Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಪೂರ್ಣ ರಾಮಮಂದಿರ ಉದ್ಘಾಟನೆ ಸರಿಯಲ್ಲ: ಚಲುವರಾಯಸ್ವಾಮಿ ಕಿಡಿ

ಅಪೂರ್ಣವಾದ ಕಟ್ಟಡವನ್ನ ಯಾರು ಉದ್ಘಾಟನೆ ಮಾಡಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮಾಡುತ್ತಿರುವುದಕ್ಕೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ನಾಗಮಂಗಲದ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಒಬ್ಬರು ಚಾಣಾಕ್ಷ, ಪ್ರತಿ ಚುನಾವಣೆ ಸಂದರ್ಭ ಒಂದೊಂದು ವಿಚಾರ ತಂದು ಮುಗ್ದರನ್ನ ಡೈವರ್ಟ್ ಮಾಡ್ತಾರೆ. ಮನೆಯಾದ್ರೂ ಸರಿ, ದೇವಸ್ಥಾನ ಆದ್ರೂ ಸರಿ ಅಪೂರ್ಣವಾದದ್ದನ್ನ ಉದ್ಘಾಟನೆ ಮಾಡಲ್ಲ, ಈಗಾಗಲೇ ಶಂಕರಾಚಾರ್ಯರ 4 ಪೀಠಗಳಲ್ಲಿ 2 ಪೀಠ ರಾಮಮಂದಿರ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದೆ
ರಾಮಮಂದಿರ ಕಟ್ಟೋದು ತಪ್ಪಲ್ಲಾ ಆದ್ರೆ ಅವರು ಅದನ್ನ ಚುನಾವಣೆಗೆ ಬಳಸಿಕೊಳ್ತಿರೋದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡ್ಯಾಂ ಸುಸ್ಥಿತಿ ವೀಕ್ಷಣೆ

ಕೆಆರ್’ಎಸ್ ಡ್ಯಾಂಗೆ ಕೇಂದ್ರದ ಜಲಮಂಡಳಿ ಭೇಟಿ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದ ತಂಡ ನಿನ್ನೆ ಬಂದಿದ್ದು ಕಾವೇರಿ ಸಮಸ್ಯೆ, ವಸ್ತುಸ್ಥಿತಿ ಬಗ್ಗೆ ವೀಕ್ಷಣೆಗೆ ಅಲ್ಲ, ಕೇಂದ್ರದ ತಂಡ ಬಂದಿದ್ದು ಡ್ಯಾಂನ ಸುಸ್ಥಿತಿ ವೀಕ್ಷಣೆಗೆ, ಬಹಳ ದಿನಗಳಿಂದ ಡ್ಯಾಂನ ದುರಸ್ತಿ ಕಾರ್ಯ ನಡೆಯುತ್ತಿದೆ. ಎರಡನೇ ಅವಧಿಯ ಟೆಂಡರ್ ಪ್ರಕ್ರಿಯೆ ಇರೋದ್ರಿಂದ ವಿಸಿಟ್ ಮಾಡಿದ್ದಾರೆ. ಆ ತಂಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಬಂದಿದ್ದರೆ ಸ್ಥಳೀಯ ಮಟ್ಟದಲ್ಲಿ ಕಾವೇರಿ ಸಮಸ್ಯೆ ಸ್ಯ ಬಗ್ಗೆ ಚೆರ್ಚಿಸಬಹುದಿತ್ತು ಎಂದರು.

ಬಿಜೆಪಿ ಆಗಲಿ, ಜೆಡಿಎಸ್ ಆಗಲಿ, ಕಾಂಗ್ರೆಸ್ ಆಗಲಿ ಅವರಿಂದ ಕೇಂದ್ರದ ತಂಡ ಕೆ.ಆರ್.ಎಸ್ ಗೆ ಬರಲಿಲ್ಲ,
ಹೆಸ್ರು ಪ್ರಸ್ತಾಪಿಸದೆ ಪರೋಕ್ಷವಾಗಿ ದೇವೇಗೌಡರ ಮನವಿ ಮೇರೆಗೆ ಕೇಂದ್ರದ ಜಲಮಂಡಳಿ ಸದಸ್ಯರು ಬರಲಿಲ್ಲ ಎಂಬುದನ್ನು ತಿಳಿಸಿದರು.

ಡಿಸಿಎಂ ವಿಚಾರ ಚೆರ್ಚಿಸದಂತೆ ಸೂಚನೆ

ಕಾಂಗ್ರೆಸ್ ನಲ್ಲಿ ಫೈವ್ ಡಿಸಿಎಂ ಚರ್ಚೆ ನಡೆಯುತ್ತಿದೆ, ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಖಡಕ್ ಎಚ್ಚರಿಕೆ ನೀಡಿದೆ, ಚುನಾವಣೆ ವೇಳೆ ಯಾರು ಕೂಡ ಡಿಸಿಎಂ ವಿಚಾರ ಚೆರ್ಚಿಸದಂತೆ ಸೂಚಿಸಿದೆ, ನಮ್ಮ ಎಐಸಿಸಿ ಅಧ್ಯಕ್ಷರು ಖಡಕ್ಕಾಗಿ ಹೇಳಿದ್ದಾರೆ, ಯಾರು ಕೂಡ ಡಿಸಿಎಂ ವಿಚಾರ ಚೆರ್ಚೆ ಮಾಡದಂತೆ ತಿಳಿಸಿದ್ದಾರೆ.
ಡಿಸಿಎಂ ವಿಚಾರ ಕೂಡ ಅನವಶ್ಯಕ ಎಂದರು.

ಸೂಕ್ತ ಅಭ್ಯರ್ಥಿಗೆ ಸಮೀಕ್ಷೆ

ಮಂಡ್ಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಚಿವರು ಸ್ಪರ್ಧೆಗೆ ಹಿಂದೇಟು ಹಾಕುತ್ತಿಲ್ಲ,
ಸೂಕ್ತವಾದ ಅಭ್ಯರ್ಥಿ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಆಯಾ ಜಿಲ್ಲೆಯ ಉಸ್ತುವಾರಿ, ಶಾಸಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ತಿಂಗಳು 15 ರಿಂದ 20ರ ಒಳಗೆ ಸಮೀಕ್ಷೆ ಮುಕ್ತಾಯವಾಗಲಿದೆ. 30ರ ಒಳಗೆ ಹೈಕಮಾಂಡ್ ಗೆ ಅಂತಿಮ ಪಟ್ಟಿ ತಲುಪಲಿದೆ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!