Friday, September 20, 2024

ಪ್ರಾಯೋಗಿಕ ಆವೃತ್ತಿ

ರಕ್ತಹೀನತೆಗೆ ಕಾರಣ ಜಂತು ಹುಳು: ಡಾ.ಧನಂಜಯ

ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು, ಮಕ್ಕಳು ಮಹಿಳೆಯರು ಬರಿಕಾಲಿನಲ್ಲಿ ಓಡಾಡುವುದರಿಂದ ಜಂತು ಹುಳು ಹೆಚ್ಚಾಗುತ್ತದೆ.ರಕ್ತಹೀನತೆಗೆ ಜಂತುಹುಳು ಕಾರಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಎನ್.ಧನಂಜಯ ಅವರು ತಿಳಿಸಿದರು.

ನಗರದ ಆರ್.ಟಿ.ಓ. ಸ್ಲಂ ನ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತಹೀನತೆ ಉಂಟಾದಾಗ ಮಗುವಿನ ಬೆಳವಣಿಗೆ, ಬುದ್ಧಿಶಕ್ತಿ, ಕಲಿಕಾ ಸಾಮರ್ಥ್ಯ ಕುಂಠಿತವಾಗುತ್ತದೆ. ಈ ಹಿನ್ನೆಲೆ ರಕ್ತಹೀನತೆಗೆ ಮೂಲ ಕಾರಣವಾದ ಜಂತುಹುಳುಗಳನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಜಂತುಹುಳು ನಿವಾರಣ ದಿನವನ್ನಾಗಿ ವರ್ಷದಲ್ಲಿ ಎರಡು ಬಾರಿ ಫೆಬ್ರವರಿ ಮತ್ತು ಆಗಸ್ಟ್ ತಿಂಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಪ್ರತಿ ಮಗುವಿಗೆ 2ವರ್ಷ ಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅವರಿಗೆ 400mg ಆಲ್‍ಬೆಂಡಾಜೋಲ್ ಮಾತ್ರೆಯನ್ನು ನೀಡಲಾಗುವುದು ಇದರಿಂದ 6 ತಿಂಗಳುಗಳ ಕಾಲ ಮಕ್ಕಳಿಗೆ ಜಂತು ಹುಳು ಇದ್ದರೆ ಅಥವಾ ಮುಂದೆ ಬರುವುದು ನಾಶವಾಗಿ ರಕ್ತಹೀನತೆಯಿಂದ ಸುಧಾರಿಸಬಹುದು ಎಂದರು.

ಅಂಗನವಾಡಿ ಮತ್ತು ಶಾಲೆಗಳಲ್ಲಿ 19ವರ್ಷದ ಮಕ್ಕಳ ವರೆಗೂ ಜಂತುಹುಳು ಮಾತೆಯನ್ನು ನೀಡಿ ಚಾಲನೆ ನೀಡಿದ್ದೇವೆ. ಪೋಷಕರು ತಮ್ಮ ಮಕ್ಕಳಿಗೆ ಜಂತುಹುಳು ಮಾತ್ರೆಯನ್ನು ಕಡ್ಡಾಯವಾಗಿ ಕೊಡಿಸಬೇಕು ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್.ಸಿ. ಹೆಚ್ ಅಧಿಕಾರಿ ಅನಿಲ್ ಕುಮಾರ್ ಡಾ.ಆಶಾಲತಾ,ಡಾ. ಭವಾನಿ ಶಂಕರ್,ಡಾ. ಶಶಿಧರ್,ಡಾ.ಜವರೇಗೌಡ, ಡಾ. ವೇಣುಗೋಪಾಲ್, ಶಿವಾನಂದ್ ಸಿ.ಡಿ.ಪಿ.ಒ ಕುಮಾರಸ್ವಾಮಿ. ನಗರಸಭಾ ಸದಸ್ಯರಾದ ಗೀತಾ,ಡಾ. ಶಶಿಕಲಾ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!