-
ವಿಜಯದಶಮಿಯಂದು ಬಿಎಸ್ಆರ್ ಸ್ಥಾಪಿಸಿದ ಕೆಸಿಆರ್
- ಹೆಚ್.ಡಿ.ಕುಮಾರಸ್ವಾಮಿ ಸೇರಿ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಭಾಗಿ
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು 2024 ರ ಚುನಾವಣೆಗೆ ಮುಂಚಿತವಾಗಿ ಭಾರತ್ ರಾಷ್ಟ್ರ ಸಮಿತಿ ರಾಷ್ಟೀಯ ಪಕ್ಷಕ್ಕೆ ಅಸ್ತಿತ್ವಕ್ಕೆ ತಂದಿದ್ದಾರೆ.ವಿಜಯ ದಶಮಿ ದಿನವಾದ ಬುಧವಾರ ಮಧ್ಯಾಹ್ನ 1.19ಕ್ಕೆ ಭಾರತ್ ರಾಷ್ಟ್ರ ಸಮಿತಿ (ಬಿ.ಆರ್.ಎಸ್) ಅನ್ನು ಪ್ರಾರಂಭಿಸಿದರು.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಈಗ ಬಿಆರ್ಎಸ್ ಆಗಿದೆ ಎಂದು ರಾವ್ ತಮ್ಮ ಪಕ್ಷದ ಸಭೆಯ ನಂತರ ಘೋಷಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಪಕ್ಷದ ಗುಲಾಬಿ ಬಣ್ಣವನ್ನು ಹೈದರಾಬಾದ್ ನಗರದಲ್ಲಿ ಎರಚುವ ಮೂಲಕ ಸಂಭ್ರಮಿಸಿದರು. ಯಾವುದೇ ಪಕ್ಷವನ್ನು ರಾಷ್ಟ್ರೀಯ ಎಂದು ಗುರುತಿಸುವ ನಿಯಮಗಳನ್ನು ಹೊಂದಿರುವ ಚುನಾವಣಾ ಆಯೋಗಕ್ಕೆ “ಹೆಸರು-ಬದಲಾವಣೆ” ರವಾನೆಯಾಗಿದೆ.
ಹೊಸ ಪಕ್ಷವನ್ನು ರಾಷ್ಟ್ರೀಯ ಘಟಕವೆಂದು ಪರಿಗಣಿಸಲಾಗುತ್ತದೆ, ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಲ್ಪಡಬೇಕು ಅಥವಾ ಯಾವುದೇ ನಾಲ್ಕು ರಾಜ್ಯಗಳು ಮತ್ತು ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಆರು ಶೇಕಡಾ ಮತಗಳನ್ನು ಗೆದ್ದಿರಬೇಕು ಅಥವಾ ಪಕ್ಷವು ಕನಿಷ್ಠ ಮೂರು ರಾಜ್ಯಗಳಲ್ಲಿ ಎರಡು ಶೇಕಡಾ ಲೋಕಸಭಾ ಸ್ಥಾನಗಳನ್ನು (11 ಸ್ಥಾನಗಳು) ಗೆಲ್ಲಬೇಕು. ಸದ್ಯಕ್ಕೆ, ತೆಲಂಗಾಣದಲ್ಲಿ ಟಿಆರ್ಎಸ್ ಪ್ರಬಲ ಅಸ್ತಿತ್ವವನ್ನು ಹೊಂದಿ ಆಳ್ವಿಕೆ ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿಗೆ ಸವಾಲು

2024 ರಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಲು ಕೆಸಿಆರ್ ಸಜ್ಜಾಗಿದ್ದಾರೆ. ಇತ್ತಿಚ್ಚಿನ ವರ್ಷದಲ್ಲಿ ಅವರು ಬಿಜೆಪಿ ವಿರುದ್ಧ ತಮ್ಮ ಟೀಕೆಗಳನ್ನು ತೀವ್ರಗೊಳಿಸಿದ್ದಾರೆ. ಕೆಸಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾವ್ ಅವರು ಇತರ ರಾಜ್ಯಗಳಲ್ಲಿನ ಅವರ ಆಪ್ತ ವಲಯದಲ್ಲಿರುವ ಹಲವಾರು ರಾಜಕೀಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ಧಾರೆ.
ಪ್ರಮುಖ ನಾಯಕರಾದ ಮಮತಾ ಬ್ಯಾನರ್ಜಿ (ಬಂಗಾಳ), ನಿತೀಶ್ ಕುಮಾರ್ (ಬಿಹಾರ), ಅರವಿಂದ್ ಕೇಜ್ರಿವಾಲ್ (ದೆಹಲಿ), ಎಂಕೆ ಸ್ಟಾಲಿನ್ ( ತಮಿಳುನಾಡು), ಪಿಣರಾಯಿ ವಿಜಯನ್ (ಕೇರಳ) ಮತ್ತು ನವೀನ್ ಪಟ್ನಾಯಕ್ (ಒಡಿಶಾ), ಡಿಎಂಕೆ ಮಿತ್ರಪಕ್ಷ ತೋಲ್ ತಿರುಮಾವಲವನ್, ಜೆಡಿಎಸ್ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ 20 ಮಂದಿ ಶಾಸಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹಲವು ಪಕ್ಷಗಳನ್ನು ಒಂದೇ ವೇದಿಕೆಗೆ ತರಲು ಯೋಜನೆ
ಕೆಸಿಆರ್ ಅವರು ಜನರಿಗೆ ಪರ್ಯಾಯ ಕಲ್ಯಾಣ, ಅಭಿವೃದ್ಧಿ ಮತ್ತು ರಾಜಕೀಯ ಅಜೆಂಡಾವನ್ನು ಪ್ರಸ್ತುತಪಡಿಸಲು ಬಯಸುತ್ತಿದ್ಧಾರೆ. ಆದ್ದರಿಂದ ಕೆಸಿಆರ್ ಅವರು ಸಮಾಜದ ವಿವಿಧ ವರ್ಗಗಳ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಮೈತ್ರಿಗಾಗಿ ರೈತರು, ಕಾರ್ಮಿಕ ಸಂಘಗಳು ಮತ್ತು ನಾಗರಿಕ ಸಮಾಜದ ಗುಂಪುಗಳ ಸಂಪರ್ಕದಲ್ಲಿದ್ದಾರೆ.
ಕೆಸಿಆರ್ ಹಲವು ಪಕ್ಷಗಳನ್ನು ಒಂದೇ ವೇದಿಕೆಯಡಿಗೆ ತರುವ ವೇಗವರ್ಧಕವಾಗಲಿದ್ದಾರೆ, ಅವರ ಯೋಜನೆ ಪ್ರಧಾನಿಯಾಗುವುದಲ್ಲ, ಬದಲಾಗಿ ಅಭಿವೃದ್ಧಿಯ ಪರ್ಯಾಯ ಮಾದರಿಯನ್ನು ತರುವುದು” ಎಂದು ಟಿಆರ್ಎಸ್ ಸಂಸದ ಕೆಆರ್ ಸುರೇಶ್ ರೆಡ್ಡಿ ತಿಳಿಸಿದ್ದಾರೆ. ವಿಪಕ್ಷಗಳ ಮತಗಳನ್ನು ವಿಭಜಿಸುವ ಮೂಲಕ ಕೆಸಿಆರ್ ಅವರ ಪಕ್ಷವು ಬಿಜೆಪಿಗೆ ಸಹಾಯ ಮಾಡಬಹುದು ಎಂಬ ಆರೋಪವನ್ನು ಅವರು ತಿರಸ್ಕರಿಸಿದರು.
ಕೆಸಿಆರ್ ಅವರ ಪಕ್ಷದ ಸದಸ್ಯರು ತೆಲಂಗಾಣ ಮಾದರಿ ಪ್ರಸ್ತುತಪಡಿಸುವ ಬಯಕೆ ಹೊಂದಿದ್ದು, ಸರ್ಕಾರದ ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಪುನರಾವರ್ತಿಸುವ ಭರವಸೆಯೊಂದಿಗೆ ದೇಶದ ಇತರ ಭಾಗಗಳಿಗೆ ಅದನ್ನು ತಲುಪಿಸಲು ಉತ್ಸಹ ಹೊಂದಿದ್ದಾರೆ.
ಮರುನಾಮಕರಣಗೊಂಡ ಬಿಎಸ್ಆರ್ ಪಕ್ಷವು ತನ್ನ ಚುನಾವಣೆಯನ್ನು ಶೀಘ್ರದಲ್ಲೇ ಎದುರಿಸಬಹುದು, ನವೆಂಬರ್ 4 ರಂದು ತೆಲಂಗಾಣದ ಮುನುಗೋಡೆ ಉಪಚುನಾವಣೆ ನಡೆಯಲಿದ್ದು, ಅಲ್ಲಿ ಬಿಎಸ್ಆರ್ ಸ್ಪರ್ಧೆ ಮಾಡಲಿದೆ. ಈ ಚುನಾವಣೆಯನ್ನು ಟಿಆರ್ಎಸ್ ಹೆಸರಿನಲ್ಲಿ ಎದುರಿಸಬೇಕಾಗುತ್ತದೆ. ಏಕೆಂದರೆ ಹೊಸ ಪಕ್ಷಕ್ಕೆ ಚುನಾವಣಾ ಆಯೋಗದ ಅನುಮೋದನೆ ದೊರೆಯಲು ಇನ್ನಷ್ಟು ಸಮಯ ಬೇಕಾಗಬಹುದು.




