ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಯ ಮತ ಎಣಿಕೆ ಇಂದು ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಮಾರಾಟ ಸಹಕಾರ ಸಂಘ (ಫ್ಯಾಕ್ಸ್) ವಿಭಾಗದಿಂದ ಕಾಂಗ್ರೆಸ್ ಬೆಂಬಲಿತ ನಾಲ್ವರು ಮಂದಿ ನಿರ್ದೇಶಕರು ಆಯ್ಕೆಯಾಗುವುದರೊಂದಿಗೆ ಕೈ ಕಮಾಲ್ ಮಾಡಿದೆ.
ನೂತನ ನಿರ್ದೇಶಕ ರಾಗಿ ಯು.ಸಿ.ಶೇಖರ್(28 ಮತ), ಬೇಲೂರು ಸೋಮಶೇಖರ್(26ಮತ), ಕಲ್ಲಹಳ್ಳಿ ಕೆ.ಸಿ.ರವೀಂದ್ರ(25ಮತ), ಪುನೀತ್ (23ಮತ)ಪಡೆದು ಫ್ಯಾಕ್ಸ್ ವಿಭಾಗದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಗೆಲುವು ಸಾಧಿಸಿದ ನಾಲ್ವರನ್ನು ಅವರ ಸ್ನೇಹಿತರು, ಅಭಿಮಾನಿಗಳು ಮತ್ತು ಬೆಂಗಲಿಗರು ಅಭಿನಂದಿಸಿದರು.
ನೂತನ ನಿರ್ದೇಶಕ ಕಲ್ಲಹಳ್ಳಿ ಕೆ.ಸಿ.ರವೀಂದ್ರ ಮಾತನಾಡಿ,ನಾಡಿನ ಪ್ರತಿಷ್ಠಿತ ಮಾದರಿ ಸಹಕಾರ ಸಂಸ್ಥೆಯಾದ ಆರ್.ಎ.ಪಿ.ಸಿ.ಎಂ.ಎಸ್.
ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಾವು ಪ್ಯಾಕ್ಸ್ ವಿಭಾಗ ಅಂದರೆ ಸಹಕಾರ ಸಂಘಗಳ ವಿಭಾಗದಿಂದ 4 ನಿರ್ದೇಶಕ ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದು, ಅವರಲ್ಲಿ ಕಾಂಗ್ರೆಸ್ ಬೆಂಬಲಿತ ನಾವು ನಾಲ್ಕು ಮಂದಿ ಗೆಲುವು ಸಾಧಿಸಿದ್ದೇವೆ.ನಮ್ಮ ಗೆಲುವಿಗೆ ಕಾರಣರಾದ ಮತದಾರರಿಗೆ ಹಾಗೂ ನಮ್ಮ ನಾಯಕರಾದ ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನೂತನ ನಿರ್ದೇಶಕ ಬೇಲೂರು ಸೋಮಶೇಖರ್ ಮಾತನಾಡಿ,ನಮ್ಮ ಈ ಗೆಲುವನ್ನು ಎ.ವಿಭಾಗದ ಮತದಾರರಿಗೆ ಸಮರ್ಪಿಸುತ್ತೇವೆ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ರೈತರ ಸೊಸೈಟಿ ಅಭಿವೃದ್ಧಿಯಲ್ಲಿ ಹೊಸ ಐತಿಹ್ಯವನ್ನು ದಾಖಲಿಸುತ್ತೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಎಂ.ಕೃಷ್ಣ,ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಕಲ್ಲಹಳ್ಳಿ ಆನಂದ್ ಸೇರಿದಂತೆ ಹಲವರು ಆಯ್ಕೆಯಾದ ನೂತನ ನಿರ್ದೇಶಕರಿಗೆ ಶುಭಕೋರಿದರು.