Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಮೇರಿಕನ್ ಸ್ವಾತಂತ್ರ್ಯ ವೀರರಿಗೆ ಸ್ಪೂರ್ತಿಯಾಗಿದ್ದ ಹೈದರ್-ಟಿಪ್ಪು ಸುಲ್ತಾನ್

ಕೃಪೆ -ಶಿವಸುಂದರ್,ಪ್ರಗತಿಪರ ಲೇಖಕರು ಮತ್ತು ಸಾಮಾಜಿಕ ಚಿಂತಕರು

ನಮ್ಮ ಹೈದರ್ ಆಲಿ ಖಾನ್ ಮತ್ತು ಟಪ್ಪು ಸುಲ್ತಾನ್ ಅಮೇರಿಕಾದ ಕ್ರಾಂತಿಗೂ ಸ್ಪೂರ್ತಿಯಾಗಿದ್ದರು ಎಂದು ನಾವು ತಿಳಿದುಕೊಳ್ಳದಿದ್ದರೆ ಅದು ನಮ್ಮ ದೌರ್ಭಾಗ್ಯ ಎನ್ನಬಹುದು. ಇಂದು ಅಮೇರಿಕಾದ ಅಧ್ಯಕ್ಷರ ಕೃಪಕಟಾಕ್ಷ ಪಡೆಯುವುದೇ ನಮ್ಮ ಕೇಂದ್ರ ಸರ್ಕಾರದ ದ್ಯೇಯವಾಗಿಬಿಟ್ಟಿದೆ. ಹೀಗಾಗಿಯೇ ಭಾರತದ ಪ್ರಧಾನಿಗಳು ಅಮೇರಿಕಾ ಅಧ್ಯಕ್ಷರ ಅರೆಕಾಲಿಕ ಚುನಾವಣೆ ಎಲ್ಲಕ್ಕೂ ಕರೆಸಿಕೊಂಡು ಪ್ರಚಾರ ಮಾಡುವ ಮಟ್ಟಿಗೆ ಬಂದು ನಿಂತಿದ್ದಾರೆ ನಮ್ಮ ಪ್ರಧಾನಿಗಳು. ಹಾಗೆಯೇ ಅವರನ್ನು ನೇರ ಪ್ರಶ್ನಿಸದೇ ಗುಲಾಮಿತನವನ್ನು ಒಪ್ಪಿಕೊಳ್ಳುವ ದೌರ್ಭಾಗ್ಯವನ್ನೂ ನಾವು ನೋಡುತ್ತಿದ್ದೇವೆ.

ಆದರೆ ನಮ್ಮ ಚರಿತ್ರೆಯಲ್ಲಿ ನ್ಯಾಯ ಹಾಗು ಸ್ವಾತಂತ್ಯ್ರಕ್ಕಾಗಿ ನಮ್ಮ ಹಿರಿಯರು ನಡೆಸಿದ ಹೋರಾಟ ಇಡೀ ವಿಶ್ವವೇ ನಮ್ಮತ್ತ ನೋಡುವಂತೆ ಮಾಡಿತ್ತು ಎನ್ನುವ ಕಾಲವೊಂದಿತ್ತು. ಅದರಲ್ಲೂ ನಮ್ಮ ಹೈದರ್ ಮತ್ತು ಟಿಪ್ಪು ಬ್ರಿಟೀಷರ ವಿರುದ್ದ ನಡೆಸಿದ ವಿರೋಚಿತ ಹೋರಾಟವು ಇಡೀ ವಿಶ್ವದ ಗಮನವನ್ನೇ ಸೆಳೆದಿತ್ತು. ಅಷ್ಟಲ್ಲದೇ ಅಮೇರಿಕಾ ಕ್ರಾಂತಿಕಾರಿಗಳು ಹೈದರ್ ಮತ್ತು ಟಿಪ್ಪುಸುಲ್ತಾನರಿಂದ ತಾವು ಬ್ರಿಟೀಷರ ವಿರುದ್ದ ನೆಡೆಸುತ್ತಿದ್ದ ಹೋರಾಟಕ್ಕೆ ಸ್ಪೂರ್ತಿ ಪಡೆದುಕೊಳ್ಳುತ್ತಿದ್ದರು.

ಹೈದರ್- ಟಿಪ್ಪು ಗೆದ್ದಾಗ ಇಡೀ ಅಮೇರಿಕಾವೇ ಸಂಭ್ರಮಿಸುತ್ತಿತ್ತು ಮತ್ತು ಅವರಿಬ್ಬರೂ ವಿರೋಚಿತವಾಗಿ ಸಾವನ್ನಪ್ಪಿದಾಗ ಅಮೇರಿಕಾದ ಜನಸಮೂಹವೇ ಕಣ್ಣೀರಿಟ್ಟಿತ್ತು. ಇಂದು ಬಿಜೆಪಿ ಸರ್ಕಾರ ಎ‍ಷ್ಟೇ ಪ್ರಯತ್ನ ಪಟ್ಟರು ಅಮೇರಿಕಾದ ನಾಸಾ(NASA) ದಲ್ಲಿ ಈಗಲೂ ಜತನದಿಂದ ಕಾಪಿಟ್ಟಿರುವ ಟಿಪ್ಪುವಿನ ಮೊದಲ ಮತ್ತು ಇಡೀ ಜಗತ್ತಿನಲ್ಲೇ ಪ್ರಥಮ ಕ್ಷಿಪಣಿಯನ್ನ ನಾಶ ಮಾಡಲಾಗಿಲ್ಲ.

ಅಮೆರಿಕಾದ ಕ್ರಾಂತಿಕಾರಿಗಳಿಗೆ ಹೈದರ್ ನನ್ನು ಪರಿಚಯ ಮಾಡಿಕೊಟ್ಟಿದ್ದು ಫ್ರೆಂಚರು. ಅಮೆರಿಕಾದ ಎರಡನೇ ಅಧ್ಯಕ್ಷ ಥಾಮಸ್ ಜೆಫರ್ಸನ್ ಅವರು ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಫ್ರೆಂಚ್ ನಲ್ಲಿದ್ದಾಗ, ಫ್ರೆಂಚ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಹೈದರ್ ಮತ್ತು ಟಿಪ್ಪುವಿನ ಸಮರ ಸಾಧನೆಗಳನ್ನು ಹಾಗೂ ಆರ್ಕಾಟ್, ಮದ್ರಾಸ್, ಕಡಲೂರು ಹಾಗೂ ಇನ್ನು ಇತರ ಕಡೆಗಳಲ್ಲಿ ಬ್ರಿಟಿಷ್  ಸೈನ್ಯ ಹೈದರ್ ಮತ್ತು ಟಿಪ್ಪುವಿನ ರಣ ಅಕ್ರಮಕ್ಕೆ ಶರಣಾಗಿ ಓಡಿ ಹೋಗುತ್ತಿದ್ದನ್ನು ಅಥವಾ ಹೈದರ್ ಷರತ್ತಿಗೆ ಒಪ್ಪಿ ಅನಿವಾರ್ಯವಾಗಿ ಒಪ್ಪಂದಗಳನ್ನು ಮಾಡುತ್ತಿದ್ದನ್ನು ಅತ್ಯಂತ ಆಸಕ್ತಿದಾಯಕವಾಗಿ ಟಿಪ್ಪಣಿ ಮಾಡಿಕೊಂಡು ಅಮೆರಿಕಾದ ತಮ್ಮ ಸೈನಿಕರಿಗೆ ರವಾನಿಸುತ್ತಿದ್ದುದ್ದನ್ನು ನೋಡಬಹುದು.

ರವಾನಿಸಲಾಗುತ್ತಿದ್ದ ಈ ಟಿಪ್ಪಟಿಗಳನ್ನು ಓದಿದ ಅಮೆರಿಕಾದ ಜನತೆ ಅತ್ಯಂತ ಉತ್ಸಾಹದಿಂದ ಮೆಚ್ಚುಗೆ ಪಡೆದು ಹೈದರ್ ಮತ್ತು ಟಿಪ್ಪುವಿನ ಬಗ್ಗೆ ಅತ್ಯಂತ ಹೆಚ್ಚಿನ ಪ್ರಚಾರ ಮಾಡಿದರು. ಈ ಸಮಯಕ್ಕೆ ಆಗಲೇ ಹೈದರ್ ಮತ್ತು ಟಿಪ್ಪು ಇಬ್ಬರು ಅಮೆರಿಕಾದ ಜನತೆಗೆ ಮನೆಮಾತಾಗಿಬಿಟ್ಟಿದ್ದರು.

ಹೈದರ್ ಅಲಿ ಬಗ್ಗೆ ಅಮೆರಿಕಾದ ಲಾವಣಿಗಳು

ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸಕಾರ ಫ್ರ್ಯಾಂಕ್ ರೋಮರ್   ಅವರು ತಮ್ಮ “The Dairy Of  The American Revolution” ಪುಸ್ತಕದಲ್ಲಿ ದಾಖಲಿಸುವಂತೆ, ಹೈದರ್ ಮತ್ತು ಬ್ರಿಟಿಷರ ನಡುವೆ ನಡೆಯುತ್ತಿದ್ದ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ, ಟಿಪ್ಪು ಸೈನ್ಯವು ಬ್ರಿಟಿಷರಿಗೆ ನೀಡುತ್ತಿದ್ದ ಅನಿರೀಕ್ಷಿತ ಮಾರಣಾಂತಿಕ ಪೆಟ್ಟಿನ ಮಾಹಿತಿಗಳು ಅಮೆರಿಕನ್ ಗೆ 1781 ರ ಆಗಸ್ಟ್ ಗೆ ತಲುಪಿತು.

1781ರ ಅಕ್ಟೋಬರ್ ನಲ್ಲಿ ಲಾರ್ಡ್ ಕಾರ್ನ್ ವಾಲೀಸ್ ನ ಬ್ರಿಟಿಷ್ ಸೈನ್ಯ ಅಮೆರಿಕಾದ ಕ್ರಾಂತಿಕಾರಿ ದಂಡನಾಯಕ ಜಾರ್ಜ್ ವಾಷಿಂಗ್ಟನ್ ಸೇನೆಗೆ ಶರಣಾಯಿತು. ಒಂಬತ್ತು ದಿನಗಳ ನಂತರ ಈ ವಿಜಯವನ್ನು ನ್ಯೂಜೆರ್ಸಿ ಪ್ರಾಂತ್ಯದ ರೆಂಟನ್ ನಲ್ಲಿ ಆಚರಿಸಲಾಯಿತು. ಹಾಗೂ ಈ ವಿಷಯದಲ್ಲಿ ತಾವು ನೆನೆಸಿಕೊಳ್ಳಲೇ ಬೇಕಿರುವ 13 ಜನರ ನೆನಪಿನಲ್ಲಿ 13 ತೋಪು ಗಳನ್ನು ಗಾಳಿಗೆ ಆರಿಸಲಾಯಿತು. ಅಮೆರಿಕಾದ ಜನತೆ ತಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೆನೆಸಿಕೊಳ್ಳಬೇಕಾದ 13 ಜನರ ಪಟ್ಟಿಯಲ್ಲಿ ನಮ್ಮ ಹೈದರಾಲಿಯು ಒಬ್ಬರು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು.

ಫ್ರ್ಯಾಂಕ್ ಮೋರ್ ರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ ಬ್ರಿಟಿಷರು ಭಾರತ ದೇಶದ ಅಮಾಯಕ ಜನರ ಮೇಲೆ ಅತ್ಯಂತ ದಾರುಣವಾಗಿ ನಡೆದುಕೊಳ್ಳುತ್ತಿದ್ದವರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ನಾಯಕ ಹೈದರ್ ಮತ್ತು ಟಿಪ್ಪು ಎಂದು ದಾಖಲಿಸಿದ್ದಾರೆ.

ಅಷ್ಟೇ ಅಲ್ಲದೆ ಚಿಕಾಗೋ ವಿಶ್ವವಿದ್ಯಾಲಯದ ಫ್ರೊ. ಬ್ಲೇಕ್‌ ಸ್ಮಿತ್ ಹೇಳುವಂತೆ ಟಿಪ್ಪು- ಹೈದರ್ ಮತ್ತು ಮೈಸೂರು ಪ್ರಾಂತ್ಯದ ಹೆಸರುಗಳು 18ನೇ ಶತಮಾನದ ಪ್ರಖ್ಯಾತ ಇತಿಹಾಸಕಾರ ಜಡಿದಾಮೋರ್ಸ್ ರವರು 1793 ರಲ್ಲಿ ಬರೆದ “The American Universal Geography” ಒಳಗೊಂಡಂತೆ ಹಲವಾರು ಪಠ್ಯಪುಸ್ತಕಗಳಲ್ಲಿ ಇವರಗಳು ಇದ್ದುದನ್ನು ಕಾಣಬಹುದು.

1781 ರಲ್ಲಿ ಬೆನ್ಸಿನ್ವೇನಿಯ ಪ್ರಾಂತ್ಯದ ಶಾಸನಸಭೆಯು ತಮ್ಮ ಒಂದು ಯುದ್ಧ ನೌಕೆಗೆ ಹೈದರ್ ಎಂದು ಹೆಸರಿಟ್ಟು ಗೌರವಿಸಿತು. ಅಮೆರಿಕಾದ ಆ ಕಾಲದ ಪ್ರಖ್ಯಾತ ಕವಿ ಮತ್ತು ಅಮೆರಿಕಾದ ಎರಡನೇ ಅಧ್ಯಕ್ಷರಾಗಿದ್ದ ಥಾಮಸ್ ಜಫರ್ಸನ್ ಅವರ ಮಿತ್ರ ಹೈದರ್ ಅಲಿಯ ಕುರಿತು ನುಡಿ ನಮನ ಮಾಡಿರುವುದು ಸಹ ಅಮೆರಿಕಾದ ಇತಿಹಾಸದಲ್ಲಿ ದಾಖಲಾಗಿದೆ.

ಹಲವಾರು ಅಮೆರಿಕನ್ ಇತಿಹಾಸಕಾರರು ದಾಖಲಿಸಿರುವಂತೆ

“ಹೆಸರಿದು ಪೂರ್ವದ ರಾಜನದು
ಸ್ವಾತಂತ್ರ್ಯದ ಪವಿತ್ರದ ಜ್ವಾಲೆಯಲ್ಲಿ
ತನ್ನ ನಾಡಿಗೆ ಅನ್ಯಾಯ ಬಗೆದ ದರ್ಪಿಷ್ಠ ಬ್ರಿಟೀಷರಿಗೆ ಪಾಠ ಕಲಿಸಿದ ರಣಕಳಿಯದು”

ಅಮೆರಿಕಾದ ಸ್ವತಂತ್ರ ಸಂಗ್ರಾಮದಲ್ಲಿ ಹಲವಾರು ಗೆದ್ದ ಯುದ್ಧ ಕುದುರೆಗಳಿಗೆ ಹೈದರ್ ಮತ್ತು ಟಿಪ್ಪು ಎಂದು ಹೆಸರಿಟ್ಟಿದ್ದರಂತೆ. 1799 ರ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ವಿರೋಚಿತವಾಗಿ ಹೋರಾಡಿ ಮಡಿದ ನಂತರ, ಬ್ರಿಟಿಷ್ ಸಾಮ್ರಾಜ್ಯ ಶಾಹಿಗೆ ಭಾರತದಲ್ಲಿ ಎದುರಾಗಿದ್ದ ಸವಾಲುನ್ನು ಅಮೆರಿಕಾದ ಜನರು ಮರೆಯರು.

ಅಮೇರಿಕಾ ಕ್ರಾಂತಿ ಸಮಯದಲ್ಲಿ ಹಲವಾರು ಕ್ರಾಂತಿಕಾರಿಗಳು ಮೈಸೂರು ಹೈದರ್ ಮತ್ತು ಟಿಪ್ಪುವಿನ ಬಗ್ಗೆ ತಮ್ಮ ಪತ್ರಗಳಲ್ಲಿ ಒಬ್ಬರಿಗೊಬ್ಬರು ಬರೆದಿದ್ದಾರೆ. ಹಲವಾರು ಮಹತ್ವದ ನಿರ್ಧಾರಗಳ ಬಗ್ಗೆ, ಅವರು ದಾಖಲಿಸಿರುವ ಪತ್ರಗಳಲ್ಲಿ ಬರೆದಿದ್ದಾರೆ. ಇವೆಲ್ಲವನ್ನೂ ಅತ್ಯಂತ ಜತನದಿಂದ ಮುತ್ತು ಅತ್ಯಂತ ಶಿಸ್ತಿನಿಂದ ಅಧ್ಯಯನ ಮಾಡಿರುವ ವಿದ್ವತ್ ಪೂರ್ಣವಾಗಿ ಅಧ್ಯಯನ ಮಾಡಿರುವ, ತುಮಕೂರು ಮೂಲದ ಸಂಶೋಧಕ ಆಮೀನ್ ಅಹಮದ್ ರವರು ಅವುಗಳ ಸಂಕ್ಷಿಪ್ತ ವಿವರಗಳನ್ನು ತಮ್ಮ historofmysuru.blogspot.com ನಲ್ಲಿ ನೋಡಬಹುದು.

ನಮ್ಮ ನಾಡಿನ ಹೆಮ್ಮೆಯ ಇತಿಹಾಸಗಳನ್ನು ತಿಳಿಯ ಬಯಸುವವರು ಈ ವೆಬ್ ಸೈಟ್ ಲ್ಲಿ ಹಲವಾರು ವಿಷಯಗಳ ಬಗ್ಗೆ ಓದಬಹುದು.

ಇಂದು ರಾಜಕೀಯದ ಆಟಕ್ಕಾಗಿ ರಾಜಕಾರಣಿಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ಸ್ವಾತಂತ್ರ್ಯ ಹೋರಾಟದ ವೀರರನ್ನು ಎಳೆದು ತಂದು ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಿರುವುದರ ವಿರುದ್ಧ ಧ್ವನಿಯೆತ್ತ ಬೇಕಿದೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!