Monday, November 23, 2026

ಪ್ರಾಯೋಗಿಕ ಆವೃತ್ತಿ

ಮತ್ತೇ ನಾಗಮಂಗಲ ಸರ್ಕಾರಿ ಬಸ್ ನಿಲ್ದಾಣ ನೀರಿನಲ್ಲಿ ಮುಳುಗಡೆ


  • ಶಾಶ್ವತ ವ್ಯವಸ್ಥೆ ಕಲ್ಪಿಸಿಲು ವಿಫಲ 

  • ಎಚ್ಚೆತ್ತುಕೊಳ್ಳದ ಪುರಸಭೆ,  ತಾಲ್ಲೂಕು ಆಡಳಿತ

ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ನಾಗಮಂಗಲ ಪಟ್ಟಣಕ್ಕೆ ಹೊಂದಿಕೊಂಡಿರುವ ಹಿರಿಕೆರೆಯಲ್ಲಿ ಕೋಡಿಯಲ್ಲಿ ನೀರು ಉಕ್ಕಿ ಹರಿದ ನೀರಿನ ಪರಿಣಾಮ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಪೆಟ್ರೋಲ್ ಬಂಕ್ ಸೇರಿದಂತೆ ಜಮೀನುಗಳು ನೀರಿನಿಂದ ಜಲಾವೃತವಾಗಿ ಅಪಾರ ನಷ್ಷ ಸಂಭವಿಸಿದೆ.

ಮಳೆ ಆರಂಭವಾದ ಕೂಡಲೇ ಎಚ್ಚೆತ್ತ ಕೆಎಸ್ಆರ್ ಟಿಸಿ ಸಿಬ್ಬಂದಿ ಡಿಪೋದಲ್ಲಿದ್ದ 60ಕ್ಕೂ ಹೆಚ್ಚು ಬಸ್ ಗಳನ್ನು ಬೀದರ್- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ನಿಲ್ಲಿಸಿ ಆಗುವ ನಷ್ಟವನ್ನು ತಪ್ಪಿಸಿದರು.
ಕೋಡಿ ನೀರು ಸರಾಗವಾಗಿ ಹರಿದು ಹೋಗಲು ರಾಜ ಕಾಲುವೆಗಳ ಒತ್ತುವರಿಯೇ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಭಾರಿ ಮಳೆಗೆ ಪಟ್ಟಣದ ಸೂಳೆಕೆರೆಯಲ್ಲಿ ಹೆಚ್ಚಾದ ನೀರು ಭಾರಿ ಪ್ರಮಾಣದಲ್ಲಿ ಕೋಡಿ ಮೂಲಕ ಹೊರ ಬಂದಿದ್ದರಿಂದ ನೀರು ನಾಗಮಂಗಲ- ಮೈಸೂರು ರಸ್ತೆ ಇಡೀ ರಾತ್ರಿ ಜಲಾವೃತಗೊಂಡಿತು.
ಮಂಡ್ಯ ರಸ್ತೆಯ ಮುಸ್ಲಿಂ ಬ್ಲಾಕ್ ನ ಹಲವು ಮನೆಗಳಿಗೆ ಮತ್ತು ಕುಂಬಾರ ಬೀದಿ ಸನಿಹದ ಹಲವು ಮನೆ ಮತ್ತು ಸಾಮಿಲ್ ಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ.

ಮೈಸೂರು ರಸ್ತೆಯಲ್ಲಿ ರಾಜಕಾಲುವೆ ಪಕ್ಕದಲ್ಲಿದ್ದ ವಿದ್ಯುತ್ ಕಂಬ ಮುರಿದು ಬೀದರ್- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಒಂದು ಪಾರ್ಶ್ವ ಸಂಫೂರ್ಣವಾಗಿ  ಬಂದ್ ಆಗಿತ್ತು.

ಶಾಸಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ರವೀಂದ್ರ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ನೀರಿನಲ್ಲಿ ಮುಳುಗಿರುವ ದೃಶ್ಯವನ್ನು ತೋರಿಸಿದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ ಅವರಿಗೆ ವಿಡಿಯೋ ಕಾಲ್ ಮಾಡಿ ಅಲ್ಲಿನ ದೃಶ್ಯಗಳನ್ನು ತೋರಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ