ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಡುವ, ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರ ಕಂಡು, ಕಳ್ಳರ ರೀತಿ ಓಡು ಹೋಗುವ ಅಧಿಕಾರಿಗಳ ನಡೆ ಬಗ್ಗೆ ಕೂಡಲೇ ಸೂಕ್ತ ತನಿಖೆ ನಡೆಸಲಿ ಕೆ ಆರ್ ಎಸ್ ಪಕ್ಷ ವಿಧಾನಸಭಾ ಅಭ್ಯರ್ಥಿ ಕಿಶೋರ್ ಆಗ್ರಹಿಸಿದರು.
ಕೆ ಆರ್ ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಎಂ ವಿ ರೂಪ ಅವರು ವರ್ಗಾವಣೆ ಆಗಿರುವುದರಿಂದ ಅವರ ಖಾಸಗಿ ನಿವಾಸದಲ್ಲಿ ಕಚೇರಿಯ ಕೆಲಸಗಳು ನಡೆಯುತ್ತಿವೆ ಎಂದು ಆರೋಪ ಕೇಳಿ ಬಂದಿದೆ. ಅವರ ನಿವಾಸದ ಬಳಿ ಕೆ.ಆರ್.ಎಸ್ ಕಾರ್ಯಕರ್ತರು ತೆರಳಿದಾಗ ಶೀಳನೆರೆ ಹೋಬಳಿಯ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಇದ್ದರು ಅವರನ್ನು ನಮ್ಮ ಕಾರ್ಯಕರ್ತರು ನಿಮ್ಮ ಕರ್ತವ್ಯ ಸಮಯದಲ್ಲಿ ನಿಮ್ಮ ವ್ಯಾಪ್ತಿಯಲ್ಲಿ ಇರದೆ ಇಲ್ಲಿ ಏನು ಮಾಡುತ್ತಿದ್ದೀರಿ ? ಎಂದು ಕೇಳಿದಾಗ ತಪ್ಪಿಸಿಕೊಳ್ಳಲು ಓಡಿ ಹೋಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಈ ಅಧಿಕಾರಿಯ ವಿರುದ್ಧ ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕೆ ಆರ್ ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಕೆರೆಮೇಗಲು ಕೊಪ್ಪಲು ಶಂಕರೇಗೌಡ ಮಾತನಾಡಿ, ತಾಲೂಕಿನಲ್ಲಿ ಕೆಲ ಸರ್ಕಾರಿ ಸಾರ್ವಜನಿಕ ಕಚೇರಿಗಳಲ್ಲಿ ಹೆಗ್ಗಿಲ್ಲದೆ ಭ್ರಷ್ಟಾಚಾರಗಳು ನಡೆಯುತ್ತಿವೆ, ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಷ್ಟ್ರಿಯ ಸಮಿತಿಯ ಪಕ್ಷ ಕಾರ್ಯಕರ್ತರಿಗೆ ತಾಲೂಕಿನ ಸಾರ್ವಜನಿಕರೇ ಕೈ ಬಲಪಡಿಸಿದರೆ ಮಾತ್ರ, ಭ್ರಷ್ಟ ಮತ್ತು ಬೇಜವಾಬ್ದಾರಿ ಅಧಿಕಾರಿಗಳು ಮಟ್ಟ ಹಾಕಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಅಧ್ಯಕ್ಷ ರಮೇಶ್ ಗೌಡ, ತಾಲೂಕು ಉಪಾಧ್ಯಕ್ಷ ಮುರುಗೇಶ್, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಸಯ್ಯದ್ ಅಲೀಮ್, ಮಲಿಕ್, ಕಿಕ್ಕೇರಿ ಹೋಬಳಿಯ ಅಧ್ಯಕ್ಷ ಮಾಣಿಕನಹಳ್ಳಿ ಪುಟ್ಟರಾಜು, ನಾಗರಾಜು ಉಪಸ್ಥಿತರಿದ್ದರು.




