಿಗೆ ಮಾತನಾಡಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಮಾತುಕತೆ ನಡೆಸಬೇಕು. ಕಾವೇರಿ ವಿಚಾರದಲ್ಲಿ ರೈತರ ಪರ ಸದಾ ಕಾಲ ನಿಲ್ಲುತ್ತೇವೆ, ಹೋರಾಟದ ಮೂಲಕ ಆಳುವ ಸರ್ಕಾರದ ಮೇಲೆ ಒತ್ತಡ ತರಬೇಕು, ಯಾವ ರೀತಿ ಒತ್ತಡ ತರಬೇಕು ಎಂಬುದರ ಬಗ್ಗೆ ಎಲ್ಲರೂ ಕುಳಿತು ತೀರ್ಮಾನ ಮಾಡಿದರೆ ಒಳ್ಳೆಯದು, ಕನ್ನಡಿಗರ ಹೋರಾಟ ದೊಡ್ಡ ಮಟ್ಟದಾಗಿರಬೇಕು. ಬೆಂಕಿ ಹಚ್ಚಿ ಆಕ್ರೋಶ ಮಾಡುವುದಲ್ಲ, ಎಲ್ಲರಿಗೂ ಕಿಚ್ಚು ಇರುತ್ತೆ ತಾಳ್ಮೆಯಿಂದ ಹೋರಾಟ ಮಾಡಬೇಕು. ಎಲ್ಲರೂ ಒಗ್ಗೂಡಿ ರೈತರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕೆಂದರು.

ನಾನು ರಾಜಕೀಯಕ್ಕೆ ಬರುವುದಿಲ್ಲ

ರಾಜಕೀಯ ಪ್ರವೇಶ ಮಾಡುವ ಪ್ರಶ್ನೆಯೇ ಇಲ್ಲ, ನಾನು ರಾಜಕೀಯಕ್ಕೆ ಬರುವುದಿಲ್ಲ, ನನಗೆ ಸಿನಿಮಾ ಕ್ಷೇತ್ರದಲ್ಲಿ ಸಂತೃಪ್ತಿದೆ, ಅಷ್ಟೇ ಸಾಕು,ಗೀತಾ ಶಿವರಾಜ್ ಕುಮಾರ್ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರಲಿದ್ದಾರೆ ಅವರು ಯಾವ ಕ್ಷೇತ್ರದಲ್ಲಿ ಸ್ವರ್ದೆ ಮಾಡುತ್ತಾರೋ ಗೊತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತಾರೆ, ಅವರ ಜೊತೆ ನಾನು ಇರುತ್ತೇನೆ ಎಂದು ಸ್ಪಷ್ಟಪಡಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಹೆಸರಲ್ಲಿ ನನಗೆ ಪ್ರಶಸ್ತಿ ದೊರೆತಿರುವುದು ಸಂತೋಷದ ವಿಚಾರ, ಅಷ್ಟೇ ಸಂಭ್ರಮದಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದರು.

ಘೋಸ್ಟ್ ಚಲನಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ, ವಿಭಿನ್ನ ಮಾದರಿಯ ಚಿತ್ರವನ್ನು ಕನ್ನಡಿಗರು ಸ್ವೀಕರಿಸಿರುವುದು ಖುಷಿಯ ವಿಚಾರ, ಜನರ ಪ್ರೋತ್ಸಾಹ ಸಿಕ್ಕರೆ ಒಳ್ಳೆಯ ಸಿನಿಮಾ ಮಾಡಲು ಸಾಧ್ಯ, ಮಾಮೂಲಿ ಚಲನಚಿತ್ರ ಮಾಡೋದು ಬೇರೆ, ಇಂತಹ ಸಿನಿಮಾ ಬೇರೆ. ಹೊರ ರಾಜ್ಯದಲ್ಲೂ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ, ಕೆಜಿಎಫ್, ಕಾಂತಾರ, ವೇದ ಸಿನಿಮಾ ಒಂದು ಮಟ್ಟಕ್ಕೆ ತಲುಪಿತ್ತು, ಘೋಸ್ಟ್ ಕೂಡ ದೊಡ್ಡ ಮಟ್ಟಕ್ಕೆ ಹೋಗುತ್ತಿದೆ ಹರ್ಷ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!