ಆಂಧ್ರಪ್ರದೇಶದಲ್ಲಿ ವೈಎಸ್ಅರ್ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ನಾಲ್ಕು ಜನ ಸಂಸದರು ಬಿಜೆಪಿ ಸಂಪರ್ಕದಲ್ಲಿದ್ದು ಬಹತೇಕ ಬಿಜೆಪಿ ಸೇರ್ಪಡೆ ಖಚಿತ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಮತ್ತು ಲೋಕಾಸಭಾ ಚುನಾವಣೆಗಳಲ್ಲಿ ಜಗಮೋಹನ್ ರೆಡ್ಡಿ ನೇತೃತ್ವದ ವೈಎಸ್ಅರ್ ಕಾಂಗ್ರೆಸ್ ಅತ್ಯಂತ ಕಳಪೆ ಪ್ರದೇಶದ ನೀಡಿದ್ದು ಹೆಚ್ಚು ಕಡಿಮೆ ಪಕ್ಷವೇ ನಿರ್ನಾಮವಾಗುವಂತಹ ತೀರ್ಪನ್ನು ಅಂಧ್ರದ ಜನತೆ ಆಡಳಿತ ಪಕ್ಷವಾಗಿದ್ದ ವೈಎಸ್ಅರ್ ಪಕ್ಷದ ವಿರುದ್ದ ನೀಡಿರುತ್ತಾರೆ, ಇದರಿಂದ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ನಾಲ್ಕು ಸಂಸದರು ಬಿಜೆಪಿ ಸಂಪರ್ಕದಲ್ಲಿದ್ದು ಬಹುತೇಕ ಬಿಜೆಪಿ ಸೇರ್ಪಡೆ ಖಚಿತ ಎನ್ನುವ ಮಾಹಿತಿ ತಿಳಿದು ಬರುತ್ತಿದೆ.




