ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಿ.ಎಲ್.ಸಂತೋಷ್ ಅವರ ಜಾಗಕ್ಕೆ ಸಂಜಯ್ ಜೋಷಿ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅತ್ಯಂತ ಪ್ರಮುಖವಾಗಿದ್ದು ಇದು RSS ಮತ್ತು ಬಿಜೆಪಿ ನಡುವಿನ ಸಮನ್ವಯದ ಕೊಂಡಿಯಾಗಿ ಕೆಲಸ ಮಾಡುವ ಹುದ್ದೆಯಾಗಿದ್ದು ಆ ಸ್ಥಳಕ್ಕೆ ಮೋದಿಜೀ ಅವರ ಕಡು ವಿರೋಧಿ ಸಂಜಯ್ ಜೋಷಿ ಆಯ್ಕೆ ಹಲವರು ಹುಬ್ಬೇರಿಸುವಂತೆ ಮಾಡಿದೆ.
ಮೋದಿಜೀ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರಿಗೂ ಸಂಜಯ್ ಜೋಷಿ ಅವರಿಗೂ ಸಾರ್ವಜನಿಕವಾಗಿ ಕಿತ್ತಾಟವಾಗುತ್ತಿದ್ದ ಕಾರಣ ನಂತರ ಸಂಜಯ್ ಜೋಷಿ ಅವರನ್ನು ಬೇರೆ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.




