Friday, November 20, 2026

ಪ್ರಾಯೋಗಿಕ ಆವೃತ್ತಿ

ಇನ್ನೋವ ಕಾರು ಕಳವು: ಮೂವರು ಆರೋಪಿಗಳ ಬಂಧನ

ನಾಗಮಂಗಲ ವೃತ್ತದ ಪೊಲೀಸರ ಕಾರ್ಯಾಚರಣೆ ನಡೆಸಿ ಮೂವರು ಸುಲಿಗೆಕೋರರನ್ನು ಬಂಧಿಸಿ,ಅವರು ಕಳವು ಮಾಡಿದ್ದ ಇನ್ನೋವ ಕಾರನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ:31/7/2022 ರಂದು ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಎನ್‌.ಅಭಿಷೇಕ್ ಚಂದ್ರಶೇಖರ್ ಎಂಬ ಕಾರು ಚಾಲಕ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ದೂರನ್ನು ನೀಡಿದ್ದು, ನಾನು ಬೆಂಗಳೂರಿನ ಟ್ರಾವೆಲ್ಸ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇವೆ.

ಮಂಗಳೂರಿಗೆ ಹೋಗಬೇಕೆಂದು ಗ್ರಾಹಕರು ಕಾರು ಬುಕ್ ಮಾಡಿದ್ದು, ಗ್ರಾಹಕರನ್ನು ನಾನು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಕರೆದುಕೊಂಡು ಹಾಸನ ರಸ್ತೆಯಲ್ಲಿ ಹೋಗುತ್ತಿದ್ದಾಗ 30-7-2022 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಬೆಳ್ಳೂರು ಕ್ರಾಸ್ ಬಳಿ ನನ್ನ ಕಾರಿನಲ್ಲಿದ್ದ ಮೂವರು ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕೈ, ಕಾಲುಗಳನ್ನು ಕಟ್ಟಿ ಹಾಕಿ ನನ್ನ ಬಳಿ ಇದ್ದ ಒಂದು ಮೊಬೈಲ್ ಫೋನ್ ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಎಂದು ದೂರು ನೀಡಿದ್ದರು.

ಅಭಿಷೇಕ್ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಬೆಳ್ಳೂರು ಪೊಲೀಸ್ ಠಾಣೆಯ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿತ್ತು.

ಅದರಂತೆ ಈ ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ನಾಗಮಂಗಲ ಸಿಪಿಐ ಸುಧಾಕರ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.

ಈ ತಂಡವು ದಿನಾಂಕ:26.08.2012 ರಂದು ಪಾಂಡವಪುರ ಪಟ್ಟಣದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ,ಆರೋಪಿತರಿಂದ ಸುಮಾರು 18 ಲಕ್ಷ ರೂ.ಬೆಲೆ ಬಾಳುವ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯ ಮಾಡಿದ ತಂಡವನ್ನು ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ