ಕೆ.ಆರ್.ಪೇಟೆ ತಾಲೂಕು ನೂತನ ವೈದ್ಯಾಧಿಕಾರಿಯಾಗಿ ಡಾ.ಶಶಿಧರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕೆ.ಆರ್.ಪೇಟೆ ತಾಲೂಕು ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಶಿವಕುಮಾರ್ ಬಗ್ಗೆ ಸಿಬ್ಬಂದಿ ಮತ್ತು ವೈದ್ಯರ ವೃಂದದಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆ, ಅಲ್ಲದೇ ಅವರು ಸೇವಾ ಹಿರಿತನದಲ್ಲಿ ಕಿರಿಯರಾಗಿರುವುದನ್ನು ಪರಿಗಣಿಸಿ ಸರ್ಕಾರವು ಅವರ ಪ್ರಭಾರವನ್ನು ಹಿಂಪಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಶಶಿಧರ್ ಡಿ.ಕೆ ಅವರ ಜೇಷ್ಟತೆಯನ್ನು ಪರಿಗಣಿಸಿದ ಸರ್ಕಾರ, ಆಸ್ಪತ್ರೆಯ ನೂತನ ವೈದ್ಯಾಧಿಕಾರಿಯನ್ನಾಗಿ ನೇಮಿಸಿದೆ. ಅಲ್ಲದೇ ಯಾವುದೇ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕ ದೂರುಗಳಿಗೆ ಆಸ್ಪದ ನೀಡದಂತೆ ಎಚ್ಚರ ವಹಿಸಿ ಕಾರ್ಯ ನಿರ್ವಹಿಸಲು ಸೂಚಿಸಿದೆ.




