Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್- ನಾಲ್ವಡಿಯವರ ಸಾಧನೆ ಎಂದಿಗೂ ಅಮರ: ನರೇಂದ್ರಸ್ವಾಮಿ

ನಾಲ್ವಡಿಯವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಹಿನ್ನೆಲೆಯಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾವಂತರನ್ನು ಕಾಣಬಹುದಾಗಿದೆ ಮತ್ತು ದೇಶಕ್ಕೆ ಅತ್ಯುತ್ತಮ ಸಂವಿಧಾನ ಕೊಟ್ಟ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಾಧನೆ ಎಂದಿಗೂ ಅಮರ ಎಂದು ಶಾಸಕ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರು ನೀರಿ ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕೇಂದ್ರ ಸಂಘ ಮತ್ತು ಸ್ಥಳೀಯ ನೌಕರರ ಸಂಘ, ಬೆಂಗಳೂರು ಜಲ ಮಂಡಳಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ದಿ ಕೇಂದ್ರ ಸಮಿತಿ ಹಾಗೂ ಸ್ಥಳೀಯ ಸಮಿತಿ ವತಿಯಿಂದ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ. ಬಿಅರ್ ಅಂಬೇಡ್ಕರ್ ಪುತ್ಥಳಿ ಅನಾವರಣದ ಅಂಗವಾಗಿ ನಡೆದ ಅಂಬೇಡ್ಕರ್ ಹಬ್ಬ ಹಾಗೂ ಕನ್ನಡ ಹಬ್ಬ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದ ಪ್ರತಿಫಲದಿಂದಾಗಿ ಮಂಡ್ಯ ನೀರಾವರಿ ಪ್ರದೇಶ ಆಗಿದ್ದಲ್ಲದೇ ನಾಡಿನ ಜನರಿಗೆ ನೀರು ಸಿಗುತ್ತಿದೆ, ನಾಲ್ವಡಿಯವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಹಿನ್ನೆಲೆಯಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾವಂತರನ್ನು ಕಾಣಬಹುದಾಗಿದೆ, ಮೀಸಲಾತಿ ಪ್ರಕ್ರೀಯೆಯನ್ನು ಮೊದಲ ಬಾರಿಗೆ ಆರಂಭಿಸಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದಾರೆ, ಅವರ ಸಾಧನೆಯ ಪ್ರತಿಭಿಂಬವಾಗಿ ಪುತ್ಥಳಿಯನ್ನು ವಿಶೇಷ ರೀತಿಯಲ್ಲಿ ಸ್ಥಾಪಿಸಿರುವುದು ನಾಲ್ವಡಿಯವರಿಗೆ ಕೊಟ್ಟ ಗೌರವವಾಗಿದೆ ಎಂದರು.

ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಅಂಬೇಡ್ಕರ್‌ರವರು ಬರೆದ ಸಂವಿಧಾನವನ್ನು ಅಂಗೀಕರಿಸುವ ಸಂದರ್ಭದಲ್ಲಿ ಸಂಸತ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದರೂ ಅಂಬೇಡ್ಕರ್‌ರವರು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಸಂವಿಧಾನ ಜಾರಿಗೆ ಬರಲು ಕಾರಣರಾಗಿದ್ದಾರೆ. ಮಹಿಳೆಯರಿಗೆ ಸಮಾನ ಹಕ್ಕು, ಮತದಾನದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಸಂವಿಧಾನದಲ್ಲಿ ಕೊಟ್ಟಿದ್ದರಿಂದಲೇ ಪ್ರತಿಯೊಬ್ಬರು ಸ್ವಾಭಿಮಾನದ ಜೀವನವನ್ನು ಸಾಗಿಸಲು ಸಹಕಾರಿಯಾಗಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ನಂಜೇರಾಜ ಅರಸ್ ಬರೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ರೀತಿಯ ರಂಗೋಲಿಗಳು ಗಮನ ಸೆಳೆದವು. ಜಾನಪದ ಕಲಾ ತಂಡ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ಸುಗತಾಪಾಲ್ ಭಂತೇಜಿ, ಡಾ. ರಾಮ್‌ಪ್ರಸಾತ್ ಮನೋಹರ್, ಪ್ರಧಾನ ಮುಖ್ಯ ಅಭಿಯಂತರ ಬಿ,ಸುರೇಶ್, ಜಲಮಂಡಲಿ ಮುಖ್ಯ ಲೆಕ್ಕಧಿಕಾರಿ ಸುಬ್ಬರಾಮಯ್ಯ, ಅಭಿಯಂತರರಾದ ಎ. ರಾಜಶೇಖರ್, ಕುಮಾರ್‌ ನಾಯಕ್, ಮಹೇಶ್, ಸದಾಶಿವಕಾಂಬಳೆ, ಸಿದ್ದಪ್ಪ, ಕುಮಾರ್‌ನಾಯಕ್, ಅಶೋಕ್‌ಗೌಡ, ಮಹಮದ್ ಹನೀಫ್‌ ಯತ್ನಟ್ಟಿ. ಕಾರ್ಯಕ್ರಮ ಆಯೋಜಕರಾದ ಚೇತನ್‌ ಕುಮಾರ್, ಅನಿಲ್‌ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ