ಕಳೆದ ಹತ್ತು ವರ್ಷದಿಂದ ನಿನ್ನೆಯ ತನಕ ಪವರ್ ಸೆಂಟರ್ ಆಗಿದ್ದ ಅಮೀತ್ ಷಾ ಅವರ ಮನೆ ಸಭೆಗಳ ಕೇಂದ್ರ ಸ್ಥಾನವಾಗಿತ್ತು.
ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಇಬ್ಬರೂ ಸಹ ಅಮಿತ್ ಷಾ ಅವರಿಗೆ ಪ್ರಧಾನ್ಯತೆ ಕೊಡುವುದನ್ನು ಒಪ್ಪುತ್ತಿಲ್ಲವಾದ ಕಾರಣ, ಗೃಹ ಸಚಿವರಾಗಿ ಅಮೀತ್ ಷಾ ಅವರು ಮುಂದುವರೆಯಬಾರದಾಗಿ ಬೇಡಿಕೆ ಇಟ್ಟಿರುವುದರಿಂದ ಇಂದಿನ ಎಲ್ಲಾ ಸಭೆಗಳು ದೆಹಲಿಯ ಬಿಜೆಪಿ ಅಧ್ಯಕ್ಷರಾದ ನಡ್ಡಾ ಅವರ ಮನೆಯಲ್ಲಿ ಜರುಗಿದವು ಎನ್ನಲಾಗುತ್ತಿದೆ.