ರೆಬೆಲ್ ಸ್ಟಾರ್ ಅಂಬರೀಶ್ ಅವರ 70 ನೇ ವರ್ಷದ ಜನ್ಮದಿನದ ಅಂಗವಾಗಿ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಅಂಬರೀಶ್ ಸಮಾಧಿಗೆ ಸಂಸದೆ ಸುಮಲತಾ ಅವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿಗಳು ಅಂಬರೀಶ್ ಅವರಿಗೆ ಜೈಕಾರ ಹಾಕಿದರು. ಸುಮಲತಾ ಅವರು ಅಂಬರೀಷ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸಿದರು.
ನಂತರ ಮಾತನಾಡಿದ, ಸಂಸದೆ ಸುಮಲತಾ ಅವರು,ನನ್ನ ಪತಿ ಅಂಬರೀಶ್ ಅಂದರೆ ಮೊದಲು ನೆನಪಾಗೋದು ಅಭಿಮಾನಿಗಳ ಕೂಗು. ಕಳೆದ 30 ವರ್ಷದಿಂದ ಅವರ ಹುಟ್ಟುಹಬ್ಬ ನೋಡಿ ಕೊಂಡು ಬಂದಿದ್ದೇನೆ. ಅವರ ಜನ್ಮದಿನದ ಹಿಂದಿನ ದಿನದಿಂದಲೇ ಹಬ್ಬದ ವಾತಾವರಣ ಅಭಿಮಾನಿಗಳಿಂದ ನಿರ್ಮಾಣವಾಗುತ್ತಿತ್ತು. ಸಾವಿರಾರು ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು.
ಅಭಿಮಾನಿಗಳಿಗೆ ಅವರು ಪ್ರೀತಿಯಿಂದ ಬೈತಾಯಿದ್ರು.ಇದನ್ನು ಕಂಡು ಅಭಿಮಾನಿಗಳು ಖುಷಿಯಿಂದ ಜೈಕಾರ ಹಾಕುತ್ತಿದ್ದ ಬಗ್ಗೆ ನೆನಪುಗಳನ್ನು ಹಂಚಿಕೊಂಡರು.
ನಾನು ನನ್ನ ಪತಿ ಅಂಬರೀಷ್ ಜೊತೆಗೆ ಕಳೆದ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನನ್ನೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಎಂದೆಂದಿಗೂ ಅವರು ನನ್ನ, ಅಭಿಮಾನಿಗಳ ಮನಸ್ಸಿನಲ್ಲಿ ಇದ್ದೇ ಇರುತ್ತಾರೆ ಎಂದು ಹಳೆ ನೆನಪುಗಳನ್ನು ಮೆಲಕು ಹಾಕಿದರು.
ಅಪ್ಪನ ಜನ್ಮದಿನದ ಅಂಗವಾಗಿ ಭಾರತೀನಗರದ ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ಅವರಣದಲ್ಲಿ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರಸವಿಲಾಯಿತು.ಈ ಸಂದರ್ಭದಲ್ಲಿ ನಟರಾದ ದೊಡ್ಡಣ್ಣ ರಾಕ್ ಲೈನ್ ವೆಂಕಟೇಶ್, ಸಮಾಜ ಸೇವಕ ಕದಲೂರು ಉದಯ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.