Thursday, October 24, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಪಾಂಡವಪುರ ರೈಲು ನಿಲ್ದಾಣದ ಪ್ಲಾಟ್’ಫಾರಂ 1 ರಲ್ಲಿನ ಟ್ರಾಕ್’ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಸೋಮವಾರ ಜರುಗಿದೆ.

ಅಪರಿಚಿತ ವ್ಯಕ್ತಿ ಸುಮಾರು‌ 30 ವರ್ಷ ವಯಸ್ಸು, 5.7 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ದುಂಡುಮುಖ, ತಲೆಯಲ್ಲಿ ಸುಮಾರು‌ 3 ಇಂಚು ಉದ್ದದ ಕಪ್ಪು ತಲೆಗೂದಲು, 1 ಇಂಚು ಉದ್ದದ ಕುರುಚಲು ಗಡ್ಡ ಹೊಂದಿರುತ್ತಾರೆ. ಮೈ ಮೇಲೆ ನೀಲಿ ಮತ್ತು‌ ಬೂದು ಬಣ್ಣದ ಚೆಕ್ಸ್’ಗಳ್ಳುಳ ತುಂಬು ತೋಳಿನ ಶಟ್೯, ಡಾಲರ್ ಕಂಪನಿಯ ಕಂದು ಬಣ್ಣದ ಅಂಡರ್’ವೇರ್, ಹಸಿರು ಬಣ್ಣದ ನೈಟ್ ಪ್ಯಾಂಟ್ ಹಾಗೂ ಒಂದು‌ ಜೊತೆ ಬಿಳಿ ಬಣ್ಣ ಹಾಗೂ ನೀಲಿ ಪಟ್ಟಿಯುಳ್ಳ ಚಪ್ಪಲಿ ಧರಿಸಿದ್ದಾರೆ.

ಅಪರಿಚಿತ ವ್ಯಕ್ತಿಯ ವಾರಸುದಾರರು ಪತ್ತೆಯಾಗದ ಕಾರಣ ಮೈಸೂರಿನ‌‌ ಕೆ.ಆರ್. ಆಸ್ಪತ್ರೆ ಶವಾಗಾರ ದಲ್ಲಿಡಲಾಗಿದೆ. ಮೃತರ ವಾರಸುದಾರರಿದ್ದಲ್ಲಿ ಮೈಸೂರು ರೈಲ್ವೇ ಪೊಲೀಸ್ ಠಾಣೆ‌ ದೂ: 0821-2516579 ಅಥವಾ ಮೊ. 9480802122 ಸಂಪರ್ಕಿಸುವಂತೆ ಮಂಡ್ಯ ರೈಲ್ವೇ ಹೊರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!