ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಪ್ರಯುಕ್ತ ಪಾಂಡವಪುರ ಪಟ್ಟಣದ ಅಂಬಿ ಕ್ಯಾಂಟೀನ್ ನಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಳಹಳ್ಳಿ ಅಂಬಿ ಸುಬ್ಬಣ್ಣ ನೇತೃತ್ವದಲ್ಲಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಿದರು.
ಪಾಂಡವಪುರ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ ಶಿಲ್ಪಶ್ರೀ, ಮಕ್ಕಳ ತಜ್ಞರಾದ ಡಾ. ರವಿಕುಮಾರ್ ಹಾಗೂ ಡಾ. ರಾಜ್ ಕುಮಾರ್ ಅಪ್ಪಟ ಅಭಿಮಾನಿ ಪಾಂಡವಪುರದ ಲಕ್ಷ್ಮಿ ಚಿತ್ರಮಂದಿರದ ವ್ಯವಸ್ಥಾಪಕರಾದ ಬಾಬಣ್ಣ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಂಬರೀಶ್ ಅಭಿಮಾನಿ ಹರಳಹಳ್ಳಿ ಅಂಬಿ ಸುಬ್ಬಣ್ಣ ಮಾತನಾಡಿ, ಕಳೆದ 30 ವರ್ಷದಿಂದ ಅಂಬರೀಶ್ ಅಣ್ಣನವರ ಅಭಿಮಾನಿಯಾಗಿದ್ದೇನೆ. ನನ್ನ ಪಾಲಿಗೆ ಅಂಬರೀಶ್ ಅವರು ದೇವರಿದ್ದಂತೆ. ನಮ್ಮ ಅಂಬಿ ಕ್ಯಾಂಟೀನ್ ನಲ್ಲಿ ಪ್ರತಿದಿನ ಅಂಬರೀಶ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸ್ಮರಿಸಿಕೊಳ್ಳುತ್ತೇನೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಅಂಬರೀಶ್ ಅವರ ಜನ್ಮದಿನದ ಪ್ರಯುಕ್ತ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರವಿಕುಮಾರ್ ಮತ್ತು ಡಾ.ಶಿಲ್ಪಶ್ರೀ ಅವರ ಸೇವಾ ಕಾರ್ಯವನ್ನು ಗುರುತಿಸಿ ಅಂಬರೀಶ್ ಅಭಿಮಾನಿಗಳು ಸನ್ಮಾನಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಅಂಬರೀಶ್ ಅಭಿಮಾನಿಗಳಾದ ಆಸ್ಕರ್, ಲಿಂಗರಾಜು, ಗ್ಯಾಸ್ ತಮ್ಮಣ್ಣ, ರೈಟರ್ ಸ್ವಾಮಿ ಗೌಡ, ರೂಪೇಶ್, ಹರಿಪ್ರಸಾದ್, ಅಭಿಷೇಕ್, ವಿನಯ್ ಕುಮಾರ್, ಚಂದ್ರು, ಬೇವಿನಕುಪ್ಪೆ ಪ್ರಕಾಶ್, ಶಿವಕುಮಾರ್, ಚೇತನ್ ಸೇರಿದಂತೆ ಅನೇಕರಿದ್ದರು.