Thursday, September 19, 2024

ಪ್ರಾಯೋಗಿಕ ಆವೃತ್ತಿ

2028ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಸೇರ್ಪಡೆ

2028ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಸ್ಥಾನವನ್ನು ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌  ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

1900ರ ಮೊದಲು ಕ್ರಿಕೆಟ್‌ ಒಲಿಂಪಿಕ್ಸ್‌ನ ಭಾಗವಾಗಿತ್ತು. ಆ ಬಳಿಕ ರದ್ದಾಗಿತ್ತು. 2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕೂಡ ಇರಲಿದೆ. ಒಲಿಂಪಿಕ್ಸ್‌ನಲ್ಲಿ  T20 ಮಾದರಿಯ ಕ್ರಿಕೆಟ್‌ ಪಂದ್ಯ ಇರಲಿದೆ. ಇದರಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಕ್ರಿಕೆಟ್‌ ಪಂದ್ಯ ನಡೆಯಲಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯಕಾರಿ ಮಂಡಳಿಯು, ಲಾಸ್ ಏಂಜಲೀಸ್ ಕ್ರೀಡಾಕೂಟದ ಸಂಘಟಕರ ಈ ಕ್ರೀಡೆಯನ್ನು ಒಲಿಂಪಿಕ್ಸ್‌ಗೆ ಸೇರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಪುರುಷರ ಮತ್ತು ಮಹಿಳಾ ತಂಡಗಳ ನಡುವೆ T20 ಸ್ವರೂಪದ ಕ್ರಿಕೆಟ್‌ ಪಂದ್ಯ ಮತ್ತು  ಬೇಸ್‌ಬಾಲ್-ಸಾಫ್ಟ್‌ಬಾಲ್, ಫುಟ್‌ಬಾಲ್,  ಕೂಡ ನಡೆಯಲಿದೆ.

ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು ಮಾತನಾಡಿ, ಕ್ರಿಕೆಟ್ ಮತ್ತು ಇತರ ನಾಲ್ಕು ಕ್ರೀಡೆಗಳನ್ನು- ಲಾಸ್ ಏಂಜಲೀಸ್ ಗೇಮ್ಸ್ 2028ಕ್ಕೆ ಮಾತ್ರ ಸೇರಿಸುವುದಾಗಿದೆ. ಇದು ಅಮೇರಿಕನ್ ಕ್ರೀಡಾ ಸಂಸ್ಕೃತಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!