Monday, February 26, 2024

ಪ್ರಾಯೋಗಿಕ ಆವೃತ್ತಿ

ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ 37ನೇ ವಾರ್ಷಿಕೋತ್ಸವ

ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ 32ನೇ ವಾರ್ಷಿಕೋತ್ಸವ ಹಾಗೂ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭ ಇಲ್ಲಿನ ಬಾಲಾಜಿ ಸಮುದಾಯ ಭವನದಲ್ಲಿ ನೆರವೇರಿಸಲಾಯಿತು.

ಸಮಾರಂಭದ ಉದ್ಘಾಟನೆಯನ್ನು ನಿ.ಪ್ರ.ಶಿವಾನುಭಾವ ಚರಮೂರ್ತಿ ಶಿವರುದ್ರ ಮಹಾಸ್ವಾಮಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ಸರ್ವ ಆತ್ಮಗುರುಗಳ ತಂದೆಯಾದ ವಿಶ್ವ ರಕ್ಷಕ, ವಿಶ್ವ ಕಲ್ಯಾಣಾಧಿಕಾರಿ ಮತ್ತು ಸರ್ವಧರ್ಮ ಸದ್ಗತಿದಾತ ,ಪರಮಪಿತ ಪರಮಾತ್ಮನು ಒಬ್ಬನೇ ಆಗಿದ್ದು, ವಿಶ್ವದಲ್ಲಿ ಶಾಂತಿಯನ್ನು ಕಾಪಾಡುವ ಕರ್ತವ್ಯವನ್ನು ಮಾಡುತ್ತಿದ್ದಾನೆ.

ಅವನನ್ನು ಯಥಾರ್ಥವಾಗಿ ಅರಿಯುವುದು.ಪರಸ್ಪರರಲ್ಲಿ ಪ್ರೀತಿ ಭಾವನೆ ಜಾಗ್ರತರಾಗುವುದರಿಂದ ವಿಶ್ವದಲ್ಲಿ ಶಾಂತಿ ಪುನರ್ ಸ್ಥಾಪನೆ ಮಾಡಬಹುದಾಗಿದೆ ಎಂದು ಹೇಳಿದರು. ಬಿ.ಕೆ.ಪ್ರಭಾಮಣಿ ಮಾತನಾಡಿ, ಯೋಗದಿಂದ ಆಗುವ ಪ್ರಯೋಜನಗಗಳ ಬಗ್ಗೆ ತಿಳಿಸಿದರು.

ಮಾನಸಿಕ ಸ್ಥಿರತೆ, ಏಕಾಗ್ರತೆ, ಸಕಾರಾತ್ಮಕ ಚಿಂತನೆಯಿಂದ ಮಾನಸಿಕ ಬಲವರ್ಧನೆ,ಒತ್ತಡಮುಕ್ತ ಖುಷಿಯ ಜೀವನ,ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸಮಾಜದ ಸಂಚಾಲಕರಾದ ಬಿ.ಕೆ.ಶಾರಾದಾಜಿ,ಬಿ.ಕೆ.ಪ್ರಭಾಮಣಿ,ಜಿ,ಬಿ.ಕೆ.ಲಕ್ಷ್ಮಿಜಿ,ತ್ರಿವೇಣಿ ಇಂಜಿನಿಯರಿಂಗ್ ಜನರಲ್ ಮ್ಯಾನೇಜರ್ ಬಿ.ಕೆ.ರಾಮಚಂದ್ರ, ಭಾರತೀನಗರ ಸೇವಾ ಕೇಂದ್ರದ ಸಹೋದರ ಸಹೋದರಿಯರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!