Thursday, September 19, 2024

ಪ್ರಾಯೋಗಿಕ ಆವೃತ್ತಿ

ನ.12-13 : ಕೃಷಿ ಕೂಲಿಕಾರರ 5ನೇ ಜಿಲ್ಲಾ ಸಮ್ಮೇಳನ

ಕೃಷಿ ಕೂಲಿಕಾರರ 5ನೇ ಮಂಡ್ಯ ಜಿಲ್ಲಾ ಸಮ್ಮೇಳನವನ್ನು ನ.12 ಮತ್ತು 13ರಂದು ಮಂಡ್ಯನಗರ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.12ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಬಹಿರಂಗ ಸಭೆಯನ್ನು ಅಖಿಲ ಭಾರತ ಕೃಷಿ ಕೂಲಿಕಾರ ಸಂಘ ಪ್ರಧಾನ ಕಾರ್ಯದರ್ಶಿ ಜಿ.ವೆಂಕಟ್‌ ಉದ್ಘಾಟನೆ ಮಾಡುವರು. ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಸ್ವಾಗತ ಭಾಷಣ ಮಾಡುವರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಬಿ.ಹನುಮೇಶ್ ಪ್ರಾಸ್ತಾವಿಕ ನುಡಿ ನುಡಿಯುವರು. ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾಧ್ಯಕ್ಷ  ಎಂ.ಪುಟ್ಟಮಾದು ಅಧ್ಯಕ್ಷತೆ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯ ಉಪಾಧ್ಯಕ್ಷ ಜಿ.ಎನ್‌. ನಾಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೆರಾ, ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ, ಕೆ.ಪಿ.ಆರ್.ಎಸ್. ಜಿಲ್ಲಾ ಮುಖಂಡ ಟಿ.ಎಲ್.ಕೃಷ್ಣೇಗೌಡ ಭಾಗವಹಿಸುವರು ಎಂದರು.

ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಬಹುಮಾನ ವಿತರಣೆ ಮಾಡುವರು. ವಿಶೇಷ ಆಹ್ವಾನಿತರಾಗಿ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಪಿ.ಶಂಕರೇಗೌಡ, ವಕೀಲ ಎಂ.ಜೆ.ಜೈನ್, ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಎಂ.ಬಿ.ನಾಗಣ್ಣಗೌಡ, ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷ ಭಾಗವಹಿಸುವರು ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಶಿವಕುಮಾರ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಸುಶೀಲ, ಡಿ.ಹೆಚ್.ಎಸ್. ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಕರ್ನಾಟಕ ರಾಜ್ಯ ಅಂಗವಿಕಲರು ಮತ್ತು ಪಾಲಕರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ದೊಡ್ಡಮರೀಗೌಡ ಉಪಸ್ಥಿತರಿರುವರು.

ಸಂಜೆ 5 ಗಂಟೆಗೆ ನಡೆಯುವ ಪ್ರತಿನಿಧಿಗಳ ಸಮಾವೇಶದಲ್ಲಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ. ವಿಶ್ವನಾಥ್ ಭಾಗವಹಿಸುವರು ಎಂದರು.

ನ.13ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ರಾಜ್ಯ ಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಪ್ರೊ.ಜಯಪ್ರಕಾಶ ಗೌಡ ವಹಿಸಲಿದ್ದು, ”ಕೃಷಿ ಬೆಳೆಯಲಿ ಕೃಷಿ ಕೂಲಿಕಾರರು ಉಳಿಯಲಿ- ಕೃಷಿಕರು ಮುನ್ನೆಡೆಯಲಿ” ಎಂಬ ವಿಷಯ ಕುರಿತು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಚಂದ್ರಪ್ಪ ಹೊಸ್ಕೆರಾ, ಟಿ.ಯಶವಂತ್, ಆರ್.ಮೋಹನ್ ಕುಮಾರ್, ಮಲ್ಲರಾಜು ವಿಷಯ ಮಂಡಿಸುವರು. ವಿಚಾರವಾದಿ ಪ್ರೊ.ಹುಲ್ಕೆರೆ ಮಹದೇವು, ವಕೀಲ ಲಕ್ಷ್ಮಣ್ ಚೀರನಹಳ್ಳಿ ಉಪಸ್ಥಿತರಿರುವರು ಎಂದು ಹೇಳಿದರು.

ಮಧ್ಯಾಹ್ನ 1.30ಕ್ಕೆ ಸಮಾರೋಪ ಸಭಾರಂಭದಲ್ಲಿ ನಡೆಯಲಿದ್ದು, ಜಿ.ಎನ್.ನಾಗರಾಜು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕೆ.ಪಿ.ಆರ್.ಎಸ್. ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಕುಳವು ಸಮಾಜದ ರಾಜ್ಯಾಧ್ಯಕ್ಷ ಗೋಪಾಲ್ ತಿರುಮಲಪುರ ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಕೂಲಿಕಾರರ ಸಂಘದ ಪದಾಧಿಕಾರಿಗಳಾದ ಶಿವಮಲ್ಲಯ್ಯ, ಆರ್.ರಾಜು, ಟಿ.ಪಿ.ಅರುಣ್ ಕುಮಾರ್, ಎನ್.ಸುರೇಂದ್ರ, ರಾಮಣ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!