ಮಂಡ್ಯನಗರದ ನ್ಯಾಯಾಲಯ ಸಂಕೀರ್ಣಕ್ಕೆ ಯಾರೋ ಕಿಡಿಗೇಡಿಗಳು ಗುರುವಾರ ಬಾಂಬ್ ಬೆದರಿಕೆ ಹಾಕುವ ಮೂಲಕ ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡುಸುವ ಕೆಲಸ ಮಾಡಿದ್ದಾರೆ. ಕಳೆದ ಫೆ.16 ರಂದು ಕೂಡ ಬಾಂಬ್ ಬೆದರಿಕೆ ಇ-ಮೇಲ್ ಬಂದ ನಂತರ ವಕೀಲರು ಹಾಗೂ ರಕ್ಷಿದಾರ ಕಲಾಪದಿಂದ ಹೊರಗುಳಿದ್ದರು. ಈಗ ಅಂತಹದ್ದೇ ಘಟನೆ ಮರುಕಳಿಸಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಸ್ಪಿ ಶೋಭರಾಣಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಶ್ವಾನದಳ, ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಇದೇ ರೀತಿ ಬಾಂಬ್ ಬೆದರಿಕೆಗಳು ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೂ ನಿರಂತರವಾಗಿ ಬರುತ್ತಿದ್ದು, ಅಂತಹ ಕಿಡಿಗೇಡಿಗಳನ್ನು ಮತ್ತೇ ಹಚ್ಚಿ ಪೊಲೀಸರು ಸೂಕ್ತ ಕ್ರಮವಹಿಸಬೇಕೆಂಕು ಮಂಡ್ಯ ವಕೀಲರ ಸಂಘ ಆಗ್ರಹಿಸಿದೆ.




