Sunday, November 22, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಜು.29ಕ್ಕೆ ಆದಿಚುಂಚನಗಿರಿ ವಿ.ವಿ 5ನೇ ಘಟಿಕೋತ್ಸವ

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವವು ಇದೇ ಜುಲೈ ೨೯ರಂದು ಬೆಳಿಗ್ಗೆ ೧೦:೩೦ಕ್ಕೆ ಬಿಜಿಎಸ್ ಸಭಾಂಗಣದಲ್ಲಿ ಜರುಗಲಿದೆ ಎಂದು ಕುಲಾಧಿಪತಿ ಎಸ್ ಎನ್ ಶ್ರೀಧರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ಗೌರವ ಅತಿಥಿಗಳಾಗಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಭಾಗವಹಿಸುವರು. ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್ ಎನ್ ಶ್ರೀಧರ, ಕುಲಸಚಿವ ಡಾ ಸಿ ಕೆ ಸುಬ್ಬರಾಯ, ಕುಲಸಚಿವ (ಮೌಲ್ಯಮಾಪನ) ಡಾ. ನಾಗರಾಜ್ ಉಪಸ್ಥಿತರಿರುವರು ಎಂದರು.

೯೬೮ ವಿದ್ಯಾರ್ಥಿನಿಯರಿಗೆ ೯೧೨ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರ ಹಾಗೂ ೨೦ ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪುರಸ್ಕಾರ ನೀಡಲಾಗುವುದು. ಘಟಿಕೋತ್ಸವ ಪ್ರಮಾಣ ಪತ್ರ ಪಡೆಯುತ್ತಿರುವರಲ್ಲಿ ಶೇ. ೬೫ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಂಬುದು ಸಂತೋಷದ ಸಂಗತಿ ಎಂದರು.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ : ಮೆಡಿಸಿನ್ ವಿಭಾಗದಲ್ಲಿ ರೇಖ ಎಸ್ ಅವರಿಗೆ ಕಣಗಲ್ ಎಲ್ ಸತ್ಯನಾರಾಯಣ ದತ್ತಿ ಪುರಸ್ಕಾರ, ನರ್ಸಿಂಗ್ ವಿಭಾಗದಲ್ಲಿ ಮಂಪಿ ಡೈ ರವರಿಗೆ ಚಂದ್ರಶೇಖರ್ ಶೆಟ್ಟಿ ದತ್ತಿ ಪುರಸ್ಕಾರ, ಓಬಿಜಿ ವಿಭಾಗದಿಂದ ದೀಕ್ಷಿತ ಕೆ ಅಯ್ಯರ್ ರವರಿಗೆ ನಂಜಮ್ಮ ಲಕ್ಷ್ಮೇಗೌಡ ದತ್ತಿ ಪುರಸ್ಕಾರ, ಮೆಡಿಸಿನ್ ವಿಭಾಗದಿಂದ ದರ್ಶನ್ ಹೆಚ್ ರವರಿಗೆ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಸುಶೀಲ ಜಯರಾಮ್ ದತ್ತಿ ಪುರಸ್ಕಾರ, ಜಯಪ್ರಕಾಶ್ ನಾಯರ್ ಸಂಶೋಧನಾ ಶ್ರೇಷ್ಠ ಪ್ರಶಸ್ತಿಯನ್ನು ಪ್ರೊ.ಪ್ರಕಾಶ್ ಎನ್ ಗೌಂಡಣ್ಣನವರ್ರವರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿದ್ದ ಕುಲ ಸಚಿವ ಡಾ.ಸಿ.ಕೆ. ಸುಬ್ಬರಾಯ ಮಾತನಾಡಿ ಘಟಿಕೋತ್ಸವವನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ. ಸಾಧಕರು ಮತ್ತು ಸಾಧಕ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರೋಹಿತ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ