ಅಲಯನ್ಸ್ ಸೇವಾ ಸಂಸ್ಥೆ ನಮ್ಮದೇಶದಲ್ಲಿ ಆರಂಭವಾಗಿ ವಿದೇಶಗಳಲ್ಲೂ ತನ್ನ ಜಾಲವನ್ನು ವ್ಯಾಪಕವಾಗಿ ಹೊಂದುವ ಮೂಲಕ ಸೇವಾಪರತೆಯೊಂದಿಗೆ ಗುಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಪ್ಪಾಜಿ ಗೌಡ ತಿಳಿಸಿದರು.
ಮದ್ದೂರಿನ ಎಚ್ ಕೆ ಮರಿಯಪ್ಪ ಕಾನ್ವೆಂಟ್ ನಲ್ಲಿ ಅರ್ಜುನಪುರಿ ಅಲಯನ್ಸ್ ಏರ್ಪಡಿಸಿದ್ದ
ನಾಲ್ವಡಿ ಕೃಷ್ಣರಾಜ ಒಢೆಯರ್ ಹಾಗು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಉದ್ಘಾಟನೆ ನೆರವೆರಿಸಿ ಮಾತನಾಡಿದರು.
ಸೇವಾಪರತೆ ಗುಣಾತ್ಮಕ ಕೆಲಸಗಳ ಮೂಲಕ ಅಲಯನ್ಸ್ ಕಾರ್ಯನಿರ್ವಹಿಸುತ್ತಿದೆ
ಇದರ ಭಾಗವಾಗಿ ಇಂದು ಇಬ್ಬರು ಮಹನೀಯರ ಜಯಂತಿ ಹಾಗು ಇಬ್ಬರು ಸಾಧಕರುಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿತ್ವದ ಫಲವಾಗಿ ಹಳೆ ಮೈಸೂರು ಭಾಗದ ಜನರ ಬದುಕು ಸುಧಾರಿಸಲು ಸಹಕಾರಿಯಾಗಿದೆ ಎಂದರು.
ನ ಲಿ ಕೃಷ್ಣ ಮಾತನಾಡಿ ನಾಡಪ್ರಭು ಕೆಂಪೇಗೌಡ ಅವರು ವಿಜಯನಗರದ ವೈಭವದಿಂದ ಪ್ರಭಾವಿತರಾಗಿ ಬೆಂಗಳೂರನ್ನು ದೂರದೃಷ್ಟಿತ್ವದೊಂದಿಗೆ ಅಂದಿನ ಕಾಲಕ್ಕೆ ರೂಪಿಸಿದ ಉತ್ತಮ ಆಡಳಿತಗಾರ ಹಾಗೂ ಮಹಾ ಮನವತಾವಾದಿ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುಟ್ಟಲಿಂಗಯ್ಯ ಅವರು ಅಲಯನ್ಸ್ ಸೇವಾ ಸಂಸ್ಥೆ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗು ನಾಡಪ್ರಭು ಕೆಂಪೇಗೌಡ ಜಯಂತಿ ಜೊತೆಗೆ ಸಮಾಜಪರತೆ ಹಾಗೂ ಸ್ಪಂದನಾಶೀಲ ಆಡಳಿತ ನೀಡುವ ಇಬ್ಬರು ಸಾಧಕರಿಗೆ ಸನ್ಮಾನಿಸುವ ತಿರ್ಮಾನ ಸ್ವಾಗತಾರ್ಹವಾದದ್ದು ಎಂದರು.
ಇಂಡಿಯಾ ಬುಕ್ ಆಪ್ ರೆಕಾರ್ಡ್ ನಲ್ಲಿ ಪಂಚಾಯುತ್ ರಾಜ್ ದಿನದಿ ಎಕ ಕಾಲದಿ ಮನೆ ಮುಂದೆ ರಂಗೋಲಿ ಬಿಟ್ಟು ಪಂಚಾಯುತ್ ರಾಜ್ ಪರ ಉದ್ಘೋಷ ಬರೆದು ದಾಖಲೆಗೆ ಸೇರಿದ್ದನ್ನ ಪರಿಗಣಿಸಿ ಅಣ್ಣೂರು ಗ್ರಾ ಪಂ ಪಿ ಡಿ ಓ ಅಶ್ವಿನಿ ಹಾಗೂ ಸಮಾಜ ಪರತೆ ಗಾಗಿ ನ.ಲಿ. ಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ಎಚ್ ಕೆ ವೀರಣ್ಣಗೌಡ ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಪೂರ್ವ ಚಂದ್ರ,
ಅರ್ಜುನಪುರಿ ಅಲಯನ್ಸ್ ನ ಸಂಪುಟ ಕಾರ್ಯದರ್ಶಿ ಹಾಗೂ ವಕೀಲರಾದ ನಾಗರಾಜು ವಳಗೆರೆಹಳ್ಳಿ, ಅರ್ಜುನ ಪುರಿ ಅಲಯನ್ಸ್ ನ ಸಂಪುಟ ಸದಸ್ಯರಾದ ವಕೀಲರಾದ ಮಾ ಜ ಚಿಕ್ಕಣ್ಣ ಗೌಡ, ಅರ್ಜುನಪುರಿ ಅಲಯನ್ಸ್ ಕಾರ್ಯದರ್ಶಿ ಮುಖ್ಯ ಶಿಕ್ಷಕ ರವಿ,
ಅರ್ಜುನಪುರಿ ಅಲಯನ್ಸ್ ನ ಖಜಾಂಚಿ ಸುಜಾತ,
ಸಹಕಾರ್ಯದರ್ಶಿ ರಂಜಿತಾ ಉಪಸ್ಥಿತರಿದ್ದರು.




