Monday, September 16, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತುರ್ತು ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ

ಮಂಡ್ಯ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ರವರು 5 ತಾಲೂಕಿನ 2023-24ನೆ ಸಾಲಿನ ತುರ್ತು ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಿದರು.

ಕೆಆರ್ ಪೇಟೆ ತಾಲೂಕಿನಲ್ಲಿ ಕೊಟಗಹಳ್ಳಿ, ಹೆಮ್ಮಡಹಳ್ಳಿ, ಹಂಗರಮುದ್ದನಹಳ್ಳಿ, ತೊಳಸಿ ಗೇಟ್, ಸಾಸಲು, ಸಾಸಲು ಕೊಪ್ಪಲು, ಮುರುಕನಹಳ್ಳಿ ಮತ್ತು ಮಾದಾಪುರ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿ, ನಾಗರಘಟ್ಟ ಗ್ರಾಮದಲ್ಲಿ ಹಾಲಿ ಇರುವ ಕೊಳವೆ ಬಾವಿಯನ್ನು ರೀಡ್ರಿಲ್ ಮಾಡುವ ಕಾಮಗಾರಿ, ನಾಯಕನಹಳ್ಳಿ ಗ್ರಾಮದಲ್ಲಿ ರೈಸಿಂಗ್ ಮೈನ್ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಒಟ್ಟು 15 ಲಕ್ಷ ರೂ ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಯಿತು.

ಮದ್ದೂರು ತಾಲೂಕಿನಲ್ಲಿ ಭಾರತೀನಗರ, ಕೋಡಿದೊಡ್ಡಿ ಗ್ರಾಮದಲ್ಲಿ ಕೊಳವೆ ನೀರು ಸರಬರಾಜು ಯೋಜನೆ ಸುಧಾರಣೆ ಕಾಮಗಾರಿ, ಮಹನವಮಿದೊಡ್ಡಿ ಗ್ರಾಮದಲ್ಲಿ ಹಾಲಿ ಕರೆದಿರುವ ಕೊಳವೆ ಬಾವಿಯಿಂದ ಮೇಜರ್ ಟ್ಯಾಂಕ್ ರವರಿಗೆ ಪೈಪ್ ಲೈನ್ ಕಾಮಗಾರಿ, ಡಿ ಮಲ್ಲಿಗೆರೆ ಗ್ರಾಮದಲ್ಲಿ ಕೊಳವೆ ನೀರು ಸರಬರಾಜು ಯೋಜನೆಗೆ ಕೊಳವೆಬಾವಿ ಕೊರೆದು ಪೈಪ್ ಲೈನ್ ಅಳವಡಿಸುವ ಕಾಮಗಾರಿ ಒಟ್ಟು 14.28 ಲಕ್ಷ ರೂ ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಯಿತು.

ಪಾಂಡವಪುರ ತಾಲೂಕಿನಲ್ಲಿ ನಾರ್ತ್ ಬ್ಯಾಂಕ್, ಹೊಸಯರಗನಹಳ್ಳಿ, ಮಾಣಿಕ್ಯನಹಳ್ಳಿ, ಶಂಭೂನಹಳ್ಳಿ, ಕಾಡೇನಹಳ್ಳಿ, ಕಟ್ಟೇರಿ, ಲಕ್ಷ್ಮಿಸಾಗರ, ಬಳ್ಳಾಳೆ, ಸಿಂಗಾಪುರ, ನಾರಣಾಪುರ, ಮೇಲುಕೋಟೆ ಗ್ರಾಮಗಳಲ್ಲಿ ಒಟ್ಟು 14 ಲಕ್ಷ ರೂ ಅಂದಾಜು ಮೊತ್ತದಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿಗೆ ಅನುಮೋದನೆ ನೀಡಲಾಯಿತು.

ಮಳವಳ್ಳಿ ತಾಲೂಕಿನಲ್ಲಿ ಕ್ಯಾತನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಯಿಂದ ಓ.ಹೆಚ್.ಟಿ ವರೆಗೆ ಏರು ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ, ಹೊಸಪುರ, ರಾಮಂದೂರು, ಜೂಗನಹಳ್ಳಿ, ಕಿರುಗಾವಲು ಮತ್ತು ಮಾರಗೌಡನಹಳ್ಳಿ ಗ್ರಾಮಗಳಲ್ಲಿ ಕೊಳವೆ ನೀರು ಸರಬರಾಜು ಯೋಜನೆಗೆ ಕೊಳವೆಬಾವಿ ಕೊರೆಯುವುದು, ಬಸವನಹಳ್ಳಿ ಮತ್ತು ಹೊಸದೊಡ್ಡಿ ಗ್ರಾಮದಲ್ಲಿ ಕಿರು ನೀರು ಸರಬರಾಜು ಯೋಜನೆಗೆ ಕೊಳವೆಬಾವಿ ಕೊರೆಯುವುದು ಒಟ್ಟು 14 ಲಕ್ಷ ರೂ ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಯಿತು.

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಗಾಮನಹಳ್ಳಿ, ವೇಳಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಪುನಶ್ಚೇನ ಕಾಮಗಾರಿ, ಕುಡಿಯಾಲ, ಬೆಳವಾಡಿ ಗ್ರಾಮ ಪರಿಮಿತಿಯಲ್ಲಿ ಕೊಳವೆಬಾವಿ ಕೊರೆಯುವ ಕಾಮಗಾರಿ, ತಡಗವಾಡಿ ಗ್ರಾಮದಲ್ಲಿ ಹೊಸದಾಗಿ ಕೊರೆದ ಕೊಳವೆ ಬಾವಿಗೆ ಪಂಪ್ ಮೋಟರ್ ಅಳವಡಿಸುವ ಕಾಮಗಾರಿ, ದೊಡ್ಡಹಾರೋಹಳ್ಳಿ ಗ್ರಾಮದಲ್ಲಿ ಕೊಳವೆಬಾವಿ ಕೊರೆಯುವ ಹಾಗೂ ಪೈಪ್ಲೈನ್ ಕಾಮಗಾರಿ ಒಟ್ಟು 14 ರೂ ಲಕ್ಷ ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಯಿತು.

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುವ ಕೆಲವು ಟೆಂಡರ್ ದಾರರು ಸರಿಯಾಗಿ ನಿರ್ವಹಿಸುತ್ತಿಲ್ಲ ಹಾಗೂ ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಎಂದು ಸಭೆಯಲ್ಲಿ ಚರ್ಚಿಸಿದಾಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಲ್ಲಾ ಶುದ್ಧ ಕುಡಿಯುವ ನೀರಿನ ಟೆಂಡರ್ ದರಾರನ್ನು ಕರೆದು ಸಭೆ ನಡೆಸಿ ಸೂಚನೆ ನೀಡಲಾಗುವುದು. ಘಟಕಗಳನ್ನು ಸರಿಯಾಗಿ ನಿರ್ವಹಿಸದಿದ್ದಲಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ತಮ್ಮಣ್ಣ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿ ಎಸ್. ಹೆಚ್ ನಿರ್ಮಲಾ ಹಾಗೂ ಎಲ್ಲಾ ತಾಲೂಕಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಕುಡಿಯುವ ನೀರು) ಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!