Sunday, September 22, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕುಲಾಂತರಿ ಆಹಾರದ ವಿರುದ್ದ ಸೆ.26ರಂದು ಮಾನವ ಸರಪಳಿ

ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಹೊರಡಿಸಿದ್ದು, ಅದು ಕುಲಾಂತರಿ ಬೀಜಗಳನ್ನು ತಂದು ಅದರ ಆಹಾರವನ್ನು ಮಾರುಕಟ್ಟೆಗೆ ಬಿಡುವ ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆ ನಮ್ಮ ದೇಶದ ಸುಸ್ಥಿರ ಮತ್ತು ಸಮರ್ಥನಿಯವಾದ ಹಾಗೂ ಹವಾಮಾನ ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣವುಳ್ಳ ಸಾವಯವ ಕೃಷಿ ಪದ್ಧತಿಗೆ ವಿರುದ್ಧವಾಗಿದೆ ಎಂದು ಸಾವಯವ ಕೃಷಿಕರು ಆಘಾತ ವ್ಯಕ್ತಪಡಿಸಿದ್ದಾರೆ.

ಈ ಕಾನೂನುಗಳಿಂದ ಆಗುವ ದುಷ್ಪರಿಣಾಮ ಇದರ ಬಗ್ಗೆ ತಿಳಿಸಲು ಇದೇ ಸೆ. 26ರಂದು ಅಂದರೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಮಳವಳ್ಳಿ ತಾಲ್ಲೂಕು  ಪಂಚಾಯಿತಿ ಆವರಣದಿಂದ ಹೊರಟು ಅನಂತ ರಾಮ ವೃತ್ತದ ಬಳಿ ಹತ್ತು ನಿಮಿಷ ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕಚೇರಿಗೆ ತೆರಳಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದರಿಂದ ನಮ್ಮ ದೇಶದ ತಳಿಗಳು ನಮ್ಮ ಪದ್ಧತಿ ಸರ್ವನಾಶವಾಗುವ ಪರಿಸ್ಥಿತಿ ತಲೆ ದೊರುತ್ತದೆ, ಆದುದರಿಂದ ಕುಲಾಂತರಿ ತಳಿಯ ಆಹಾರಗಳನ್ನು ತಿರಸ್ಕರಿಸಿ ಹೋರಾಟ ಮಾಡುವ ಸಲುವಾಗಿ ತುಮಕೂರು ಜಿಲ್ಲೆ ದೊಡ್ಡ ಹೊಸೂರು ಗ್ರಾಮದ ಗಾಂಧೀಜಿ ಸಹಜ ಬೇಸಾಯ ಆಶ್ರಮ ಇಲ್ಲಿ ಸತ್ಯಗ್ರಹವನ್ನು ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಇದರ ಪೂರ್ಣ ವಿವರವನ್ನು ಮೇಲಿನ ಕರಪತ್ರದಲ್ಲಿ ವಿವರಿಸಲಾಗಿದೆ.

ಈ ನಾಲ್ಕು ದಿನದಲ್ಲಿ ಮಂಡ್ಯ ಜಿಲ್ಲೆಗೆ ಇದೇ ತಿಂಗಳ 29ನೇ ತಾರೀಕು ಅಂದರೆ ಭಾನುವಾರ ಆಯೋಜಿಸಲಾಗಿದೆ ಇದರ ಬಗ್ಗೆ ನಮ್ಮ ರೈತರಿಗೆ ಮನವರಿಕೆ ಮಾಡಲು ಜೊತೆಗೆ

ಈ ಒಂದು ಕಾನೂನು ರೈತರಿಗೆ ಮರಣಶಾಸನ ವಾಗಿರುವುದರಿಂದ ತೀವ್ರ ಪ್ರತಿಭಟನೆ ಮಾಡುವ ಮೂಲಕ ಈ ಕಾನೂನನ್ನು ರದ್ದುಗೊಳಿಸುವ ಮಹತ್ಕಾರ್ಯಕ್ಕೆ ರೈತರು ಕೈಜೋಡಿಸುವಂತೆ ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಳವಳ್ಳಿ ಅಧ್ಯಕ್ಷ ಎಂ ಎನ್ ಮಹೇಶ್ ಕುಮಾರ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!