Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿಶ್ವ ತಂಬಾಕು ರಹಿತ ದಿನ ಆಚರಣೆ

ಮಂಡ್ಯ ನಗರದ ಸಂಜಯ ವೃತದಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘದ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಮೋಟಾರ್ ಬೈಕ್ ರ್‍ಯಾಲಿಯೂ ನಡೆಯಿತು.

ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಡೆದ ಮೋಟಾರ್ ಬೈಕ್ ರ್‍ಯಾಲಿಯೂ ಮಂಡ್ ನಗರದ ಸಂಜಯ ವೃತ್ತದಿಂದ ಆರಂಭಗೊಂಡು ಎಂಸಿ ರಸ್ತೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ರಸ್ತೆ 10 ಅಡಿ ರಸ್ತೆಯಿಂದ ನಂದ ವೃತ್ತದವರೆಗೂ ಸಾಗಿ ಮಹಾವೀರ ವೃತ್ತದ ಮೂಲಕ ಸಂಜಯ ವೃತ್ತದಲ್ಲಿ ಅಂತ್ಯಗೊಂಡಿತು.

ಆರ್ ಟಿ ಓ ಇನ್ಸ್ಪೆಕ್ಟರ್ ಬಸವರಾಜುರವರು ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಮೋಟಾರ್ ಬೈಕ್ ಜಾಥಾ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಸುಕನ್ಯಾ ನಾಗರಾಜು ಮಾತನಾಡಿ, ಮೇ 31 ವಿಶ್ವ ತಂಬಾಕು ವಿರೋಧಿ ದಿನದ ಉದ್ದೇಶ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಆದ್ಯತೆಯಾಗಿದೆ ಎಂದರು.

ಮೇ 1988 ರಂದು ವಿಶ್ವ ಸಂಸ್ಥೆ ವಿಶ್ವ ತಂಬಾಕು ರಹಿತ ದಿನವನ್ನು ಮೊದಲು ಜಾರಿಗೆ ತಂದಿತು. ತಂಬಾಕು ಸೇವನೆಯಿಂದ ಪ್ರತಿವರ್ಷ 6-8 ಮಿಲಿಯನ್ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಪರೋಕ್ಷ ಸೇವನೆಯಿಂದ 1-2 ಮಿಲಿಯನ್ ಜನರು ಸಾವಿಗೀಡಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು, ಬಾಯಿಯ ಕ್ಯಾನ್ಸರ್, ವಸಡಿನ ಸಮಸ್ಯೆ ಸೇರಿದಂತೆ ಇನ್ನಿತರ ರೋಗಗಳು ಬರುತ್ತವೆ. ಆದ್ದರಿಂದ ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಮನೆಮನೆಗೂ ತಲುಪಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘದ ನಿರ್ದೇಶಕರಾದ ಡಾ. ಧರ್ಮೇಂದ್ರ, ಹಿರಿಯ ದಂತ ವೈದ್ಯರುಗಳಾದ ಡಾ. ಚಂದ್ರಶೇಖರ್, ಡಾ. ರೂಪ, ಡಾ. ಪ್ರಸಾದ್, ಡಾ. ಎಚ್.ಆರ್. ಅರುಣಾನಂದ, ಡಾ. ನಾಗರಾಜು, ಡಾ. ನವೀನ್, ಡಾ. ಯಶಸ್ವಿನಿ, ಡಾ. ಭವ್ಯ, ಡಾ. ಪ್ರತಿಭಾ ರಾಣಿ, ಡಾ. ಪ್ರತಿಭಾ ಡಾ. ಸ್ವಾಮಿ, ಡಾ. ವೇಣುಗೋಪಾಲ್ ಸೇರಿದಂತೆ ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!