Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರಧ್ವಜ ಅವಮಾನಿಸುವುದು ಶಿಕ್ಷಾರ್ಹ ಅಪರಾಧ: ಆಲ್ ಇಂಡಿಯಾ ಲಾಯರ್ಸ್ ಯೂನಿಯನ್

ರಾಷ್ಟ್ರ ಲಾಂಛನಗಳ ಗೌರವಕ್ಕೆ ಚ್ಯುತಿ ತರುವುದನ್ನು ತಡೆಯುವ ಕಾಯ್ದೆ 1971( prevention of insults to national honour act 1971)ರ ಪ್ರಕಾರ ರಾಷ್ಟ್ರಧ್ವಜವನ್ನು ಅವಮಾನಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಈ ರೀತಿ ಅಪಮಾನಿಸುವವರನ್ನು ಕಾಯ್ದೆಯ ಪ್ರಕಾರ ಮೂರು ವರ್ಷಗಳ ಕಠಿಣ ಶಿಕ್ಷೆಗೆ ಗುರಿ ಮಾಡಬಹುದಾಗಿದೆ ಮತ್ತು ದಂಡವನ್ನು ವಿಧಿಸಬಹುದಾಗಿದೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಬಹಿರಂಗ ಪತ್ರ ಬರೆದು ಮಂಡ್ಯ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರಿಗೆ ತಿಳಿಸಿದೆ.

ಮಂಡ್ಯ ಜಿಲ್ಲೆ ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದಾಗಿ ಹೇಳಿ ಅನುಮತಿ ಪಡೆದು ಅದರ ಬದಲು ಭಗವದ್ವಜವನ್ನೋ ಹನುಮಧ್ವಜವನ್ನೋ ಕೆಲ ಕಿಡಿಗೇಡಿಗಳು ಹಾರಿಸಿದ್ದಾಗಿಯೂ ಆರೋಪಿಗಳನ್ನು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಬೆಂಬಲಿಸಿದ್ದ ಕಾರಣ ಆ ಗ್ರಾಮದಲ್ಲಿ ಪ್ರಕ್ಶುದ್ಧ ವಾತಾವರಣ ಏರ್ಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಆ ಜಾಗದಲ್ಲಿ ಬೇರಾವುದೋ ಧ್ವಜ ಹಾರಿಸುವುದು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆಯೇ ಸರಿ. ಆರೋಪಿಗಳ ಸದರಿ ಕುಕೃತ್ಯ ದೇಶದ್ರೋಹಕ್ಕೆ ಸಮನಾದ ಕೃತ್ಯವಾಗಿದೆ. ರಾಷ್ಟ್ರಧ್ವಜ ಸಂವಿಧಾನಕ್ಕೆ ಅಗೌರವ ತೋರುವುದು ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆ ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಕೇಂದ್ರದ ನಿರ್ಲಕ್ಷ ಧೋರಣೆಯಿಂದ ಕೆಆರ್‌ಎಸ್ ಅಣೆಕಟ್ಟೆ ಬರೆದಾಗಿದೆ. ರಾಜ್ಯವು ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿಲ್ಲ. ಜಿಲ್ಲೆ ಬರದಿಂದ ತತ್ತರಿಸುತ್ತಿದೆ. ಬಾಲ್ಯ ವಿವಾಹ, ಭ್ರೂಣಹತ್ಯೆ ಅಂತ ಸಮಸ್ಯೆಗಳ ಅಂಕಿ ಅಂಶದಲ್ಲಿ ಜಿಲ್ಲೆ ಅಗ್ರಪಂಕ್ತಿಯಲ್ಲಿದೆ, ಎಗ್ಗಿಲ್ಲದೆ ಪರವಾನಿಗೆ ಇಲ್ಲದೆ, ಕೆಲ ಅಯೋಗ್ಯ ರಾಜಕೀಯ ನಾಯಕರಿಂದ ಅಕ್ರಮ ಗಣಿಗಾರಿಕೆ ಸಾಗಿದೆ. ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಇಂತಹ ನೂರಾರು ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿವೆ. ಅವೆಲ್ಲದರ ಕುರಿತು ಹೋರಾಟ ಮಾಡುವುದರ ಬದಲು ಜಿಲ್ಲೆಯ ಕೋಮು ಸಾಮರಸ್ಯವನ್ನು ಹಾಳು ಮಾಡಿ ಇರುವ ಸಮಸ್ಯೆಗಳ ಗಾಯದ ಮೇಲೆ ಈ ರಾಜಕೀಯ ಪಕ್ಷಗಳು ಉಪ್ಪು ಸವರುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ.

ಜಿಲ್ಲೆ ಇದುವರೆಗೆ ಕಾಪಿಟ್ಟುಕೊಂಡು ಬಂದಿರುವ ಕೋಮು ಸಾಮರಸ್ಯವನ್ನು ಹಾಳು ಗೆಡುವುವ ಕೋಮುವಾದಿ ಪಕ್ಷಗಳ ಯತ್ನವನ್ನು ಜಿಲ್ಲಾಡಳಿತ ಕಠಿಣ ಹಸ್ತಗಳಿಂದ ತಡೆಯಬೇಕಿದ್ದು ಜಿಲ್ಲೆಯ ಜನತೆ ಕೂಡ ಕಿಡಿಗೇಡಿಗಳ ಇಂತಹ ಯತ್ನವನ್ನು, ಸಮಾಜದ ಸಾಮರಸ್ಯ, ಆರೋಗ್ಯ, ದೇಶದ ಸಂವಿಧಾನ, ಪ್ರಜಾಪ್ರಭುತ್ವಗಳ ಉಳಿವಿನ ದೃಷ್ಟಿಯಿಂದ ಪ್ರಬಲವಾಗಿ ಪ್ರತಿರೋಧಿಸಬೇಕಿದೆ. ಇಂತಹ ಕಿಡಿಗೇಡಿ ಯತ್ನಗಳು ಕಂಡು ಬಂದ ಸಂದರ್ಭ ಜನ ಅದನ್ನು ವಿಡಿಯೋ ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿಸುವ ಯತ್ನ ಮಾಡಬೇಕು. ಅದು ಜನರ ಕರ್ತವ್ಯ ಕೂಡ ಆಗಿದೆ ಎಂದು ಅವರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!