Thursday, September 19, 2024

ಪ್ರಾಯೋಗಿಕ ಆವೃತ್ತಿ

ಅನಿಕೇತನ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ : ಹಲವು ಸಮಾಜಸೇವಾ ಕಾರ್ಯ

ಮಂಡ್ಯ ತಾಲ್ಲೂಕಿನ ಯಲಿಯೂರು ಬಳಿ ಇರುವ ಅನಿಕೇತನ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿ 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ವಿವಿಧ ಸಮಾಜಸೇವಾ ಕಾರ್ಯಗಳೊಂದಿಗೆ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಾಂಶುಪಾಲ ಡಾ.ರಾಮಲಿಂಗಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಮಾನೋತ್ಸವದ ಪ್ರಯುಕ್ತ ನಮ್ಮ ಸುತ್ತಮುತ್ತಲಿರುವ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಗುವುದು. ವೈದ್ಯಕೀಯ ಕ್ಷೇತ್ರದಿಂದ ಚರ್ಮ ತಜ್ಞ ಡಾ.ಶಂಕರೇಗೌಡ, ಶಿಕ್ಷಣ ಕ್ಷೇತ್ರದಿಂದ ನವೋದಯ ತರಬೇತುದಾರರಾದ  ಕನ್ನಿಕಾ, ಸಮಾಜಸೇವೆ ಕ್ಷೇತ್ರದಿಂದ ಯೋಗೇಶ್ ಮಂಗಲ ಅವರನ್ನು ಅಭಿನಂದಿಸಲಾಗುವುದ ಎಂದರು.

ಸಂಸ್ಥೆಗೆ 10 ವರ್ಷ ತುಂಬಿರುವ ಸಂತೋಷವನ್ನು ಸಾರ್ಥಕಗೊಳಿಸುವ ಉದ್ದೇಶದಿಂದ ಮಂಗಲ ಯೋಗೇಶ ಅವರ ಮಮತೆಯ ಮಡಿಲು ಸಂಸ್ಥೆಯ ನಿತ್ಯ ಅನ್ನದಾಸೋಹ ಕಾರ್ಯಕ್ರಮದಡಿಯಲ್ಲಿ ಜಿಲ್ಲಾಸ್ಪತೆಯ ಅನಾರೋಗ್ಯ ಪೀಡಿತರಿಗೆ ಗರ್ಭೀಣಿ ಮತ್ತು ಬಾಣಂತಿಯರಿಗೆ 10 ದಿನಗಳ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜ.19ರಂದು ಮಂಡ್ಯ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಮಂಡ್ಯ ತಾಲ್ಲೂಕಿನ ಶಾಲಾ-ಕಾಲೇಜಿನ ಸುಮಾರು 150 ವಿಕಲಚೇತನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಬಿರ ಹಾಗೂ ಸಲಕರಣೆಗಳಗನ್ನು ವಿತರಿಸುವ ಜೊತೆಗೆ ಸುಮಾರು 250 ಮಂದಿಗೆ ಸಂಸ್ಥೆಯ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗುವುದು. ಜ.28ರಂದು ಅತ್ಯಂತ ವಿಜೃಂಭಣೆಯಿಂದ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಚುಂಚೇಗೌಡ, ಉಪ ಪ್ರಾಂಶುಪಾಲರಾದ ಮಂಗಳಮ್ಮ ಹಾಗೂ ಮುಖ್ಯ ಶಿಕ್ಷಕಿ ತೇಜಸ್ವಿನಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!