Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅರಿವು ಸಾಲ ಯೋಜನೆ ; ಸಿಇಟಿ ವಿದ್ಯಾರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನ

ಮಂಡ್ಯ ಜಿಲ್ಲೆಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ಅರಿವು ವಿದ್ಯಾಭ್ಯಾಸ ಯೋಜನೆಯಡಿ ವಿದ್ಯಾಭ್ಯಾಸ ಸಾಲವನ್ನು ನೀಡಲಾಗುತ್ತಿದ್ದು, ಆಸಕ್ತಿರಿಂದ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಆಂಗ್ಲೋ ಇಂಡಿಯನ್ ಸಮುದಾಯದವರು ಹೊಸದಾಗಿ (ಸಿಇಟಿ/ನೀಟ್ ಮುಖಾಂತರ) ಮೂಲಕ ಎಂ.ಬಿ.ಬಿ.ಎಸ್/ಬಿ.ಡಿ.ಎಸ್/ಆಯುಷ್/ಬ್ಯಾಚುಲ‌ರ್ ಆಪ್ ಆರ್ಕಿಟೆಕ್ಟರ್/ಬ್ಯಾಚುಲರ್ ಆಪ್ ಇಂಜಿನಿಯರಿಂಗ್/ಬ್ಯಾಚುಲರ್ ಆಪ್ ಟೆಕ್ನಾಲಜಿ ಕೋರ್ಸ್‌ಗಳ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆಸಕ್ತಿ ವಿದ್ಯಾರ್ಥಿಗಳು ಕೂಡಲೇ https://kmdconline.karnataka.gov.in/ ನ್ನು ತೆರೆದು ಲಿಂಕ್‌ ಗೆ ಕ್ಲಿಕ್ ಮಾಡಿ ನಂತರ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿಮಾಡಿ ಅದರ ಸಾಪ್ಟ್ ಕಾಪಿಯನ್ನು ಪ್ರಿಂಟ್ ತೆಗೆದು ಇತರೆ ದಾಖಲಾತಿಗಳೊಂದಿಗೆ ಮಂಡ್ಯ ಜಿಲ್ಲಾ ಕಛೇರಿಗೆ ಕೊನೆಯ ದಿನಾಂಕ ಮೇ 23,2025 ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮಂಡ್ಯ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಮೌಲಾನ್ ಅಜಾದ್ ಭವನ, 1ನೇ ಮಹಡಿ, ವಿವೇಕಾನಂದನಗರ, ಬೀಡಿ ಕಾರ್ಮಿಕರ ಕಾಲೋನಿ, ಚಿಕ್ಕ ಮಂಡ್ಯ ಕೆರೆ ಅಂಗಳ, ಮಂಡ್ಯನಗರ. ದೂರವಾಣಿ ಸಂಖ್ಯೆ-08232-220186 ಅನ್ನು ಕಛೇರಿ ವೇಳೆ ಸಂಪರ್ಕಿಸಬಹುದಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ