Thursday, November 19, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವ ಹಣಕಾಸು ನಿರ್ವಹಣಾ ಸಂಸ್ಥೆಗಳಾಗಿ ಮಾರ್ಪಾಡುಗೊಳಿಸಲು ಸಿಎಂಗೆ ಮನವಿ

ವಿಲೀನದ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವ ಹಣಕಾಸು ನಿರ್ವಹಣಾ ಸಂಸ್ಥೆಗಳಾಗಿ ಮಾರ್ಪಾಡುಗೊಳಿಸಿ ಆ ಮೂಲಕ ದುಬಾರಿ ಶುಲ್ಕ ವಿಧಿಸುವುದು ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ರಾಜ್ಯ ಖಜಾಂಚಿ ಅಭಯಾ ದಿವಾಕರ್ ಹಾಗೂ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಅಪೂರ್ವ ಅವರಿದ್ದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಪ್ರಮುಖವಾಗಿ ಪಠ್ಯ ಪುಸ್ತಕಗಳಲ್ಲಿ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ ಆಶಯಗಳನ್ನು ಕಾಪಾಡಬೇಕು. ಇದರೊಂದಿಗೆ ಹಾಸ್ಟೆಲ್ ಸಮಸ್ಯೆಗಳು, ವಿದ್ಯಾರ್ಥಿವೇತನ ವಿಳಂಬ, ಶುಲ್ಕ ಏರಿಕೆ, ಎನ್.ಇ.ಪಿ.- 20 ಯಿಂದ ಉಂಟಾಗಿರುವ ಗೊಂದಲಗಳು ಹಾಗೂ ಇತರೆ ಶೈಕ್ಷಣಿಕ ಸವಾಲುಗಳ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ನಿಯೋಗವು ಅವರ ಮುಂದೆ ಮಂಡಿಸಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ