ಜಿಲ್ಲೆಯ ರೈತರು ವಿವಿಧ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್‌ಬಿಮಾ(ವಿಮಾ)ಯೋಜನೆ ಮಾಡಿಸಿದರೆ ಅನುಕೂಲವಾಗಲಿದೆ ಎಂದು ಜಿ.ಪಂ.ಸಿಇಓ ದಿವ್ಯಾಪ್ರಭು ಸಲಹೆ ನೀಡಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಕೃಷಿ ಇಲಾಖೆ ಆಯೋಜಿಸಿದ್ದ ರಾಜ್ಯ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ಬಿಮಾ(ವಿಮಾ)ಯೋಜನೆ ಮುಂಗಾರು -2022ರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ರೈತರಿಗೆ ವಿವಿಧ ಬೆಳೆಗಳ ವಿಮಾ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ವಾಹನಗಳಿಗೆ ಇಂದು ಚಾಲನೆ ನೀಡಿದ್ದೇವೆ.ರೈತ ಸಮೂಹ ವಿಮಾ ಯೋಜನೆಗಳ ಸೌಲಭ್ಯ ಪಡೆಯಲು ಮುಂದಾಗಬೇಕು ಎಂದರು.
2021ರ ಮುಂಗಾರು ಹಂಗಾಮಿನಲ್ಲಿ 1೦ಸಾವಿರ ಮಂದಿ ರೈತರು ಬೆಳೆ ವಿಮಾ ನೊಂದಣಿ ಮಾಡಿಸಿದ್ದು, ಸುಮಾರು 8ಸಾವಿರ ಮಂದಿಗೆ 5.5ಕೋಟಿ ರೂ.ವಿಮಾ ಹಣ ಬಂದಿದೆ. ಈ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ ಎಂದರು.
ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಇಂದು ಕೃಷಿ ಇಲಾಖೆಯಿಂದ ಬೆಳೆ ವಿಮಾ ಯೋಜನೆಯ ಜಾಗೃತಿಗಾಗಿ 6 ಸಂಚಾರಿ ವಾಹನ ರಥಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿ 15 ದಿನಗಳ ಕಾಲ ಜಾಗೃತಿ ಮೂಡಿಸಲಿವೆ ಎಂದರು.
ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ, 2-3 ಮಿಲಿಮೀಟರ್ ಮಳೆಯಾಗಬೇಕಿದ್ದದ್ದು, 18-20 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಮಳೆಯಿಂದ ನಷ್ಟಕ್ಕೊಳಗಾದ ಬೆಳೆಗಳ ಸಮೀಕ್ಷೆಯಾಗಿದೆ. ರೈತರು ವಿಮಾ ಯೋಜನೆ ಮಾಡಿಸಿದ್ದರೆ ನಷ್ಟದ ಹಣಬರುತ್ತಿತ್ತು ಎಂದು ನುಡಿದರು.
ಒಂದು ಎಕರೆಗೆ 25ಸಾವಿರ ರೂ. ವಿಮಾ ಯೋಜನೆ ಇದೆ.ಎಲ್ಲಾ ಬೆಳೆಗಳಿಗೂ 1ಕುಂಟೆಯಿಂದ ಎಕರೆ- ಹೆಕ್ಟೇರ್ ವರೆಗೂ ಬೆಳೆ ವಿಮಾ ಯೋಜನೆ ಇದ್ದು,ಇದರ ಸದುಪಯೋಗ ಪಡಿಸಿಕೊಳ್ಳಬೇಕು.ಅತಿವೃಷ್ಟಿ- ಅನಾವೃಷ್ಟಿಯಂತ ಸಂದರ್ಭದಲ್ಲಿ ಆರ್ಥಿಕ ಪರಿಹಾರ ದೊರೆಯುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ, ಉಪ ಕೃಷಿ ನಿರ್ದೇಶಕಿ ಮಾಲತಿ, ವಿಮಾ ಕಂಪನಿಯ ವ್ಯಸ್ಥಾಪಕ ಪ್ರವೀಣ್‌ಕುಮಾರ್, ಆಡಳಿತಾಧಿಕಾರಿ ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಹರ್ಷ, ಪ್ರತಿಭಾ, ಕೃಷಿ ಅಧಿಕಾರಿಗಳಾದ ಹರೀಶ್‌ಗೌಡ, ಸತೀಶ್, ಸಿಬ್ಬಂದಿಗಳು ಹಾಜರಿದ್ದರು