Friday, November 20, 2026

ಪ್ರಾಯೋಗಿಕ ಆವೃತ್ತಿ

ಗುಜರಾತ್ | 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ : ನೂರಾರು ಜನರ ಸಾವಿನ ಶಂಕೆ !

ಏರ್ ಇಂಡಿಯಾ ವಿಮಾನದಲ್ಲಿ 242 ಪ್ರಯಾಣಿಕರನ್ನು ಲಂಡನ್‌ಗೆ ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡು ಅಪಘಾತಕ್ಕೀಡಾಗಿದೆ.

ಈ ಅಪಘಾತದಲ್ಲಿ ನೂರಾರು ಜನ ಸಾವಿಗೀಡಾರುವ ಶಂಕೆ ವ್ಯಕ್ತವಾಗಿದೆ.

“>

ಬೋಯಿಂಗ್ 787-8 ಡ್ರೀಮ್‌ಲೈನರ್ ಫ್ಲೈಟ್ AI 171, 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಗುಜರಾತ್ ಅಹಮದಾಬಾದ್ ಏರ್ ಪೋರ್ಟ್ ಬಳಿ ವಿಮಾನ ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸಾವು ನೋವಿನ ಸಂಖ್ಯೆ ಇನ್ನಷ್ಟೇ ತಿಳಿದು ಬರಬೇಕಿದೆ.

“>

ವಿಮಾನವು ಬೋಯಿಂಗ್ 787-8 ಡ್ರೀಮ್‌ ಲೈನರ್ ಆಗಿದ್ದು, ಅದರಲ್ಲಿ 242 ಜನರು ಇದ್ದರು,
ಫ್ಲೈಟ್‌ ರಾಡಾರ್ 244 ಪ್ರಕಾರ, ಜೆಟ್ ವಿಮಾನವು ದೆಹಲಿಯಿಂದ ಅಹಮದಾಬಾದ್‌ಗೆ ಮುಂಜಾನೆ ಹಾರಿತ್ತು.
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ವಿಮಾನದಲ್ಲಿದ್ದರು.  ವಿಜಯ್ ರೂಪಾನಿ ಪರಿಸ್ಥಿತಿ ಏನಾಗಿದೆ ಎಂದು ಇನ್ನೂ ಖಚಿತವಾಗಿ ತಿಳಿದ ಬಂದಿಲ್ಲ. ಇದೇ ವಿಮಾನದಲ್ಲಿ 52 ಬ್ರಿಟಿಷ್ ನಾಗರೀಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ದಿತ್ತು. ವಿಮಾನ ಅಪಘಾತಕ್ಕೀಡಾದ ಮೇಘಾನಿ ಪ್ರದೇಶದಲ್ಲಿ ಕಪ್ಪು ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಅಹಮದ್ ಬಾದ್ ನಿಂದ ಹೊರಡಿರುವ ಎಲ್ಲಾ ವಿಮಾನಗಳನ್ನು ಸದ್ಯಕ್ಕೆ ಸ್ಥಗಿತ ಗೊಳಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ