Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರದ ನಿರಾಕರಣೆ ಕನ್ನಡಿಗರಿಗೆ ಮಾಡಿದ ಅಪಮಾನ: KRS ಪಕ್ಷ ಕಿಡಿ

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ನಾಲ್ವಡಿ ಕೃಷ್ಣರಾಜ ಒಡೆಯರ್, ಕಿತ್ತೂರು ರಾಣಿ ಚೆನ್ನಮ್ಮ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನಿರಾಕರಣೆ ಮಾಡಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ ಎಂದು ಕರ್ನಾಟಕ ರಾಷ್ರ್ಟಸಮಿತಿ ಪಕ್ಷದ
ರಾಜ್ಶ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ ಹೆಚ್.ಎಂ ಖಂಡಿಸಿದ್ದಾರೆ.

ದೇಶದ ರಾಜಧಾನಿ ನವ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ರಾಷ್ಟ್ರೀಯ ಹಬ್ಬದ ಪಥಸಂಚಲನದಲ್ಲಿ ಕರ್ನಾಟಕ ಸರ್ಕಾರ ಕಳೆದ 14 ವರ್ಷಗಳಿಂದ ಗಣ ರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ನೆಲ, ಜಲ, ನಾಡು- ನುಡಿ,ಜಾನಪದ ಕಲೆ, ಅರಣ್ಯ ಸಂಪತ್ತು, ಈ ನಾಡಿನ ಸಂಸ್ಕೃತಿಯನ್ನ, ಕರ್ನಾಟಕ ಕನ್ನಡಿಗರ ಇತಿಹಾಸ ಹಾಗು ಸರ್ವಾಂಗೀಣ ಅಭಿವೃದ್ಧಿಯ ಹರಿಕಾರನ್ನ ಮಹನೀಯರನ್ನ ದೇಶದ ಜನತೆಗೆ ಈ ಸ್ತಬ್ದಚಿತ್ರಗಳ ಮೂಲಕ ಪರಿಚಯಮಾಡಿಕೊಂಡು ಬಂದಿದೆ. ಕನ್ನಡಿಗರ ಪಾಲಿಗೆ ಇದು ಅತ್ಯಂತ ಹೆಮ್ಮೆಯ ವಿಚಾರವಾಗಿತ್ತು. ಆದರೆ ಎಂದಿನಂತೆ ಈ ಬಾರಿಯು ಪಾಲ್ಗೊಳ್ಳಲು ನವ ಕರ್ನಾಟಕದ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಹರಿಕಾರ, ನೀರಾವರಿ, ಬ್ಯಾಂಕಿಂಗ್, ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಯ ಮೂಲಕ ಮೈಸೂರನ್ನು ಮಾದರಿ ರಾಜ್ಯವಾಗಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಕಿತ್ತೂರು ರಾಣಿ ಚೆನ್ನಮ್ಮ, ಬ್ರಾಂಡ್ ಬೆಂಗಳೂರು ಹಾಗು ಕರ್ನಾಟಕದ ನೈಸರ್ಗಿಕ ವ್ಯವಸ್ಥೆಗೆ ಸಂಬಂಧಪಟ್ಟ ನಾಲ್ಕು ಸ್ತಬ್ದಚಿತ್ರ ಮಾದರಿಗಳನ್ನ ಕಳುಹಿಸಿಕೊಟ್ಟಿಯೂ ಸಹ ಕರ್ನಾಟಕದ ಸ್ತಬ್ದಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುಮತಿಯನ್ನ ನಿರಾಕರಿಸಿರುವುದು 7 ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕಳೆದ ಬಾರಿಯೂ ಸಹ ಕರ್ನಾಟಕದ ಸ್ತಬ್ದಚಿತ್ರಗಳನ್ನ ಮೊದಲ ಹಂತದಲ್ಲಿ ನಿರಾಕರಿಸಿದ್ದು, ವಿವಾದ ಸ್ವರೂಪ ಪಡೆದುಕೊಂಡ ನಂತರ ಅನುಮತಿಯನ್ನ ನೀಡಿತ್ತು. ಈ ಬಾರಿ ಮತ್ತೆ ಕನ್ನಡಿಗರನ್ನ ಅವಮಾನಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನ ಕನ್ನಡಿಗರಾದ ನಾವುಗಳು ದೊಡ್ಡಮಟ್ಟದಲ್ಲಿ ವಿರೋಧಿಸಬೇಕಾದ ಸಂದರ್ಭ ಬಂದಿದೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ರವರು ಸಹ ಕೇಂದ್ರ ಸರ್ಕಾರದ ಈ ನಡೆಯನ್ನ ಖಂಡಿಸಿ, ತೀವ್ರ ತರಾಟೆಗೆ ತೆಗೆದುಕೊಂಡ ವಿಚಾರ ಅವರ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!