Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಾಧನೆಗೆ ಆಯುಷ್ಯ-ಆರೋಗ್ಯ ಅತ್ಯವಶ್ಯಕ – ಅರಳಿ ನಾಗರಾಜ್

ಮನುಷ್ಯ ಸಾಧನೆ ಮಾಡಲು ಆಯುಷ್ಯ, ಆರೋಗ್ಯ, ಅವಕಾಶ ಅತ್ಯವಶ್ಯಕ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

ಮಂಡ್ಯ ನಗರದ ವಿದ್ಯಾ ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕೊನೆ ಆಷಾಢ ಶುಕ್ರವಾರ ಪ್ರಯುಕ್ತ ಧಾರ್ಮಿಕ ಮತ್ತು ಉಚಿತ ಆರೋಗ್ಯ ತಪಾಸಣಾ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಮನುಷ್ಯ ಸಾಧನೆ ಮಾಡಲು ಆರೋಗ್ಯ ಪ್ರಮುಖ ಪ್ರೇರಣೆಯಾಗಿರುತ್ತದೆ, ಆಯುಷ್ಯ ,ಜೀವ ನಮ್ಮ ಕೈಲಿ ಇಲ್ಲ, ಇರುವ ಆಯುಷ್ಯದಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ಬಾಳುವುದು ನಮ್ಮ ಕೈಲಿದೆ, ನಿರ್ಲಕ್ಷ್ಯ ಮಾಡಿದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು  ನುಡಿದರು.

ವೃದ್ಯಾಪ್ಯದಲ್ಲಿ ಆರೋಗ್ಯವಾಗಿರಬೇಕಾದರೆ ಯೌವ್ವನದಲ್ಲಿ ಶಿಸ್ತುಬದ್ಧ ಜೀವನವನ್ನು ನಡೆಸಬೇಕು, ಆರೋಗ್ಯವನ್ನು ಕಾಪಾಡಿಕೊಂಡಿರಬೇಕು, ಇಂತಹ ಸಂದೇಶವನ್ನು ನಮ್ಮ ಹಿರಿಯರು ಹೇಳುತ್ತಿದ್ದರು, ನನಗೆ ಈಗ 73 ವರ್ಷವಾಗಿದೆ, ಗಂಟೆಗಟ್ಟಲೆ ನಿಂತು ಮಾತನಾಡಿಲಿಕ್ಕೆ ಸಾಧ್ಯವಿದೆ, ಹಿರಿಯರಿಂದ ಬಂದ ಶುಗರ್ ಬಿಟ್ಟರೆ ನಮ್ಮ ಆರೋಗ್ಯ ಚನ್ನಾಗಿದೆ ಎಂದು ಕಿವಿಮಾತೇಳಿದರು.

ವಕೀಲ ಎಂ .ಗುರುಪ್ರಸಾದ್ ಮಾತನಾಡಿ, ಇಂದು ನಮ್ಮ ನಗರಕ್ಕೆ ಕನ್ನಡದಲ್ಲಿ ನ್ಯಾಯ ತೀರ್ಪು ನೀಡಿದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜು ಬಂದಿರುವುದು ಶ್ಲಾಘನೀಯ, ಇಂತಹವರ ಮಾರ್ಗದರ್ಶನದಲ್ಲಿ ಬದುಕನ್ನು ಸಾಗಿಸೋಣ ಎಂದು ನುಡಿದರು.
ಇದೇ ಸಂದರ್ಭದಲ್ಲಿ ತಾರಾ ಡಯೋಗ್ನೋಸ್ಟಿಕ್ ಸೆಂಟರ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಡಾ.ಅಪ್ಪಾಜಿ ಸ್ಮಾರಕ ದಂತ ಆಸ್ಪತ್ರೆಯಿಂದ ದಂತ ತಪಾಸಣೆ, ತಾರಾ ಕಣ್ಣಿನ ಆಸ್ಪತ್ರೆಯಿಂದ ನೇತ್ರ ತಪಾಸಣೆ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಪೀಠಾಧ್ಯಕ್ಷ ಶಾಂತಕುಮಾರ್ ಸ್ವಾಮೀಜಿ, ನಗರಸಭಾ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ವೈದ್ಯರಾದ ಡಾ.ಚಂದ್ರಶೇಖರ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ